»   » ಕೊಂಕಣಿ ಭಾಷೆಯಲ್ಲಿ ಹಾಡಲಿದ್ದಾರೆ ಗಾಯಕ ಅರ್ಮನ್ ಮಲ್ಲಿಕ್

ಕೊಂಕಣಿ ಭಾಷೆಯಲ್ಲಿ ಹಾಡಲಿದ್ದಾರೆ ಗಾಯಕ ಅರ್ಮನ್ ಮಲ್ಲಿಕ್

Posted By:
Subscribe to Filmibeat Kannada

ಬಾಲಿವುಡ್ ಗಾಯಕ ಅರ್ಮನ್ ಮಲ್ಲಿಕ್ ಈಗಾಗಲೇ ಕನ್ನಡದ ಹಾಡನ್ನು ಹಾಡಿದ್ದಾರೆ. 'ರಾಗ', 'ಮುಂಗಾರು ಮಳೆ 2' ಸೇರಿದಂತೆ ಅನೇಕ ಹಾಡುಗಳ ಮೂಲಕ ಜನಪ್ರಿಯರಾಗಿದ್ದಾರೆ. ಆದರೆ ಕನ್ನಡದ ಬಳಿಕ ಕೊಂಕಣಿ ಭಾಷೆಯಲ್ಲಿಯೂ ಅರ್ಮನ್ ಮಲ್ಲಿಕ್ ತಮ್ಮ ಸಂಗೀತ ಯಾನವನ್ನು ಇದೀಗ ಶುರು ಮಾಡಿದ್ದಾರೆ.

ಕೊಂಕಣಿ ಭಾಷೆಯಲ್ಲಿ ಬರುತ್ತಿರುವ 'ಮೊಗ್ ಅಸೊಮ್ 2' (Mog Asom 2) ಮ್ಯೂಸಿಕ್ ಆಲ್ಬಂನಲ್ಲಿ ಅರ್ಮನ್ ಮಲ್ಲಿಕ್ ಹಾಡಲಿದ್ದಾರೆ. ಇದು ಕೊಂಕಣಿ ಭಾಷೆಯಲ್ಲಿ ಅರ್ಮನ್ ಹಾಡುತ್ತಿರುವ ಮೊದಲ ಹಾಡು. ಅಂದಹಾಗೆ, ಈ ಹಾಡನ್ನು ಜೋಯಲ್ ರೆಬೆಲ್ಲೊ ಮತ್ತು ಡೇರೆಲ್ ಮಾಸ್ಕರೆನ್ನಾಸ್ ಇಬ್ಬರು ನಿರ್ಮಾಣ ಮಾಡುತ್ತಿದ್ದು, ಕಳೆದ ಲೋಕಸಭಾ ಚುನಾವಣೆಯ ವೇಳೆ, ಮಂಗಳೂರು ವಲಯದಲ್ಲಿ ಪ್ರಚಾರಗೊಂಡಿದ್ದ ನರೇಂದ್ರ ಮೋದಿಯವರ 'ನಮೋ ಥೀಮ್' ಸಾಂಗ್ ಅನ್ನು ಇವರು ಚಿಸಿದ್ದರು. 

Armaan Malik will be singing a Konkani song.

ವಿಶೇಷ ಅಂದರೆ 'ಮೊಗ್ ಅಸೊಮ್ 2' (Mog Asom 2) ಮ್ಯೂಸಿಕ್ ಆಲ್ಬಂ ನಲ್ಲಿ ಕೊಂಕಣಿಯ ಅನೇಕ ಸೂಪರ್ ಹಿಟ್ ಗೀತೆಗಳನ್ನು ಬಳಸಲಾಗದಂತೆಯಂತೆ. ಅರ್ಮನ್ ಮಲ್ಲಿಕ್ ಜೊತೆ ಬಾಲಿವುಡ್ ಗಾಯಕ ಬಪ್ಪಿ ಲಹರಿ ಕೂಡ ಹಾಡನ್ನು ಹಾಡಿದ್ದಾರೆ. ವಿಲ್ಸನ್ ಕಟೀಲ್ ಎನ್ನುವವರು ಸಾಹಿತ್ಯ ಬರೆದಿದ್ದಾರೆ.

English summary
Bollywood singer Armaan Malik will be singing a konkani song in 'Mog Asom 2' music album. ಕೊಂಕಣಿ ಭಾಷೆಯಲ್ಲಿ ಬರುತ್ತಿರುವ 'ಮೊಗ್ ಅಸೊಮ್ 2' ಮ್ಯೂಸಿಕ್ ಆಲ್ಬಂನಲ್ಲಿ ಅರ್ಮನ್ ಮಲ್ಲಿಕ್ ಹಾಡಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada