ಕನ್ನಡ ಸಿನಿಮಾರಂಗದವರ ಪಾಲಿಗೆ ಪ್ರಕಾಶ್ ರೈ ಹಿಟ್ಲರ್ ಅಂತೆ!
ಪ್ರಕಾಶ್ ರೈ. ಉತ್ತಮ ನಟ, ಕಲಾವಿದನಿಗೆ ಭಾಷೆಯ ಹಂಗಿಲ್ಲ ಎನ್ನುವುದನ್ನ ನಿರೂಪಿಸಿದ ನಟ. ನಾನಾ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿ ತನ್ನದೆಯಾದ ಅಭಿಮಾನಿಯ ಬಳಗವನ್ನ ಕಟ್ಟುಕೊಂಡ ನಟ ಪ್ರಕಾಶ್ ರೈ.
ಪ್ರಕಾಶ್ ರೈ ಸಿನಿಮಾ ಬಿಟ್ಟು ರಾಜಕೀಯದ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ನೇರವಾಗಿ ಪ್ರಧಾನ ಮಂತ್ರ ಮೋದಿ ಅವರನ್ನ ಪ್ರಶ್ನೆ ಮಾಡುವುದರ ಜೊತೆಯಲ್ಲಿ ಬಿಜೆಪಿ ಪಕ್ಷದವರ ವಿರೋಧವನ್ನು ಕಟ್ಟುಕೊಂಡಿದ್ದಾರೆ. ಇದೇ ಕಾರಣದಿಂದ ಸಾಕಷ್ಟು ಅಭಿಮಾನಿಗಳು ಪ್ರಕಾಶ್ ರೈ ಸಿನಿಮಾಗಳನ್ನ ನೋಡುವುದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ.
ತೆಲುಗು ಸಿನಿಮಾರಂಗದ ಅಭಿಮಾನಿಗಳು ಕೂಡ ಪ್ರಕಾಶ್ ರೈ ಹೇಳಿಕೆಗಳಿಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಇತ್ತ ಬಾಲಿವುಡ್ ನಲ್ಲಿ ಪ್ರಕಾಶ್ ರೈ ಅವರಿಗೆ ಹಿಂದಿ ಸಿನಿಮಾಗಳಿಗೆ ಅವಕಾಶ ನೀಡುವುದನ್ನ ನಿಲ್ಲಿಸಿದ್ದಾರೆ. ಸ್ಯಾಂಡಲ್ ವುಡ್ ಕೂಡ ಇದಕ್ಕೆ ಹೊರತಾಗಿಲ್ಲ. ಚಂದನವನದ ಸಾಕಷ್ಟು ನಿರ್ದೇಶಕರು ಪ್ರಕಾಶ್ ರೈ ಅವರನ್ನ ಹಿಟ್ಲರ್ ಬುದ್ದಿಯನ್ನ ಬಿಟ್ಟು ಬಿಡಿ ಎಂದು ಹೇಳುತ್ತಿದ್ದಾರೆ. ಹಾಗಾದರೆ ಪ್ರಕಾಶ್ ರೈ ಅವರ ಹೇಳಿಕೆ ವಿರೋಧ ವ್ಯಕ್ತ ಪಡಿಸುತ್ತಿರುವ ಸಿನಿಮಾಮಂದಿಗಳು ಯಾರು? ಇಲ್ಲಿದೆ ಸಂಪೂರ್ಣ ವಿವರ. ಮುಂದೆ ಓದಿ

ಪ್ರಕಾಶ್ ರೈ ರನ್ನ ಹಿಟ್ಲರ್ ಅಂತಿದ್ದಾರೆ.
ಪ್ರಕಾಶ್ ರೈ ಅವರ ಇತ್ತೀಚಿನ ನಡುವಳಿಗೆ ಕನ್ನಡ ಸಿನಿಮಾರಂಗದ ಕೆಲವರಿಗೆ ನುಂಗಲಾಗದ ತುಪ್ಪವಾಗಿದೆ. ಸಿನಿಮಾ ಬಿಟ್ಟು ರಾಜಕೀಯವಾಗಿ ಹೇಳಿಕೆಗಳನ್ನು ನೀಡುತ್ತಿರುವುದನ್ನ ವಿರೋಧಿಸಲು ಆರಂಭ ಮಾಡಿದ್ದಾರೆ.

ಪ್ರಕಾಶ್ ರೈ ಅವರನ್ನ ಹಿಟ್ಲರ್ ಎಂದ ಹರೀಶ್ ರಾಯ್
ಕನ್ನಡ ಸಿನಿಮಾರಂಗದ ಹಿರಿಯ ಖಳನಟ ಹರೀಶ್ ರಾಯ್ ಪ್ರಕಾಶ್ ರೈ ಅವರ ಬಗ್ಗೆ ತಮ್ಮ ಅಭಿಪ್ರಾಯವನ್ನ ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. 'ನೀನು ಯಾವುದೇ ಪಂಚ ಭಾಷೆಯ ನಟನಲ್ಲ. ಮೊದಲು ಹಿಟ್ಲರ್ ತರ ಮಾತನಾಡುವುದನ್ನ ಬಿಡು, ಪ್ರಧಾನ ಮಂತ್ರಿಗಳ ವಿರುದ್ಧ ಮಾತನಾಡುವುದಕ್ಕೆ ನಿನಗೆ ಯಾವುದೇ ಅಧಿಕಾರವಿಲ್ಲ" ಎಂದಿದ್ದಾರೆ.

ಪ್ರಕಾಶ್ ರೈ ಬಗ್ಗೆ ರವಿ ಶ್ರೀವತ್ಸಾ ಮಾತು
ಡೆಡ್ಲಿ ಡೈರೆಕ್ಟರ್ ರವಿ ಶ್ರೀವತ್ಸಾ ಕೂಡ ಪ್ರಕಾಶ್ ರೈ ಬಗ್ಗೆ ತಮ್ಮ ಅಭಿಪ್ರಾಯವನ್ನ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ. "ಪ್ರಕಾಶ್ ರೈ ಒಬ್ಬ ಎಂಜಿಲು ತಿನ್ನೋ ನಾಯಿ ಎನ್ನುವುದು ಸಾಭೀತಾಗಿದೆ. ಇಡೀ ಭಾರತದ ಉದ್ದಗಲಕ್ಕೂ ಮನೆ ಮನೆ ಮುಂದೆ ನಿಂತು ಬೊಗಳೋ ನಾಯಿ ಅದು. ಬೊಗಳಿದಾಗ ಹೊಡಿಬೇಕು ಇಲ್ಲ ಅಂದ್ರೆ ಕಚ್ಚೋಕೆ ಶುರು ಮಾಡುತ್ತೆ" ಎಂದಿದ್ದಾರೆ.

ಸ್ನೇಹಿತ ಆದರೂ ತಲೆ ಕೆಟ್ಟಿದೆ
ನಟ ಜಗ್ಗೇಶ್ ಕೂಡ ಪ್ರಕಾಶ್ ರೈ ಅವರ ಬಗ್ಗೆ ಮಾತನಾಡಿದ್ದು. ಪ್ರಕಾಶ್ ರೈ ನನಗೆ ಉತ್ತಮ ಸ್ನೇಹಿತ ಒಬ್ಬೊಬ್ಬರಿಗೆ ಒಂದೊಂದು ನಿಲುವು ಇರುತ್ತದೆ. ಹಾಗೆಯೇ ಆತನಿಗೆ ತಲೆ ಸರಿಯಿಲ್ಲ. ಆದ್ದರಿಂದ ಹಿಂಗೆಲ್ಲ ಮಾತನಾಡುತ್ತಾರೆ ಎಂದಿದ್ದಾರೆ.


Click it and Unblock the Notifications











