ಕನ್ನಡದಲ್ಲಿ ಬರ್ತಿರುವ ಅರ್ನಾಲ್ಡ್ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್

ಬಾಲಿವುಡ್, ತೆಲುಗು ಸೇರಿದಂತೆ ಇತರ ಬಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗುವ ಸಂಖ್ಯೆ ಹೆಚ್ಚಾಗುತ್ತಿವೆ. ಮೊನ್ನೆ ಮೊನ್ನೆಯಷ್ಟೆ ತೆಲುಗಿನ ಸೂಪರ್ ಹಿಟ್ ಸೈರಾ ಸಿನಿಮಾ ಕನ್ನಡಕ್ಕೆ ಡಬ್ ಆಗಿ ದೊಡ್ಡ ಮಟ್ಟಕ್ಕೆ ತೆರೆಗೆ ಬಂದಿದೆ. ಇದರ ಜೊತೆಗೀಗ ಸುದೀಪ್ ಅಭಿನಯದ ದಬಾಂಗ್-3 ಹಿಂದಿ ಸಿನಿಮಾ ಕೂಡ ಕನ್ನಡಕ್ಕೆ ಡಬ್ ಆಗಿ ತೆರೆಗೆ ಬರುವ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ.

ಇದರ ಬೆನ್ನಲ್ಲೆ ಈಗ ಹಾಲಿವುಡ್ ನ ಬಹು ನಿರೀಕ್ಷೆಯ 'ಟರ್ಮಿನೇಟರ್: ಡಾರ್ಕ್ ಫೇಟ್' ಸಿನಿಮಾ ಕನ್ನಡಕ್ಕೆ ಡಬ್ ಆಗಿ ತೆರೆಗೆ ಬರಲು ಸಜ್ಜಾಗಿದೆ. ಹಾಲಿವುಡ್ ನ ಖ್ಯಾತ ನಟ ಆಕ್ಷನ್ ಹೀರೋ ಅರ್ನಾಲ್ಡ್ ಅಭಿನಯದ 'ಟರ್ಮಿನೇಟರ್ ಡಾರ್ಕ್ ಫೇಟ್' ಕನ್ನಡದಲ್ಲಿ ಡಬ್ ಆಗಿರುವ ಚಿತ್ರಕ್ಕೆ ಸುದೀಪ್ ಸಾಥ್ ನೀಡಿದ್ದಾರೆ.

ಅರ್ನಾಲ್ಡ್ ಕನ್ನಡ ಮಾತನಾಡಿರುವ ಟ್ರೈಲರ್ ಅನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡು, ವಿಡಿಯೋ ಮಾಡಿರುವ ಸುದೀಪ್ "ಅರ್ನಾಲ್ಡ್ ದೊಡ್ಡ ಆಕ್ಷನ್ ಹೀರೋಗಳಲ್ಲಿ ಒಬ್ಬರು ಮತ್ತು ನಾನು ಅವರ ಅಭಿಮಾನಿ ಕೂಡ ಹೌದು. ಟರ್ಮಿನೇಟರ್ ಫ್ರ್ಯಾಂಚೈಸ್ ನನ್ನಲ್ಲಿರುವ ಅಭಿಮಾನಿಯನ್ನು ರೋಮಾಂಚನಗೊಳಿಸಿದೆ. ಫಾಕ್ಸ್‌ಸ್ಟೂಡಿಯಸ್ ಗಾಗಿ ಕನ್ನಡ ಟ್ರೈಲರ್ ಅನ್ನು ಬಿಡುಗಡೆ ಮಾಡಲು ನನಗೆ ಸಂತೋಷವಾಗಿದೆ" ಎಂದು ಹೇಳುತ್ತ ಟ್ರೈಲರ್ ರಿಲೀಸ್ ಮಾಡಿದ್ದಾರೆ.

Arnolds Terminator Dark Fate Kannada version Tailer Released By Sudeep

ಅಂದ್ಹಾಗೆ 'ಟರ್ಮಿನೇಟರ್: ಡಾರ್ಕ್ ಫೇಟ್' ಟರ್ಮಿನೇಟರ್ ಪ್ರಾಂಚೈಸ್ ನ 6ನೇ ಆವೃತ್ತಿ ಇದಾಗಿದೆ. ಚಿತ್ರಕ್ಕೆ ಟಿಮ್ ಮಿಲ್ಲರ್ ಆಕ್ಷನ್ ಕಟ್ ಹೇಳಿದ್ದಾರೆ. ಸುದೀಪ್ ರಿಲೀಸ್ ಮಾಡಿರುವ 1.30 ನಿಮಿಷದ ಟ್ರೈಲರ್ ಅಭಿಮಾನಿಗಳ ಮೆಚ್ಚುಗೆ ಪಡೆದುಕೊಂಡಿದೆ. 'ಟರ್ಮಿನೇಟರ್: ಡಾರ್ಕ್ ಫೇಟ್' ಮುಂದಿನ ತಿಂಗಳು ನವೆಂಬರ್ 1ಕ್ಕೆ ತೆರೆಗೆ ಬರುತ್ತಿದೆ.

More from Filmibeat

English summary
Famous Hollywood actor Arnold schwarzenegger's Terminator Dark Fate Kannada version trailer released by Sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X