For Quick Alerts
  ALLOW NOTIFICATIONS  
  For Daily Alerts

  ಫೈಟರ್ ಶಿವನ ಅವತಾರದಲ್ಲಿ ಅರುಗೌಡ

  By Pavithra
  |

  ಮುದ್ದು ಮನಸೇ ಸಿನಿಮಾ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಟ ಅರುಗೌಡ ಫೈಟರ್ ಶಿವನ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಮುದ್ದು ಮನಸೇ' ಸಿನಿಮಾ ನಿರ್ದೇಶಿಸಿದ ಅನಂತ್ ಶೈನ್, 'ವಿರಾಟ್‌ ಪರ್ವ' ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

  ಇದೇ ಸಿನಿಮಾದಲ್ಲಿ ಅರು ಗೌಡ ಫೈಟರ್ ಶಿವ ಎನ್ನುವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಪಾತ್ರ ಫಸ್ಟ್ ಲುಕ್ ಬಿಡುಗಡೆ ಆಗಿದ್ದು ಮೊದಲ ನೋಟದಲ್ಲಿ ಅರು ಖಳನಾಯಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ ಎನ್ನುವ ಅನುಮಾನಗಳು ಮೂಡುತ್ತೆ.

  'ಉಳಿದವರು ಕಂಡಂತೆ' ನಂತರ ಮತ್ತೆ ಒಂದೇ ಚಿತ್ರದಲ್ಲಿ ಕಿಶೋರ್, ರಿಷಬ್'ಉಳಿದವರು ಕಂಡಂತೆ' ನಂತರ ಮತ್ತೆ ಒಂದೇ ಚಿತ್ರದಲ್ಲಿ ಕಿಶೋರ್, ರಿಷಬ್

  ಚಿತ್ರದಲ್ಲಿ ಅರುಗೌಡ ಲುಕ್ ಮ್ಯಾನರಿಸಂ ಎಲ್ಲವೂ ಸಂಪೂರ್ಣ ವಿಭಿನ್ನವಾಗಿದ್ದು ಹೊಸ ರೀತಿಯಲ್ಲಿ ತೋರಿಸಲು ಪ್ರಯತ್ನ ಮಾಡಿದ್ದಾರಂತೆ. ಕಥೆಗೆ ಪ್ರಮುಖ ಟ್ವಿಸ್ಟ್ ಕೊಡುವ ಪಾತ್ರ ಇದಾಗಿದ್ದು ಸದ್ಯ ಅರುಗೌಡ ಪಾಲಿನ ಚಿತ್ರೀಕರಣ ಕಂಪ್ಲೀಟ್ ಆಗಿದ್ಯಂತೆ.

  Arugowda is acting in Kannada film Virat Parva.

  ಅನಂತ್ ಶೈನ್ "ವಿರಾಟ್‌ ಪರ್ವ' ಚಿತ್ರದಲ್ಲಿ ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟು ಈ ಬಾರಿ ಹೊಸ ಜಾನರ್ ನತ್ತ ವಾಲಿದ್ದು, ಇಂದಿನ ಟ್ರೆಂಡ್ ಗೆ ಒಗ್ಗುವಂತಹ ಕಥೆ ಮಾಡಿಕೊಂಡಿದ್ದಾರೆ. ವಿಭಿನ್ನ ಮನಸ್ಥಿತಿಯ ಮೂವರು ಹುಡುಗರ ಸುತ್ತ ಇಡೀ ಸಿನಿಮಾ ಸುತ್ತಲಿದ್ದು, ಹೊಸ ಬಗೆಯ ಕಥೆಯಾಗಿ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸ ಅನಂತ್ ಶೈನ್ ಅವರದ್ದು.

  English summary
  Actor Arugowda is acting in Kannada film Virat Parva. Arugowda is doing a negative shade and Ananth Shine is directing the film

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X