ದರ್ಶನ್ 'ರಿಯಲ್ ಹೀರೋ', 'ಚಿನ್ನದಂತ ವ್ಯಕ್ತಿ' ಎಂದ ಸ್ಟಾರ್ ನಟ, ಯಾರದು?

By Bharath Kumar

Recommended Video

ದರ್ಶನ ಬಗ್ಗೆ ಅರ್ಜುನ್ ಸರ್ಜಾ ಏನ್ ಹೇಳ್ತಾರೆ ಗೊತ್ತಾ ? | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ದೊಡ್ಡ ಹೀರೋ. ತೆರೆಮೇಲೆ ಮಾತ್ರವಲ್ಲ, ತೆರೆ ಹಿಂದೆಯೂ ದರ್ಶನ್ ಹೀರೋ ಎನ್ನುವುದಕ್ಕೆ ಸಾಕಷ್ಟು ಉದಾಹರಣೆ ಇವೆ.

ಇದನ್ನ ಅನೇಕರು ಒಪ್ಪಿಕೊಂಡಿದ್ದಾರೆ. ಕೆಲವರು ಒಪ್ಪಿಕೊಳ್ಳದವರು ಇದ್ದಾರೆ ಬಿಡಿ. ಅದರಲ್ಲೂ ದರ್ಶನ್ ಜೊತೆ ಸಿನಿಮಾ ಮಾಡಿದ ಮೇಲಂತೂ ಸಂಪೂರ್ಣವಾಗಿ ಅವರ ಮನಸ್ಸಿನಲ್ಲಿ ದರ್ಶನ್ ಉಳಿದು ಬಿಡುತ್ತಾರೆ. ಅವರ ಬಗ್ಗೆ ಇದ್ದ ಭಾವನೆಗಳು ಬೇರೆಯದ್ದೇ ರೂಪ ಪಡೆದುಕೊಳ್ಳುತ್ತೆ.

ಈಗ ಇಂತಹದ್ದೇ ಸಂದರ್ಭಕ್ಕೆ ದಕ್ಷಿಣ ಭಾರತದ ಖ್ಯಾತ ನಟರೊಬ್ಬರು ಸಾಕ್ಷಿಯಾಗಿದ್ದಾರೆ. ದರ್ಶನ್ 'ರಿಯಲ್ ಹೀರೋ', 'ಚಿನ್ನದಂತ ವ್ಯಕ್ತಿ' ಎಂದ ಸ್ಟಾರ್ ನಟ ಕಾಮೆಂಟ್ ಮಾಡಿದ್ದಾರೆ. ಯಾರದು? ಮುಂದೆ ಓದಿ....

ದಾಸನ ಬಗ್ಗೆ ಅರ್ಜುನ್ ಸರ್ಜಾ ಮೆಚ್ಚುಗೆ

ದಾಸನ ಬಗ್ಗೆ ಅರ್ಜುನ್ ಸರ್ಜಾ ಮೆಚ್ಚುಗೆ

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಅರ್ಜುನ್ ಅರ್ಜಾ, ಡಿ-ಬಾಸ್ ದರ್ಶನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ದರ್ಶನ್ ಒಬ್ಬ ರಿಯಲ್ ಹೀರೋ, ಚಿನ್ನದಂತ ವ್ಯಕ್ತಿ'' ಎಂದಿದ್ದಾರೆ.

ದರ್ಶನ್ ಗೆ ಥ್ಯಾಂಕ್ಸ್

ದರ್ಶನ್ ಗೆ ಥ್ಯಾಂಕ್ಸ್

ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಸರ್ಜಾ ಅಭಿನಯದ ಮೊದಲ ಕನ್ನಡ ಸಿನಿಮಾ 'ಪ್ರೇಮ ಬರಹ'ದಲ್ಲಿ ಹಾಡೊಂದಕ್ಕೆ ದರ್ಶನ್ ಹೆಜ್ಜೆ ಹಾಕಿದ್ದರು. ಈ ಹಾಡು ಸೂಪರ್ ಹಿಟ್ ಆಗಿತ್ತು. ಈ ಬಗ್ಗೆ ಮಾತನಾಡಿದ ಅರ್ಜುನ್ ಸರ್ಜಾ ''ದರ್ಶನ್ ಗೆ ನಿಜಕ್ಕೂ ಥ್ಯಾಂಕ್ಸ್. ಮಜಾ ಟಾಕೀಸ್ ಮೂಲಕ ದರ್ಶನ್ ಗೆ ಧನ್ಯವಾದಗಳು ಹೇಳೋಕೆ ಇಷ್ಟ ಪಡ್ತಿನಿ'' ಎಂದರು.

ಚಕ್ರವರ್ತಿಯ ವ್ಯಕ್ತಿತ್ವ ಗುಣಗಾನ ಮಾಡಿದ ಸರ್ಜಾ

ಚಕ್ರವರ್ತಿಯ ವ್ಯಕ್ತಿತ್ವ ಗುಣಗಾನ ಮಾಡಿದ ಸರ್ಜಾ

''ದರ್ಶನ್ ವಂಡರ್ ಫುಲ್ ವ್ಯಕ್ತಿ. ಅವರೊಬ್ಬ ಅದ್ಭುತ ಜಂಟಲ್ ಮ್ಯಾನ್. ತುಂಬ ಜನಕ್ಕೆ ಗೊತ್ತೋ ಗೊತ್ತಿಲ್ವೋ ಹೀ ಈಸ್ ರಿಯಲ್ ಹೀರೋ ಗೋಲ್ಡನ್ ಹಾರ್ಟೆಡ್ ಬಾಯ್'' ಎಂದು ಗುಣಗಾನ ಮಾಡಿದ್ರು.

ನನ್ನ ವೃತ್ತಿ ಜೀವನದಲ್ಲಿ ಕೆಲವೇ ವ್ಯಕ್ತಿ

ನನ್ನ ವೃತ್ತಿ ಜೀವನದಲ್ಲಿ ಕೆಲವೇ ವ್ಯಕ್ತಿ

''ನನ್ನ 30 ವರ್ಷದ ಸಿನಿಮಾ ವೃತ್ತಿ ಜೀವನದಲ್ಲಿ, ಎಲ್ಲೋ ಇಬ್ಬರು ಅಥವಾ ಇಬ್ಬರು ವ್ಯಕ್ತಿಗಳನ್ನ ಮಾತ್ರ ಆ ತರ ನೋಡಿದ್ದೀನಿ. ಅದರಲ್ಲಿ ದರ್ಶನ್ ಕೂಡ ಒಬ್ಬರು'' ಎಂದು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಚಿತ್ರಕೃಪೆ: ಡಿ ಕಂಪನಿ ದರ್ಶನ್ ಫ್ಯಾನ್ಸ್ ಕ್ಲಬ್

ಕುರುಕ್ಷೇತ್ರದಲ್ಲಿ 'ದುರ್ಯೋಧನ-ಕರ್ಣ'

ಕುರುಕ್ಷೇತ್ರದಲ್ಲಿ 'ದುರ್ಯೋಧನ-ಕರ್ಣ'

'ಪ್ರೇಮ ಬರಹ' ಹಾಡೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಅರ್ಜುನ್ ಸರ್ಜಾ ಮತ್ತು ದರ್ಶನ್, 'ಕುರುಕ್ಷೇತ್ರ' ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. 'ದುರ್ಯೋಧನ' ದರ್ಶನ್ ಮತ್ತು 'ಕರ್ಣ'ನಾಗಿ ಅರ್ಜುನ್ ಸರ್ಜಾ ಬಣ್ಣ ಹಚ್ಚಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ.

ಸರ್ಜಾ ಬಗ್ಗೆ ಮೆಚ್ಚಿಕೊಂಡಿದ್ದ ದಾಸ

ಸರ್ಜಾ ಬಗ್ಗೆ ಮೆಚ್ಚಿಕೊಂಡಿದ್ದ ದಾಸ

''ನಿಮ್ಮ ಜೊತೆ ಸಿನಿಮಾ ಮಾಡುವುದು ನನಗೆ ಖುಷಿ ನೀಡಿದೆ. ಒಬ್ಬ ಖಳನಾಯಕನ ಮಗನಾಗಿ ನಾಯಕನಾಗುವ ದಿಟ್ಟ ಹೆಚ್ಚೆ ಇಟ್ಟವರಲ್ಲಿ ನೀವು ಮೊದಲಿಗರು'' ಅರ್ಜುನ ಸರ್ಜಾ ಜೊತೆ ನಟಿಸಲು ಉತ್ಸುಕರಾಗಿದ್ದರು ದರ್ಶನ್.

More from Filmibeat

English summary
Action King Arjun Sarja speak about Challenging Star Darshan in maja talkies on Thursday (february 15th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X