Just In
Don't Miss!
- Automobiles
ಕೋವಿಡ್ ಲಸಿಕೆ ಸಾಗಾಣಿಕೆಗಾಗಿ ವಿಶೇಷ ಟ್ರಕ್ ಅಭಿವೃದ್ದಿಪಡಿಸಿದ ಟಾಟಾ ಮೋಟಾರ್ಸ್
- News
ಗೂಳಿಗೆ ಕೆಂಪು ಬಟ್ಟೆ ತೋರಿಸಿದಂತಾಗಿದೆ "ಜೈಶ್ರೀರಾಮ್" ಘೋಷಣೆ; ಹರಿಯಾಣ ಸಚಿವ
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ vs ಎಫ್ಸಿ ಗೋವಾ, Live ಸ್ಕೋರ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಮ-ಆಂಜನೇಯ ಅವತಾರದಲ್ಲಿ ದರ್ಶನ್-ಸುದೀಪ್; ಕಲಾವಿದ ಕರಣ್ ಕಲ್ಪನೆಯಲ್ಲಿ ಮೂಡಿದ ಚಿತ್ರಪಟ ವೈರಲ್
ಸ್ಯಾಂಡಲ್ ವುಡ್ ನ ಸ್ಟಾರ್ ನಟರು, ಒಂದು ಕಾಲದ ಕುಚುಕು ಗೆಳೆಯರಾದ ದರ್ಶನ್ ಮತ್ತು ಸುದೀಪ್ ಇಬ್ಬರು ಮನಸ್ತಾಪ ಮಾಡಿಕೊಂಡು ದೂರ ದೂರ ಆಗಿದ್ದಾರೆ. ಇಬ್ಬರು ಸ್ಟಾರ್ ನಟರು ಮುನಿಸಿಕೊಂಡಿರೂ ಅನೇಕ ಅಭಿಮಾನಿಗಳಾಗಿವೆ. ದರ್ಶನ್ ಮತ್ತು ಸುದೀಪ್ ಅವರನ್ನು ಒಟ್ಟಿಗೆ ನೋಡಲು ಅಬಿಮಾನಿಗಳು ಬಯಸುತ್ತಿದ್ದಾರೆ.
ಇಬ್ಬರು ಒಟ್ಟಿಗೆ ಇರುವ ಫೋಟೋಗಳು ಆಗಾಗ ವೈರಲ್ ಆಗುತ್ತಿರುತ್ತೆ. ಇದೀಗ ದರ್ಶನ್ ಮತ್ತು ಸುದೀಪ್ ಇಬ್ಬರು ರಾಮ್-ಆಂಜನೇಯ ಅವತಾರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ರಾಮ-ಆಂಜನೇಯ ಅವತಾರದಲ್ಲಿ ದರ್ಶನ್ ಮತ್ತು ಸುದೀಪ್ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಮೇಘನಾ ಸೀಮಂತ ಫೋಟೋಗೆ ಜೀವ ತುಂಬಿದ ಕಲಾವಿದ ಕರಣ್, ಫೋಟೋ ವೈರಲ್
ಅಂದಹಾಗೆ ದರ್ಶನ್ ಮತ್ತು ಸುದೀಪ್ ಹೀಗೆ ರಾಮ ಆಂಜನೇಯ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು, ಯಾವುದೇ ಸಿನಿಮಾಗಾಗಿ ಅಲ್ಲ. ಈ ಫೋಟೋ ಕಲಾವಿದನ ಕಲ್ಪನೆಯಲ್ಲಿ ಮೂಡಿಬಂದಿದ್ದು. ಕಲಾವಿದ ಕರಣ್ ಆಚಾರ್ಯ ಕಲ್ಪನೆಯಲ್ಲಿ ಇಬ್ಬರು ಸ್ಟಾರ್ ನಟರು ರಾಮ್ ಆಂಜನೇಯರಾಗಿ ಕಾಣಿಸಿಕೊಂಡಿದ್ದಾರೆ.
ಈ ಫೋಟೋದಲ್ಲಿ ರಾಮನಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಆಂಜನೇಯನಾಗಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ಈ ಫೋಟೋಗೆ ಲೈಕ್ಸ್ ಒತ್ತಿ ಶೇರ್ ಮಾಡುತ್ತಿದ್ದಾರೆ.
ಅಭಿಮಾನಿಯೊಬ್ಬ ದರ್ಶನ್ ಮತ್ತು ಸುದೀಪ್ ಫೋಟೋವನ್ನು ಶೇರ್ ಮಾಡಿ ಹನುಮಾನ್ ಮತ್ತು ರಾಮನಾಗೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು. ಅಭಿಮಾನಿಯ ಮನವಿ ಸ್ವೀಕರಿಸಿದ ಕರಣ್ ಅದ್ಭುತವಾದ ಚಿತ್ರ ತಯಾರಿಸಿದ್ದಾರೆ.
ಕರಣ್ ಈ ಫೋಟೋ ಶೇರ್ ಮಾಡುತ್ತಿದ್ದಂತೆ ಅನೇಕರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಕಾಮೆಂಟ್ಸ್ ಬಾಕ್ಸ್ ನಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ತೆಲುಗು ಅಭಿಮಾನಿಗಳು ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಫೋಟೋ ಶೇರ್ ಮಾಡಿ ಜೀವತುಂಬುವಂತೆ ಕೇಳಿಕೊಳ್ಳುತ್ತಿದ್ದಾರೆ.
ಅಂದ್ಹಾಗೆ ಆಪ್ತ ಸ್ನೇಹಿತರಾಗಿದ್ದ ದರ್ಶನ್ ಮತ್ತು ಸುದೀಪ್ ಇಬ್ಬರು ದೂರ ದೂರ ಆಗಿ ಅನೇಕ ವರ್ಷಗಳಾಯಿತು. ನಾನು ಮತ್ತು ಸುದೀಪ್ ಇನ್ಮುಂದೆ ಸ್ನೇಹಿತರಲ್ಲ. ಕನ್ನಡ ಚಿತ್ರರಂಗಕ್ಕಾಗಿ ಕೆಲಸ ಮಾಡುವ ನಟರು ಮಾತ್ರ. ಯಾವುದೇ ಊಹಾಪೋಹ ಬೇಡ. ಇದು ಅದರ ಅಂತ್ಯ' ಎಂದು ದರ್ಶನ್ ಟ್ವೀಟ್ ಮಾಡಿ ಅಚ್ಚರಿ ಮೂಡಿಸಿದ್ದರು. ಬಳಿಕ ಇಬ್ಬರನ್ನು ಒಟ್ಟಿಗೆ ನೋಡಲು ಸಾಧ್ಯವಾಗಲಿಲ್ಲ. ಇಬ್ಬರು ಯಾವಾಗ ಒಂದಾಗುಕುವ ಕಾಲ ಬರುತ್ತೆ ಎಂದು ಚಿತ್ರಪ್ರಿಯರು ಕಾಯುತ್ತಿದ್ದಾರೆ.