'ಯಜಮಾನ'ನಿಗೆ ವಿಲನ್ ಆಗಿ ಬಂದ ಮಾಜಿ ಸೈನಿಕ
'ಯಜಮಾನ' ಸಿನಿಮಾದಲ್ಲಿ ನಟ ದರ್ಶನ್ ಅವರ ಪುತ್ರ ವಿನೀಶ್ ನಟಿಸುತ್ತಿರುವುದು ಚಿತ್ರತಂಡದಿಂದ ಬಂದಿದ್ದ ಇತ್ತೀಚಿಗಿನ ಸುದ್ದಿ. ಆದರೆ, ಅದರ ನಂತರ 'ಯಜಮಾನ' ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ಬಂದಿದೆ.
ಈ ಸಿನಿಮಾಗೆ ಈಗ ಒಬ್ಬ ಖಳನಟನ ಎಂಟ್ರಿಯಾಗಿದೆ. ಅರುಣ್ ಎಂಬ ಮಾಜಿ ಸೈನಿಕ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೂಲತಃ ಕೇರಳದವರಾದ ಅರುಣ್ ಸದ್ಯಕ್ಕೆ ಬೆಂಗಳೂರಿನಲ್ಲಿಯೇ ಇದ್ದಾರೆ.
ಸೈನ್ಯದಲ್ಲಿ 9 ವರ್ಷ ಇದ್ದ ಅರುಣ್ ಬಳಿಕ ನಿವೃತ್ತಿ ತೆಗೆದುಕೊಂಡಿದ್ದರು. ಆ ನಂತರ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಟ್ಟ ಅರುಣ್ ತಮ್ಮ ಕಟ್ಟುಮಸ್ತಾದ ದೇಹದ ಮೂಲಕ ಎಲ್ಲರನ್ನು ಬೆರಗುಗೊಳಿಸಿದರು. 112 ಕೆಜಿ ತೂಕ ಹಾಗೂ ಆರು ಅಡಿ ಎತ್ತರ ಇರುವ ಇವರು ಈಗಾಗಲೇ ಜೂನಿಯರ್ ಎನ್ ಟಿ ಆರ್ ಮತ್ತು ನಟ ವಿಶಾಲ್ ಜೊತೆಗೆ ನಟಿಸಿದ್ದಾರೆ.

'ಯಜಮಾನ' ಅರುಣ್ ಅವರ ಮೊದಲ ಕನ್ನಡ ಸಿನಿಮಾವಾಗಿದೆ. ದರ್ಶನ್ ಜೊತೆಗೆ ನಟಿಸುವುದಕ್ಕೆ ಅರುಣ್ ಉತ್ಸುಕರಾಗಿದ್ದಾರೆ. ದರ್ಶನ್ ಕೂಡ ಅರುಣ್ ಅವರಿಗೆ ವಿಶ್ ಮಾಡಿದ್ದಾರೆ.
English summary
Arun a former soldier selected to play villain role in kannada actor Darshan's 'Yajamana' movie.


Click it and Unblock the Notifications