»   » ಚಿತ್ರರಂಗಕ್ಕೆ ಕಾಲಿಟ್ಟ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ !

ಚಿತ್ರರಂಗಕ್ಕೆ ಕಾಲಿಟ್ಟ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ !

Posted By:
Subscribe to Filmibeat Kannada
ಅರುಣ್ ಸಾಗರ್ ಮಗಳು ಅದಿತಿ ಸಾಗರ್ ಸ್ಯಾಂಡಲ್ ವುಡ್ ಗೆ ಎಂಟ್ರಿ | Filmibeat Kannada

ಅಪ್ಪ ಚಿತ್ರರಂಗದಲ್ಲಿ ಇದ್ದರೆ ಅವರ ಮಕ್ಕಳು ಕೂಡ ಹೆಚ್ಚಾಗಿ ಅದೇ ಹಾದಿಯಲ್ಲಿ ಮುಂದುವರೆಯುತ್ತಾರೆ. ಕನ್ನಡ ಚಿತ್ರರಂಗದ ಅನೇಕ ನಟರ ಮಕ್ಕಳು ಈಗಾಗಲೇ ಸಿನಿಮಾ ಮಾಡಿದ್ದಾರೆ. ಈಗ ನಟ ಅರುಣ್ ಸಾಗರ್ ಪುತ್ರಿ ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ರಂಗಭೂಮಿ ಹಿನ್ನಲೆಯಿಂದ ಬಂದಿರುವ ಅರುಣ್ ಸಾಗರ್ ಒಳ್ಳೆಯ ನಟ. ನಾಟಕ, ಸಾಹಿತ್ಯದ ಬಗ್ಗೆ ಹೆಚ್ಚು ಒಲವು ಇರುವ ಅರುಣ್ ಸಾಗರ್ ಈಗ ತಮ್ಮ ಮಗಳನ್ನು ಕೂಡ ಕಲೆಯ ಜಗತ್ತಿಗೆ ಪರಿಚಯ ಮಾಡುತ್ತಿದ್ದಾರೆ. ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್ ಈಗ ಗಾಯಕಿ ಆಗಿ ಕನ್ನಡ ಸಿನಿಮಾರಂಗ ಪ್ರವೇಶ ಮಾಡಿದ್ದಾರೆ. ಈಗಾಗಲೇ ರಂಗ ಗೀತೆ, ಇಂಗ್ಲೀಷ್ ಹಾಡುಗಳು ಸೇರಿದಂತೆ ಸಾಕಷ್ಟು ಹಾಡುಗಳನ್ನು ಹಾಡಿ ಯೂಟ್ಯೂಬ್ ನಲ್ಲಿ ಜನಪ್ರಿಯತೆ ಗಳಿಸಿದ ಅದಿತಿ ಸಾಗರ್ ಈಗ ಚಿತ್ರಗೀತೆ ಹಾಡುವುದಕ್ಕೆ ಶುರು ಮಾಡಿದ್ದಾರೆ. ಮುಂದೆ ಓದಿ...

'ರಾಂಬೋ 2' ಸಿನಿಮಾ

ಸ್ಯಾಂಡಲ್ ವುಡ್ ನಲ್ಲಿ ಬರುತ್ತಿರುವ ಹೊಸ ಚಿತ್ರವಾದ 'ರಾಂಬೋ 2' ಸಿನಿಮಾದಲ್ಲಿ ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್ ಒಂದು ಹಾಡನ್ನು ಹಾಡಿದ್ದಾರೆ. ಈ ಚಿತ್ರದ ಮೂಲಕ ಅವರ ಸಿನಿಮಾ ಜರ್ನಿ ಶುರುವಾಗಿದೆ.

ಅರ್ಜುನ್ ಜನ್ಯ ಸಂಗೀತ

ಈಗಾಗಲೇ ಕನ್ನಡಕ್ಕೆ ಅನೇಕ ಗಾಯಕರನ್ನು ಪರಿಚಯ ಮಾಡಿರುವ ಅರ್ಜುನ್ ಜನ್ಯ ಈಗ ಅದಿತಿ ಸಾಗರ್ ಅವರಿಗೆ 'ರಾಂಬೋ 2' ಚಿತ್ರದಲ್ಲಿ ಹಾಡುವ ಅವಕಾಶ ನೀಡಿದ್ದಾರೆ.

ವಿಭಿನ್ನ ಧ್ವನಿ

'ರಾಂಬೋ 2' ಚಿತ್ರದ ''ಧಮ್ ಮಾರೋ ಧಮ್..'' ಎಂಬ ಹಾಡನ್ನು ಅದಿತಿ ಸಾಗರ್ ಹಾಡಿದ್ದಾರೆ. ತಮ್ಮ ಮೊದಲ ಹಾಡಿನಲ್ಲಿಯೇ ಅವರ ಗಾಯನ ಪ್ರತಿಭೆಯನ್ನು ಸಾಬೀತು ಮಾಡಿದ್ದಾರೆ. ಅವರ ಧ್ವನಿ ನಿಜಕ್ಕೂ ಬೇರೆ ಗಾಯಕರಿಗಿಂತ ತುಂಬ ವಿಭಿನ್ನವಾಗಿದೆ.

ಸಂತಸದಲ್ಲಿ ಅರುಣ್ ಸಾಗರ್

''ಇವತ್ತು ನನಗೆ ಬಹಳ ಖುಷಿ ಆದ ದಿನ. ಎಲ್ಲ ಟೆಕ್ನಿಷಿಯನ್ ಗಳು ಸೇರಿ ನಿರ್ಮಾಣ ಮಾಡುತ್ತಿರುವ ರಾಂಬೋ 2. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅವರ ಮ್ಯೂಸಿಕ್ ಗೆ ನನ್ನ ಮಗಳು ಹಾಡುತ್ತಿದ್ದಾಳೆ. ನನ್ನ ಮಗಳಿಗೆ ಹಾಡುವುದಕ್ಕೆ ಅವಕಾಶ ಮಾಡಿ ಕೊಟ್ಟ ಸ್ನೇಹಿತರಿಗೆ ಪ್ರತಿಯೊಬ್ಬರಿಗೆ ಧನ್ಯವಾದ ಹೇಳುತ್ತೇನೆ. ನಮ್ಮನ್ನು ಹೇಗೆ ನೀವು ಆರ್ಶಿವದಿಸಿದ್ರಿ ಅದೇ ರೀತಿ ನನ್ನ ಮಗಳನ್ನು ಆಶಿರ್ವಾದ ಮಾಡಿ ಬೆಳಸಿ ಅಂತ ಕೇಳಿಕೊಳ್ಳುತ್ತೇನೆ. ರಾಂಬೋ 2 ತಂಡಕ್ಕೆ ಒಳ್ಳೆಯದಾಗಲಿ.'' ಎಂದು ಅರುಣ್ ಸಾಗರ್ ಮಗಳ ಗಾಯನದ ಬಗ್ಗೆ ಮಾತನಾಡಿದ್ದಾರೆ.

ಚಿತ್ರೀಕರಣ ಮುಗಿಸಿ ತವರಿಗೆ ಬಂದ 'Rambo' ಶರಣ್

ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ

ಯೂ ಟ್ಯೂಬ್ ನಲ್ಲಿ ಈ ಹಾಡು ಇದೀಗ ಬಿಡುಗಡೆಯಾಗಿದೆ. ಹಾಡು ನೋಡಿದ ಅನೇಕರು ಕಮೆಂಟ್ ಮಾಡಿ ಅದಿತಿ ಸಾಗರ್ ಅವರ ಧ್ವನಿಯನ್ನು ಕೊಂಡಾಡಿದ್ದಾರೆ.

ಅರುಣ್ ಸಾಗರ್ ಗೋದಾಮಿಗೆ ಬೆಂಕಿ: ಕಲಾಕೃತಿಗಳು ಭಸ್ಮ

'ರಾಂಬೋ' ಚಿತ್ರದ ಬಗ್ಗೆ

'ರಾಂಬೋ 2' ಚಿತ್ರಕ್ಕೆ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಲಡ್ಡು ಸಿನಿಮಾ ಹೌಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಚಿತ್ರದಲ್ಲಿ ನಟ ಶರಣ್ ಮತ್ತು ನಟಿ ಆಶಿಕಾ ರಂಗನಾಥ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

English summary
Kannada actor Arun Sagar's daughter Aditi Sagar debuts as a singer. Aditi Sagar sang a song to Arjun Janya musical 'Rambo 2' kannada movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X