ಮೊಮ್ಮಗನನ್ನು ನೋಡಲು ಚೆನ್ನೈನಿಂದ ಹೊರಟ ನಟ ಅರ್ಜುನ್ ಸರ್ಜಾ

By ಫಿಲ್ಮ್ ಡೆಸ್ಕ್

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮಗನನ್ನು ನೋಡಲು ಚಿರು ಸರ್ಜಾ ಮಾವ ಅರ್ಜುನ್ ಸರ್ಜಾ ಚೆನ್ನೈನಿಂದ ಹೊರಟಿದ್ದಾರೆ. ಮನೆಗೆ ಗಂಡು ಮಗು ಆಗಮಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅರ್ಜುನ್ ಸರ್ಜಾ, ಮೊಮ್ಮಗನನ್ನು ನೋಡಲು ಹೊರಟಿರಿವುದಾಗಿ ಹೇಳಿದ್ದಾರೆ. ಮೇಘನಾ ರಾಜ್ ಸೀಮಂತ ಸಮಾರಂಭದಲ್ಲಿ ಭಾಗಿಯಾಗಿದ್ದ ಅರ್ಜುನ್ ಸರ್ಜಾ ಬಳಿಕ ಚೆನ್ನೈಗೆ ವಾಪಸ್ ಆಗಿದ್ದರು.

Recommended Video

Arjun Sarja : ಚಿರು ಮಗನನ್ನು ನೋಡಲು ಚೆನ್ನೈನಿಂದ ಹೋರಟ ಅರ್ಜುನ್ ಸರ್ಜಾ | Kannada

ಸದ್ಯ ಚೆನ್ನೈನಲ್ಲಿರುವ ಅರ್ಜುನ್ ಸರ್ಜಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಮೇಘನಾ ರಾಜ್ ಗೆ ಗಂಡು ಮಗುವಾಗಿರುವ ವಿಚಾರ ತಿಳಿದು ತುಂಬಾ ಸಂತೋಷ ಪಟ್ಟಿದ್ದಾರೆ. ಅಲ್ಲದೆ ಕುಟುಂಬ ಸಮೇತ ಬೆಂಗಳೂರಿಗೆ ಹೊರಟಿದ್ದು, ಮಗು ರೂಪದಲ್ಲಿ ಬಂದಿರುವ ಚಿರುನನ್ನು ನೋಡಲು ಕಾತರರಾಗಿದ್ದಾರೆ. ಮುಂದೆ ಓದಿ..

ಚಿರು ಹುಟ್ಟಿದಾಗ ಚೆನ್ನೈಯಿಂದ ಓಡಿ ಬಂದಿದ್ದೆ

ಚಿರು ಹುಟ್ಟಿದಾಗ ಚೆನ್ನೈಯಿಂದ ಓಡಿ ಬಂದಿದ್ದೆ

36 ವರ್ಷಗಳ ಹಿಂದೆ ಚಿರು ಹುಟ್ಟಿದಾಗ ಚೆನ್ನೈನಲ್ಲಿ ಇದ್ದೆ. ಆಗ ಚಿರು ನೋಡಲು ಚೆನ್ನೈನಿಂದ ಬೆಂಗಳೂರಿಗೆ ಓಡಿ ಬಂದಿದ್ದೇ. ಈಗ ಅವನ ಮಗುವನ್ನು ನೋಡಲು ಬರುತ್ತಿದ್ದೇನೆ ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ. ಕುಟುಂಬದಲ್ಲಿ ಎಲ್ಲರಿಗೂ ತುಂಬಾ ಸಂತೋಷವಾಗಿದೆ ಎಂದು ಅರ್ಜುನ್ ಸರ್ಜಾ ಸಂತಸ ವ್ಯಕ್ತಪಡಿಸಿದರು.

4ತಿಂಗಳ ಬಳಿಕ ಕುಟುಂಬದಲ್ಲಿ ಸಂತಸ ಮನೆಮಾಡಿದೆ

4ತಿಂಗಳ ಬಳಿಕ ಕುಟುಂಬದಲ್ಲಿ ಸಂತಸ ಮನೆಮಾಡಿದೆ

ನಾಲ್ಕು ತಿಂಗಳ ಬಳಿಕ ನಮ್ಮ ಕುಟುಂಬದಲ್ಲಿ ಸಂತೋಷ ಮನೆ ಮಾಡಿದೆ. ಚಿರು ಮಗು ರೂಪದಲ್ಲಿ ವಾಪಸ್ ಬಂದಿದ್ದಾನೆ ಎಂದಿದ್ದಾರೆ. ಚಿರು ಇದ್ದಿದ್ದರೇ ಗಂಡು ಮಗುವಾಗಿದೆ ಮಾವ ಎಂದು ಜೋರಾಗಿ ಕೂಗಿ ಹೇಳುತ್ತಿದ್ದ. ನೆನಪಿಸಿಕೊಂಡರೆ ತುಂಬಾ ಬೇಸರವಾಗುತ್ತೆ. ಆದರೀಗ ಮಗು ರೂಪದಲ್ಲಿ ಬಂದು ಸಂತೋಷ ಪಡಿಸಿದ್ದಾನೆ ಎಂದಿದ್ದಾರೆ.

ನಾನು ತಾತನಾಗಿದ್ದೇನೆ

ನಾನು ತಾತನಾಗಿದ್ದೇನೆ

ಅಮ್ಮ ಮುತ್ತಜ್ಜಿ ಆಗಿದ್ದಾರೆ. ನಾನು ತಾತನಾಗಿದ್ದೇನೆ. ದುಃಖದಲ್ಲಿದ್ದ ಕುಟುಂಬಕ್ಕೆ ಸಂತೋಷ ತರಲು ಮಗು ಕಾರಣನಾಗಿದ್ದಾನೆ. ಎಲ್ಲಾ ಸಮಯದಲ್ಲೂ ನಮ್ಮ ಜೊತೆ ಇದ್ದು ಸಹಕರಿಸಿದ ಕರ್ನಾಟಕ ಜನರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಧ್ರುವ ಸರ್ಜಾ ಪ್ರತಿಕ್ರಿಯೆ

ಧ್ರುವ ಸರ್ಜಾ ಪ್ರತಿಕ್ರಿಯೆ

ಮನೆಗೆ ಜೂ.ಚಿರು ಆಗಮಿಸಿದ ಬಗ್ಗೆ ನಟ ಧ್ರುವ ಸರ್ಜಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಅಣ್ಣನಿಗೆ ಅತ್ತಿಗೆಗೆ ಗಂಡು ಮಗುವಾಗಿದೆ. ಅತ್ತಿಗೆ, ಮಗು ಇಬ್ಬರೂ ಸಹ ಆರಾಮಾಗಿದ್ದಾರೆ. ಎಲ್ಲರೂ ಅವರಿಗೆ ಆಶೀರ್ವಾದ ಮಾಡಬೇಕೆಂದು ಕರ್ನಾಟಕದ ಜನತೆಯಲ್ಲಿ ಕೇಳಿಕೊಳ್ಳುತ್ತೇನೆ. ಖುಷಿ ಹೆಚ್ಚಾಗಿದ್ದರಿಂದ ಮಗುವನ್ನು ಕೈಯಲ್ಲಿ ಹಿಡಿದ ತಕ್ಷಣದ ಅನುಭವ ಹೇಗಾಯಿತು ಎಂದು ಹೇಳಲು ಸಾಧ್ಯವಾಗಲ್ಲ. ಆ ಫೀಲ್ ಗೊತ್ತಾಗಲಿಲ್ಲ ಎಂದು ಹೇಳಿದ್ದಾರೆ.

More from Filmibeat

English summary
Actor Arjun Sarja Talks about Chiranjeevi Sarja and Meghana Raj Baby Boy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X