ಅರ್ಜುನ್ ಸರ್ಜಾ ಇಮೇಲ್, ಟ್ವಿಟ್ಟರ್, ಅಕೌಂಟ್ ಹ್ಯಾಕ್
Recommended Video

#metoo :ಅರ್ಜುನ್ ಸರ್ಜಾ ಇಮೇಲ್, ಟ್ವಿಟ್ಟರ್, ಅಕೌಂಟ್ ಹ್ಯಾಕ್ | FILMIBEAT KANNADA
ನಟ ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ಪ್ರಕರಣದ ಸಂಧಾನ ಮಾತು ಕತೆ ಕೆಲವು ಗಂಟೆಗಳಲ್ಲಿ ನಡೆಯಲಿದೆ. ಈ ನಡುವೆ ಸೈಬರ್ ಕ್ರೈಮ್ ನಲ್ಲಿ ಅರ್ಜುನ್ ಸರ್ಜಾ ಮ್ಯಾನೆಜರ್ ದೂರು ನೀಡಿದ್ದಾರೆ.
ಅರ್ಜುನ್ ಸರ್ಜಾ ಇಮೇಲ್, ಟ್ವಿಟ್ಟರ್, ಅಕೌಂಟ್ ಹ್ಯಾಕ್ ಆಗಿದೆ ಎಂದು ಅವರ ಮ್ಯಾನೆಜರ್ ಶಿವಾರ್ಜುನ್ ಸೈಬರ್ ಕ್ರೈಮ್ ಮೊರೆ ಹೋಗಿದ್ದಾರೆ. ಜೊತೆಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಮತ್ತೊಂದು ಕಡೆ ಶಿವಾರ್ಜುನ್ ಅವರಿಗೆ ಅನಾಮಿಕ ವ್ಯಕ್ತಿಯಿಂದ ಕರೆ ಬಂದಿದ್ದು, ಎರಡು ಕೋಟಿ ಹಣ ನೀಡುವಂತೆ ಕೇಳಿದ್ದಾನಂತೆ. ಶ್ರುತಿ ಹರಿಹರನ್ ಈ ಪ್ರಕರಣದ ಬಗ್ಗೆ ಬಾಯಿ ಮುಚ್ಚಿಕೊಂಡು ಇರಬೇಕು ಎಂದರೆ ಹಣ ನೀಡಬೇಕು ಎಂದು ಆ ವ್ಯಕ್ತಿ ಡಿಮ್ಯಾಂಡ್ ಮಾಡಿದನಂತೆ.

ಆದರೆ, ಇದು ಬರೀ ಅಂತೆ ಕಂತೆಯ ಸುದ್ದಿಯಾಗಿದ್ದು, ಈ ಬಗ್ಗೆ ಯಾವುದೇ ಸಾಕ್ಷಿ ಇಲ್ಲ. ಈ ವಿಷಯಕ್ಕೆ ಪ್ರತಿಕ್ರಿಯೆ ನೀಡಿರುವ ಶ್ರುತಿ ಹರಿಹರನ್ ನನ್ನ ಆಪ್ತರ ಕಡೆಯಿಂದ ಯಾವುದೇ ಕರೆ ಹೋಗಿಲ್ಲ ಇದೆಲ್ಲ ಸುಳ್ಳು ಸುದ್ದಿ ಎಂದಿದ್ದಾರೆ.
More from Filmibeat
English summary
Actor Arjun Sarja's twitter and email account hacked. Arjun Sarja manager Shivarjun filed a complaint in cyber crime.


Click it and Unblock the Notifications











