For Quick Alerts
  ALLOW NOTIFICATIONS  
  For Daily Alerts

  'ವೇದ'ನೊಂದಿಗೆ ಅಭಿನಯಕ್ಕೆ ಅದಿತಿ ಸಾಗರ್?

  |

  ನಟ ಶಿವರಾಜ್ ಕುಮಾರ್ ಅವರ 125 ನೇ ಸಿನಿಮಾ "ವೇದ" ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಎ.ಹರ್ಷ ನಿರ್ದೇಶನದ ಸಿನಿಮಾ ಇದು. ಡಿಸೆಂಬರ್‌ನಿಂದ ಚಿತ್ರೀಕರಣ ಪ್ರಾರಂಭ ಮಾಡುವ ಯೋಜನೆ ಚಿತ್ರ ತಂಡ ಹಾಕಿಕೊಂಡಿದೆ. ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ ಬೃಹತ್ ಸೆಟ್‌ನಲ್ಲಿ ಚಿತ್ರದ ಮೊದಲ ಶೆಡ್ಯೂಲ್ ಚಿತ್ರೀಕರಣ ನಡೆಯಲಿದೆ.

  ಸದ್ಯ ವೇದ ಚಿತ್ರದ ಬಹುತೇಕ ತಾರಗಣ ಅಂತಿಮ ಆಗಿದೆ. ಹಲವು ಪಾತ್ರಗಳಿಗೆ ಈಗಾಗಲೇ ನಿರ್ದೇಶಕ ಹರ್ಷ ಕಲಾವಿರನ್ನು ಆಯ್ಕೆ ಮಾಡಿ ಕೊಂಡಿದ್ದಾರೆ. ಇದೀಗ ವೇದ ಚಿತ್ರದಿಂದ ಹೊಸ ಸುದ್ದಿ ಹೊರ ಬಂದಿದೆ. ಈ ಚಿತ್ರಕ್ಕೆ ನಟ ಅರುಣ್ ಸಾಗರ್ ಪುತ್ರಿ ಸೇರಿ ಕೊಳ್ಳುತ್ತಲಿದ್ದಾರೆ.

  ಅರುಣ್ ಸಾಗರ್ ಪುತ್ರಿ ಈ ಹಿಂದೆ ಗಾಯಕಿ ಆಗಿ ಗಮನ ಸೆಳೆದಿದ್ದರು. ಈಗ ತೆರೆ ಮೇಲೆ ಅಭಿನಯಿಸಲು ಸಜ್ಜಾಗಿದ್ದಾರೆ. ಶಿವರಾಜ್ ಕುಮಾರ್ ನಟನೆಯ ಸಿನಿಮಾದ ಮೂಲಕ ಗಾಯಕಿ ಅದಿತಿ ಸಾಗರ್ ನಟನೆಗೆ ಪ್ರವೇಶಿಸುತ್ತಿದ್ದಾರೆ.

  'ರಾಂಬೋ 2' ಚಿತ್ರದ ಮೂಲಕ ಗಾಯನ ಆರಂಭಿಸಿದ ಅದಿತಿ ಸಾಗರ್!

  'ರಾಂಬೋ 2' ಚಿತ್ರದ ಮೂಲಕ ಗಾಯನ ಆರಂಭಿಸಿದ ಅದಿತಿ ಸಾಗರ್!

  ನಟ ಮತ್ತು ಕಲಾ ನಿರ್ದೇಶಕ ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್, 'ರಾಂಬೋ 2' ಚಿತ್ರದ ದಮ್ ಮಾರೋ ದಮ್ ಮೂಲಕ ಗಾಯನ ಕ್ಷೇತ್ರಕ್ಕೆ ಪ್ರವೇಶಿಸಿದರು. ಮೊದಲ ಹಾಡಿನಲ್ಲಿಯೇ ಅದಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತು. ಈ ಚಿತ್ರದ ಹಾಡಿನ್ನು ಕೇಳಿದವರು ಅದಿತಿ ಧ್ವನಿಗೆ ಅಭಿಮಾನಿಗಳಾಗಿದ್ದಾರೆ.

  ಅದಿತಿ ಸಾಗರ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಅದು ಯಾವ ಪಾತ್ರ ಎನ್ನು ಬಗ್ಗೆ ಇನ್ನೂ ಬಿಟ್ಟು ಕೊಟ್ಟಿಲ್ಲ ಚಿತ್ರತಂಡ. ಶೀಘ್ರವೇ ವಿವರಗಳು ಬಹಿರಂಗಗೊಳ್ಳಲಿವೆ.

  14 ನೇ ವಯಸ್ಸಿನಲ್ಲಿಯೇ ಚಿತ್ರಕ್ಕೆ ಹಾಡಿದ ಅದಿತಿ!

  14 ನೇ ವಯಸ್ಸಿನಲ್ಲಿಯೇ ಚಿತ್ರಕ್ಕೆ ಹಾಡಿದ ಅದಿತಿ!

  ಅದಿತಿ ತಮ್ಮ 14 ನೇ ವಯಸ್ಸಿನಲ್ಲಿಯೇ ಶರಣ್ ನಟಿಸಿದ 'ರಾಂಬೋ 2' ನಲ್ಲಿನ ದಮ್ ಮಾರೋ ದಮ್ ಹಾಡಿನ ಮೂಲಕ ತಮ್ಮ ಗಾಯನ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ 'ಕವಲುದಾರಿ'ಯಲ್ಲಿನ ಸಂಶಯ ಟ್ರ್ಯಾಕ್‌ನ ಭಾವಪೂರ್ಣ ನಿರೂಪಣೆಯೊಂದಿಗೆ ಎಲ್ಲರನ್ನೂ ಮೋಡಿ ಮಾಡಿದರು. ಡ್ಯಾನಿಶ್ ಸೇಟ್, ದಿಶಾ ಮದನ್ ಮತ್ತು ಇತರರು ನಟಿಸಿರುವ 'ಫ್ರೆಂಚ್ ಬಿರಿಯಾನಿ' ಯಿಂದ ಬೆಂಗಳೂರು ಹಾಡನ್ನು ಹಾಡು ಅದಿತಿ ಮತ್ತಷ್ಟು ಜನ ಮನ್ನಣೆ ಗಳಿಸಿದ್ದಾರೆ. ಇದೀಗ ಅದಿತಿ ಅಭಿನಯಕ್ಕೆ ಬರುತ್ತಿದ್ದಾರೆ ಎನ್ನುವುದು ಕುತೂಹ ಮೂಡಿಸಿದೆ.

  ಅದಿತಿ ಸಾಗಾರ್ ಪಾತ್ರದ ಬಗ್ಗೆ ಮೂಡಿದ ಕುತೂಹಲ!

  ಅದಿತಿ ಸಾಗಾರ್ ಪಾತ್ರದ ಬಗ್ಗೆ ಮೂಡಿದ ಕುತೂಹಲ!

  ನಿರ್ದೇಶಕ ಎ.ಹರ್ಷ ಪಾತ್ರಗಳನ್ನು ಆಯ್ಕೆ ಮಾಡುವುದರಲ್ಲಿ ನಿಸ್ಸೀಮರು. ಅದಕ್ಕೆ ಅವರ ನಿರ್ದೇಶನದ ಭಜರಂಗಿ2 ತಾಜಾ ನಿದರ್ಶನ. ಭಜರಂಗಿ ಚಿತ್ರದಲ್ಲಿ ಬರುವ ಪ್ರತೀ ಪಾತ್ರವೂ ಮನಸ್ಸಿನಲ್ಲಿ ಉಳಿಯುತ್ತವೆ. ಹಾಗಾಗಿ ವೇದ ಚಿತ್ರದಲ್ಲಿನ ಪಾತ್ರಗಳ ಬಗ್ಗೆಯೂ ಕುತೂಹಲ ಮೂಡಿದೆ.

  ಇದೇ ಕಾರಣಕ್ಕೆ ಅದಿತಿ ಸಾಗರ್‌ ಅವರು ಈ ಚಿತ್ರದಲ್ಲಿ ಅಭಿನಯಿಸಿದರೆ, ಯಾವ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

  ಅಪ್ಪು ಇಲ್ಲದ ನೋವಿನ ಜೊತೆಗೆ ಸಿನಿಮಾ ಕೆಲಸಗಳಲ್ಲಿ ಶಿವಣ್ಣ ಬ್ಯೂಸಿ!

  ಅಪ್ಪು ಇಲ್ಲದ ನೋವಿನ ಜೊತೆಗೆ ಸಿನಿಮಾ ಕೆಲಸಗಳಲ್ಲಿ ಶಿವಣ್ಣ ಬ್ಯೂಸಿ!

  ಶಿವರಾಜ್ ಕುಮಾರ್ ತಮ್ಮ ಸಹೋದರ ಪುನೀತ್‌ ರಾಜ್‌ಕುಮಾರ್‌ ಅವರ ಅಗಲಿಕೆಯ ನೋವಿನೊಂದಿಗೆ ಮುಂದೇ ಸಾಗುತ್ತಲಿದ್ದಾರೆ. ಮುಂದಿನ ಸಿನಿಮಾಗಳ ಕೆಲಸಗಳನ್ನು ಆರಂಭಿಸಿದ್ದಾರೆ. 'ವೇದ' ಹಾಗೂ 'ನೀ ಸಿಗುವವರೆಗೂ' ಸಿನಿಮಾಗಳಲ್ಲಿ ನಟಿಸಲಿದ್ದಾರೆ. 'ವೇದ' ಗೀತಾ ಪಿಕ್ಚರ್ಸ್ ನ ಹೋಮ್ ಪ್ರೊಡಕ್ಷನ್ ನಿರ್ಮಾಣದ ಚಿತ್ರವಾಗಿದೆ.

  English summary
  Singer Aditi Sagar To Make Her Acting Debut Alongside Shiva Rajkumar In His 125th Movie Veda
  Tuesday, November 23, 2021, 10:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X