ಮೊಮ್ಮಗನನ್ನು ನೋಡಲು ಆಸ್ಪತ್ರೆಗೆ ಬಂದ ನಟ ಅರ್ಜುನ್ ಸರ್ಜಾ

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮಗನನ್ನು ನೋಡಲು ಚಿರು ಸರ್ಜಾ ಮಾವ ಅರ್ಜುನ್ ಸರ್ಜಾ ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದಾರೆ. ಇಂದು ಬೆಳಗ್ಗೆ ಮೊಮ್ಮಗನನ್ನು ನೋಡಲು ಆಸ್ಪತ್ರೆಗೆ ತೆರಳಿದ್ದಾರೆ. ಅರ್ಜುನ್ ಸರ್ಜಾ ಜೊತೆ ಪುತ್ರಿ ಐಶ್ವರ್ಯ ಸರ್ಜಾ ಮತ್ತು ಕುಟುಂಬದವರು ಆಸ್ಪತ್ರೆಗೆ ತೆರಳಿದ್ದಾರೆ.

Recommended Video

Arjun Sarja delighted with Happy News : 20 ವರ್ಷ ಆದ್ಮೇಲೆ ಚಿರು ಮಗನನ್ನು ನಾನೇ ಲಾಂಚ್ ಮಾಡ್ತೀನಿ

ಮೊದಲ ಬಾರಿಗೆ ಮೊಮ್ಮಗನನ್ನು ನೋಡುತ್ತಿರುವ ಖುಷಿ ಅರ್ಜುನ್ ಸರ್ಜಾ ಮುಖದಲ್ಲಿ ಕಾಣುತ್ತಿದೆ. ಮಾವ ಆಸ್ಪತ್ರೆಗೆ ಬರ್ತಿದ್ದ ಹಾಗೆ ನಟ ಧ್ರುವ ಸರ್ಜಾ ಸಹ ಆಸ್ಪತ್ರೆಗೆ ಭೇಟಿನೀಡಿದ್ದಾರೆ. ನಟಿ ಮೋಘನಾ ರಾಜ್ ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ರೂಪದಲ್ಲಿ ಚಿರು ಸರ್ಜಾ ಮತ್ತೆ ಹುಟ್ಟಿಬಂದಿದ್ದಾನೆ ಎಂದು ಇಡೀ ಕುಟುಂಬ ಸಂತಸ ವ್ಯಕ್ತಪಡಿಸಿದೆ.

ಮೇಘನಾ ರಾಜ್ ಗೆ ಮಗುಹುಟ್ಟಿದ ದಿನ ನಟ ಅರ್ಜುನ್ ಸರ್ಜಾ ಚೆನ್ನೈನಲ್ಲಿ ಚಿತ್ರೀಕರಣದಲ್ಲಿ ಬ್ಯುಸಿ ಇದ್ದರು. ಮನೆಗೆ ಗಂಡು ಮಗು ಆಗಮಿಸಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದ ಅರ್ಜುನ್ ಸರ್ಜಾ ನಾಲ್ಕು ತಿಂಗಳ ಬಳಿಕ ನಮ್ಮ ಕುಟುಂಬದಲ್ಲಿ ಸಂತೋಷ ಮನೆ ಮಾಡಿದೆ ಎಂದಿದ್ದರು.

Arjun Sarja Visits To Hospital For Meet Meghana Baby Boy

ಚಿರು, ಮಗು ರೂಪದಲ್ಲಿ ವಾಪಸ್ ಬಂದಿದ್ದಾನೆ. ಚಿರು ಇದ್ದಿದ್ದರೇ ಗಂಡು ಮಗುವಾಗಿದೆ ಮಾವ ಎಂದು ಜೋರಾಗಿ ಕೂಗಿ ಹೇಳುತ್ತಿದ್ದ. ನೆನಪಿಸಿಕೊಂಡರೆ ತುಂಬಾ ಬೇಸರವಾಗುತ್ತೆ. ಆದರೀಗ ಮಗು ರೂಪದಲ್ಲಿ ಬಂದು ಸಂತೋಷ ಪಡಿಸಿದ್ದಾನೆ ಎಂದು ಅರ್ಜುನ್ ಸರ್ಜಾ ಹೇಳಿದ್ದರು.

More from Filmibeat

English summary
Arjun Sarja visits to hospital with his family for meet meghana baby boy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X