ಅರ್ಜುನ್ ಸರ್ಜಾ ಮಗಳ 'ಪ್ರೇಮಬರಹ' ಮುಕ್ತಾಯ
ಕನ್ನಡದ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಿರ್ದೇಶನ ಮಾಡಿರುವ 'ಪ್ರೇಮಬರಹ' ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಅರ್ಜುನ್ ಸರ್ಜಾರ ಪುತ್ರಿಯನ್ನ ಕನ್ನಡ ಸಿನಿಮಾರಂಗಕ್ಕೆ ಪರಿಚಯಿಸುವ ಹಿನ್ನಲೆಯಲ್ಲಿ ನಿರ್ದೇಶನದ ಜೊತೆಯಲ್ಲಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿಕೊಂಡಿದ್ದಾರೆ ಅರ್ಜುನ್ ಸರ್ಜಾ.
ಇಡೀ ಸರ್ಜಾ ಫ್ಯಾಮಿಲಿಯ ನಾಯಕರೆಲ್ಲರೂ ಅಭಿನಯಿಸಿರುವ 'ಪ್ರೇಮಬರಹ' ಚಿತ್ರ ಶೂಟಿಂಗ್ ಇಂದು (ಡಿಸೆಂಬರ್ 8) ರಂದು ಕಂಪ್ಲೀಟ್ ಆಗಿದೆ. ಅದ್ದೂರಿ ಹಾಡಿನ ಚಿತ್ರೀಕರಣದ ಜೊತೆಗೆ ಕುಂಬಳಕಾಯಿ ಹೊಡೆದಿರುವ ಅರ್ಜುನ್ ಸರ್ಜಾ ಮತ್ತು ಚಿತ್ರತಂಡ ಸಿನಿಮಾವನ್ನ ಕನ್ನಡ ಹಾಗೂ ತಮಿಳಿನಲ್ಲಿ ರಿಲೀಸ್ ಮಾಡ್ತಿದೆ.

ಚಿತ್ರೀಕರಣದ ಜೊತೆಯಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನೂ ಶುರು ಮಾಡಿರುವ ಸಿನಿಮಾ ಟೀಂ ಇನ್ನೂ ಕೆಲವೇ ದಿನಗಳಲ್ಲಿ ಚಿತ್ರವನ್ನ ಥಿಯೇಟರ್ ನಲ್ಲಿ ನೋಡಬಹುದು ಎನ್ನುವ ಸೂಚನೆ ಕೊಟ್ಟಿದೆ. ಕೊನೆಯ ದಿನದ ಶೂಟಿಂಗ್ ನಲ್ಲಿ ನಟಿ ಐಶ್ವರ್ಯ ಸರ್ಜಾ, ನಟ ಚಂದನ್ ಕುಮಾರ್ ಹಾಗೂ ಅರ್ಜುನ್ ಸರ್ಜಾ ಪತ್ನಿ ಆಶಾ ರಾಣಿ ಕೂಡ ಸೆಟ್ ಗೆ ಭೇಟಿ ನೀಡಿದ್ದಾರೆ.

'ಪ್ರೇಮಬರಹ' ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಮತ್ತು ಅರ್ಜುನ್ ಸರ್ಜಾ ಒಂದೇ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











