For Quick Alerts
  ALLOW NOTIFICATIONS  
  For Daily Alerts

  ಮೇಘನಾ ಸೀಮಂತ ಫೋಟೋಗೆ ಜೀವ ತುಂಬಿದ ಕಲಾವಿದ ಕರಣ್, ಫೋಟೋ ವೈರಲ್

  |

  ನಟಿ ಮೇಘನಾ ರಾಜ್ ಅವರ ಸೀಮಂತ ಕಾರ್ಯಕ್ರಮ ಇತ್ತೀಚಿಗಷ್ಟೆ ಸಂಪ್ರದಾಯದಂತೆ ನಡೆದಿದೆ. ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ನೋವಿನಲ್ಲಿದ್ದ ಸರ್ಜಾ ಕುಟುಂಬ ಮೇಘನಾ ಅವರ ಸೀಮಂತ ಮಾಡಿ ಖುಷಿ ಕಂಡಿದ್ದಾರೆ.

  ಅಭಿಮಾನಿಗಳು ಕಳುಹಿಸಿದ ಮೇಘನಾ ರಾಜ್ ಫೋಟೋಗೆ ಜೀವ ಕೊಟ್ಟ ಕರಣ್ | Filmibeat Kannada

  ಈ ಸಂತಸ ಸಂದರ್ಭದಲ್ಲಿ ಚಿರಂಜೀವಿ ಸರ್ಜಾ ಇಲ್ಲ ಎಂಬ ನೋವು ಇಡೀ ಕುಟುಂಬ ಹಾಗೂ ಅಭಿಮಾನಿಗಳನ್ನು ಕಾಡಿದ್ದು ಸುಳ್ಳಲ್ಲ. ಆದರೂ, ಸೀಮಂತ ಕಾರ್ಯಕ್ರಮದಲ್ಲಿ ಮೇಘನಾ ಅವರ ಪಕ್ಕದಲ್ಲಿ ಚಿರು ಸರ್ಜಾ ಅವರ ಪೋಸ್ಟರ್‌ವೊಂದು ಇಡಲಾಗಿತ್ತು. ಇದು ಮನಮುಟ್ಟಿದೆ. ವಿಧಿಯ ಈ ಆಟಕ್ಕೆ ಹೃದಯ ಕರಗಿದೆ. ಆ ಎಲ್ಲ ನೋವನ್ನು ಮೇಘನಾ ಅವರ ಮಗು ರೂಪದಲ್ಲಿ ಮರೆಯಲು ಕುಟುಂಬ ಕಾಯುತ್ತಿದೆ. ಇದೀಗ, ಮೇಘನಾ ರಾಜ್ ಸೀಮಂತ ಫೋಟೋ ಪೈಕಿ ಕಲಾವಿದನ ಕೈಯಲ್ಲಿ ಅರಳಿದ ಫೋಟೋವೊಂದು ವೈರಲ್ ಆಗಿದೆ. ಮುಂದೆ ಓದಿ...

  ಫೋಟೋಗೆ ಜೀವ ನೀಡಿದ ಕರಣ್ ಆಚಾರ್ಯ

  ಫೋಟೋಗೆ ಜೀವ ನೀಡಿದ ಕರಣ್ ಆಚಾರ್ಯ

  ಮೇಘನಾ ರಾಜ್ ಅವರ ಸೀಮಂತದ ಫೋಟೋವೊಂದನ್ನು ಕಲಾವಿದ ಕರಣ್ ಆಚಾರ್ಯ ಎಡಿಟ್ ಮಾಡಿದ್ದು, ನೆಟ್ಟಿಗರು ಹೃದಯ ಮುಟ್ಟಿದೆ. ಸೀಮಂತ ಸಮಯದಲ್ಲಿ ಗಂಡ ಜೊತೆಯಲ್ಲಿರಬೇಕು ಎಂಬ ಆಸೆ, ಕನಸು ಪ್ರತಿಯೊಬ್ಬ ಪತ್ನಿಗೂ ಇರುತ್ತೆ. ಆದ್ರೆ, ಮೇಘನಾ ವಿಚಾರದಲ್ಲಿ ಇದು ಬರಿ ಕನಸಾಗಿ ಉಳಿಯಿತು. ಆದ್ರೆ, ಕಲಾವಿದ ಕರಣ್ ಆಚಾರ್ಯ ಆ ಆಸೆಯನ್ನು ಫೋಟೋ ರೂಪದಲ್ಲಿ ನೆರವೇರಿಸಿದ್ದಾರೆ.

  ಧ್ರುವ ಸರ್ಜಾ ಹುಟ್ಟುಹಬ್ಬದ ದಿನ ಹೊಸ ಸಿನಿಮಾ ಅನೌನ್ಸ್: ಮತ್ತೆ ಒಂದಾದ ಸೂಪರ್ ಹಿಟ್ ಜೋಡಿಧ್ರುವ ಸರ್ಜಾ ಹುಟ್ಟುಹಬ್ಬದ ದಿನ ಹೊಸ ಸಿನಿಮಾ ಅನೌನ್ಸ್: ಮತ್ತೆ ಒಂದಾದ ಸೂಪರ್ ಹಿಟ್ ಜೋಡಿ

  ಮೇಘನಾ ಜೊತೆ ಚಿರು ಹೆಜ್ಜೆ

  ಮೇಘನಾ ಜೊತೆ ಚಿರು ಹೆಜ್ಜೆ

  ಸೀಮಂತ ವೇಳೆ ಮೇಘನಾ ರಾಜ್ ಜೊತೆಯಲ್ಲಿ ಚಿರಂಜೀವಿ ಸರ್ಜಾ ಹೆಜ್ಜೆ ಹಾಕುತ್ತಿರುವಂತೆ ಫೋಟೋವೊಂದನ್ನು ಎಡಿಟ್ ಮಾಡಿದ್ದಾರೆ ಕರಣ್ ಆಚಾರ್ಯ. ಈ ಫೋಟೋ ನೋಡುತ್ತಿದ್ದರೆ ಒಂದು ಕ್ಷಣ ಹೃದಯ ಕರಗುವುದು. ಇದು ಎಡಿಟ್ ಆಗಿಲ್ಲ ಅಂದಿದ್ರೆ ಎಷ್ಟು ಚೆಂದು ಎನ್ನುವಷ್ಟು ಸಮಾಧಾನ ತರುತ್ತದೆ. ಅಷ್ಟರ ಮಟ್ಟಿಗೆ ಆ ಫೋಟೋಗೆ ಜೀವ ತುಂಬಿದ್ದಾರೆ.

  ಮೇಘನಾ ರಾಜ್ 'ಸೀಮಂತ' ಬೆನ್ನಲ್ಲೆ ಅಭಿಮಾನಿಗಳಲ್ಲಿ ವಿನಂತಿ ಮಾಡಿದ ಧ್ರುವ ಸರ್ಜಾಮೇಘನಾ ರಾಜ್ 'ಸೀಮಂತ' ಬೆನ್ನಲ್ಲೆ ಅಭಿಮಾನಿಗಳಲ್ಲಿ ವಿನಂತಿ ಮಾಡಿದ ಧ್ರುವ ಸರ್ಜಾ

  ನೆಟ್ಟಿಗರು ಫಿದಾ

  ನೆಟ್ಟಿಗರು ಫಿದಾ

  ಕರಣ್ ಆಚಾರ್ಯ ಅವರ ಕಲೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಪ್ರತಿಭಾನ್ವಿತ ಕಲಾವಿದ ಫೋಟೋವೊಂದಕ್ಕೆ ಜೀವ ತುಂಬಿರುವ ಪರಿ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಪಾತ್ರವಾಗಿದೆ. ಸರ್ಜಾ ಕುಟುಂಬದ ಅಭಿಮಾನಿಗಳು ಕರಣ್‌ಗೆ ಧನ್ಯವಾದ ಹೇಳುತ್ತಿದ್ದಾರೆ.

  ಭಾನುವಾರ ನಡೆದ ಸೀಮಂತ

  ಭಾನುವಾರ ನಡೆದ ಸೀಮಂತ

  ಕಳೆದ ಭಾನುವಾರ ಸರ್ಜಾ ಮನೆಯಲ್ಲಿ ಮೇಘನಾ ರಾಜ್ ಅವರ ಸೀಮಂತ ಕಾರ್ಯಕ್ರಮ ನಡೆದಿದೆ. ಮೇಘನಾ ಅವರ ತಂದೆ-ತಾಯಿ, ಧ್ರುವ ಸರ್ಜಾ ಕುಟುಂಬದವರು ಹಾಗೂ ಕುಟುಂಬದ ಕೆಲವು ಆಪ್ತರು ಮಾತ್ರ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

  English summary
  Artist karan acharya Recreated Meghana Raj Baby Shower Portrait with Late Chiranjeevi sarja goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X