For Quick Alerts
  ALLOW NOTIFICATIONS  
  For Daily Alerts

  ಚಿರು ಸರ್ಜಾ ನೆನೆದು ಭಾವುಕರಾದ ನಟ ಅರ್ಜುನ್ ಸರ್ಜಾ

  |

  ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ನಿಧನರಾಗಿ ಆರು ತಿಂಗಳು ಕಳೆದಿದೆ. ಚಿರು ಸರ್ಜಾ ಈಗಲೂ ನಮ್ಮೊಂದಿಗೆ ಇಲ್ಲ ಎಂದು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಜಾ ಕುಟುಂಬವಂತೂ ಚಿರು ಅವರನ್ನು ಸದಾ ನೆನಪಿಸಿಕೊಳ್ಳುತ್ತಲೇ ಇದೆ.

  Arjun Sarjaಗೆ ಇನ್ನೂ ಮರೆಯಾಗಿಲ್ಲ ಆ ನೋವು | Filmibeat Kannada

  ನಟ ಅರ್ಜುನ್ ಸರ್ಜಾ ಅವರು ಇದ್ದಕ್ಕಿದ್ದಂತೆ ಚಿರು ಸರ್ಜಾ ಅವರನ್ನು ನೆನೆದು ಭಾವುಕರಾಗಿ ಇನ್ಸ್ಟಾಗ್ರಾಂನಲ್ಲಿ ಫೋಟೋವೊಂದು ಹಂಚಿಕೊಂಡಿದ್ದಾರೆ.

  ಚಿರಂಜೀವಿ ಸರ್ಜಾ ಸಮಾಧಿ ನಿರ್ಮಾಣಕ್ಕೆ ಶಂಕುಸ್ಥಾಪನೆ; ಕುಟುಂಬದವರಿಂದ ಪೂಜೆಚಿರಂಜೀವಿ ಸರ್ಜಾ ಸಮಾಧಿ ನಿರ್ಮಾಣಕ್ಕೆ ಶಂಕುಸ್ಥಾಪನೆ; ಕುಟುಂಬದವರಿಂದ ಪೂಜೆ

  ''ಚಿರು ಮಗನೇ ನಿನ್ನ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಂದ್ರೆ ಅದನ್ನು ಹೇಳಲು ಸಹ ಸಾಧ್ಯವಾಗುತ್ತಿಲ್ಲ'' ಎಂದು ಆ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ. ಅರ್ಜುನ್ ಅವರ ಈ ಪೋಸ್ಟ್‌ ಕಂಡು ನೆಟ್ಟಿಗರು ಸಹ ಅದೇ ಅಭಿಪ್ರಾಯ ಹೇಳುತ್ತಿದ್ದಾರೆ.

  ಅಂದ್ಹಾಗೆ, ಚಿರು ಸರ್ಜಾ ಅಗಲಿದ ಬಳಿಕ ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಜೂನಿಯರ್ ಚಿರು ಆಗಮನದಿಂದ ಸರ್ಜಾ ಕುಟುಂಬದಲ್ಲಿ ಸಂತಸ ಮೂಡಿದ್ದು, ಆ ಪುಟ್ಟ ಕಂದಮ್ಮನ ರೂಪದಲ್ಲಿ ಚಿರು ಸರ್ಜಾ ಅವರನ್ನು ನೋಡಿಕೊಳ್ಳುತ್ತಿದ್ದಾರೆ.

  ಚಿರು ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲಿ ಸಮಾಧಿ ನಿರ್ಮಾಣ ಮಾಡಲು ಧ್ರುವ ಸರ್ಜಾ ಇತ್ತೀಚಿಗಷ್ಟೆ ಪೂಜೆ ಸಹ ಮಾಡಿದ್ದಾರೆ. ಧ್ರುವ ಸರ್ಜಾ, ಪತ್ನಿ ಪ್ರೇರಣಾ, ಧ್ರುವ ತಂದೆ-ತಾಯಿ ಅಜ್ಜಿ ಲಕ್ಷ್ಮೀದೇವಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಟ ಚಿರಂಜೀವಿ ಸರ್ಜಾ ಜೂನ್ 7ರಂದು ಹೃದಯಾಘಾತದಿಂದ ಸಾವಿನಪ್ಪಿದ್ದರು.

  20 ವರ್ಷದ ನಂತರ ಚಿರು ಮಗನನ್ನು ಹೀರೋ ಆಗಿ ನಾನೇ ಲಾಂಚ್ ಮಾಡ್ತೀನಿ: ಅರ್ಜುನ್ ಸರ್ಜಾ20 ವರ್ಷದ ನಂತರ ಚಿರು ಮಗನನ್ನು ಹೀರೋ ಆಗಿ ನಾನೇ ಲಾಂಚ್ ಮಾಡ್ತೀನಿ: ಅರ್ಜುನ್ ಸರ್ಜಾ

  ಇನ್ನು ಮೇಘನಾ ರಾಜ್, ಅವರ ಮಗ, ತಂದೆ ಸುಂದರ್ ಹಾಗೂ ತಾಯಿ ಪ್ರಮೀಳಾ ಜೋಷಾಯ್ ಅವರಿಗೆ ಕೊರೊನಾ ವೈರಸ್ ತಗುಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

  English summary
  Action king Arjun Sarja Shares Emotional Post on Chiranjeevi Sarja in Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X