ಮಾವನ ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಧ್ರುವಾ
ನಟ ಧ್ರುವ ಸರ್ಜಾ ಸಿನಿಮಾಗಳ ಕೆಲಸಗಳ ಜೊತೆಗೆ ಕುಟುಂಬದ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗುವುದನ್ನು ಮಿಸ್ ಮಾಡುವುದಿಲ್ಲ. ಅದೇ ರೀತಿ ಈಗ ಅವರು ಮಾವನ ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ.
ನಟ ಅರ್ಜುನ್ ಸರ್ಜಾ ದ್ವಿತೀಯ ಪುತ್ರಿ ಅಂಜನಾ ಹುಟ್ಟುಹಬ್ಬವನ್ನು ಇಡೀ ಕುಟುಂಬ ಆಚರಣೆ ಮಾಡಿದೆ. 'ಪೋಗರು' ಸಿನಿಮಾದ ಚಿತ್ರೀಕರಣದ ನಡುವೆ ಕಾರ್ಯಕ್ರಮಕ್ಕೆ ಧ್ರುವ ಹೋಗಿದ್ದಾರೆ. ಚೈನೈನ ಸರ್ಜಾ ನಿವಾಸದಲ್ಲಿ ಕಾರ್ಯಕ್ರಮ ನಡೆದಿದೆ.

ಇತ್ತೀಚಿಗೆ ತಾಯಿ ಹಾಗೂ ಪತ್ನಿ ಆಶಾರಾಣಿ ಹುಟ್ಟುಹಬ್ಬ ಆಚರಿಸಿದ್ದ ಅರ್ಜುನ್ ಸರ್ಜಾ ಈಗ ಮಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.

ಅರ್ಜುನ್ ಸರ್ಜಾ ಮೊದಲ ಮಗಳು ಐಶ್ವರ್ಯ ಈಗಾಗಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲಿ 'ಪ್ರೇಮಬರಹ' ಚಿತ್ರದ ಮೂಲಕ ಅವರು ಸಿನಿ ಪಡೆದ ಣ ಶುರು ಮಾಡಿದ್ದರು. ಅಕ್ಕನ ರೀತಿ ಅಂಜನಾ ಕೂಡ ಚಿತ್ರರಂಗಕ್ಕೆ ಬರುತ್ತಾರ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ.
More from Filmibeat
English summary
South indian popular actor Arjun Sarja second daughter Anjana Arjun celebrating her birthday.


Click it and Unblock the Notifications











