'ವಿಸ್ಮಯ' ಸೆಟ್ ನಲ್ಲಿ ಆಗಿದ್ದೇನು: ನಿರ್ದೇಶಕ ಅರುಣ್ ವೈದ್ಯನಾಥನ್ ಏನಂತಾರೆ.?

ದಕ್ಷಿಣ ಭಾರತದ ಚಿತ್ರರಂಗದಲ್ಲಿ 'ಜೆಂಟಲ್ ಮ್ಯಾನ್' ಎಂದೇ ಪ್ರಖ್ಯಾತಿ ಪಡೆದಿರುವ ನಟ ಅರ್ಜುನ್ ಸರ್ಜಾ ವಿರುದ್ಧ ಕನ್ನಡ ನಟಿ ಶ್ರುತಿ ಹರಿಹರನ್ ಗುಡುಗಿದ್ದಾರೆ. ''ವಿಸ್ಮಯ' ಚಿತ್ರದ ರಿಹರ್ಸಲ್ ವೇಳೆ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದರು'' ಎಂದು ನಟಿ ಶ್ರುತಿ ಹರಿಹರನ್ ಆರೋಪಿಸಿದ್ದಾರೆ.

''ನಾನು ಈ ರೀತಿ ಮಾಡಿಲ್ಲ. ಅವರನ್ನು ಸುಮ್ಮನೆ ತಬ್ಬಿಕೊಳ್ಳುವ ಅಗತ್ಯ ನನಗೆ ಇಲ್ಲ. ಆ ಚಿತ್ರದಲ್ಲಿ ಗಂಡ-ಹೆಂಡತಿಯ ರೊಮ್ಯಾಂಟಿಕ್ ದೃಶ್ಯಗಳು ಹೆಚ್ಚಿತ್ತು. ನಾನೇ ನಿರ್ದೇಶಕರಿಗೆ ಹೇಳಿ ಕಟ್ ಮಾಡಿಸಿದೆ. ಯಾಕಂದ್ರೆ, ನನಗೆ ಅದು ಮುಜುಗರ ಆಗುತ್ತಿತ್ತು'' ಎಂದಿದ್ದಾರೆ ನಟ ಅರ್ಜುನ್ ಸರ್ಜಾ.

ಇದೀಗ ಇದೇ ವಿವಾದದ ಬಗ್ಗೆ ನಿರ್ದೇಶಕ ಅರುಣ್ ವೈದ್ಯನಾಥನ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. 'ವಿಸ್ಮಯ' ಚಿತ್ರೀಕರಣದ ವೇಳೆ ಏನಾಯ್ತು ಎಂದು ನಿರ್ದೇಶಕ ಅರುಣ್ ವೈದ್ಯನಾಥನ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಅದರ ಕನ್ನಡ ಅನುವಾದ ಇಲ್ಲಿದೆ, ಓದಿರಿ...

ಪಕ್ಕಾ ಪ್ರೊಫೆಶನಲ್

ಪಕ್ಕಾ ಪ್ರೊಫೆಶನಲ್

''ಅರ್ಜುನ್ ಸರ್ ಮತ್ತು ಶ್ರುತಿ ಹರಿಹರನ್, ಇಬ್ಬರೂ ನನಗೆ ಆತ್ಮೀಯ ಸ್ನೇಹಿತರು ಮತ್ತು ಅವರ ಕುಟುಂಬಗಳ ಪರಿಚಯವೂ ನನಗಿದೆ. ಸೆಟ್ ನಲ್ಲಿ ಅರ್ಜುನ್ ಸರ್ ಪರ್ಫೆಕ್ಟ್ ಜೆಂಟಲ್ ಮ್ಯಾನ್. ನಟನೆಯ ವಿಷಯದಲ್ಲಿ ಅರ್ಜುನ್ ಸರ್ ಪಕ್ಕಾ ಪ್ರೊಫೆಶನಲ್. ನಟಿ ಶ್ರುತಿ ಹರಿಹರನ್ ಕೂಡ ವೃತ್ತಿಪರ ನಟಿ'' - ಅರುಣ್ ವೈದ್ಯನಾಥನ್, 'ವಿಸ್ಮಯ' ನಿರ್ದೇಶಕ

ರಿಹರ್ಸಲ್ ಮಾಡಿದ್ದು ನಿಜ

ರಿಹರ್ಸಲ್ ಮಾಡಿದ್ದು ನಿಜ

''ಮೀಟೂ ಅಭಿಯಾನದಲ್ಲಿ ನಟಿ ಶ್ರುತಿ ಹರಿಹರನ್, ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದಾರೆ. ಇದು ನನಗೆ ಆಘಾತ ತಂದಿದೆ. ನಟಿ ಶ್ರುತಿ ಹರಿಹರನ್ ಯಾವ ಸೀನ್ ಬಗ್ಗೆ ಮಾತನಾಡುತ್ತಿದ್ದಾರೋ, ಅದು ರೊಮ್ಯಾಂಟಿಕ್ ಸೀನ್. ಶಾಟ್ ಗೆ ಮುನ್ನ ರಿಹರ್ಸಲ್ ಮಾಡಿ ಐಡಿಯಾಗಳನ್ನ ಚರ್ಚೆ ಮಾಡಿದ್ದು ನಿಜ'' - ಅರುಣ್ ವೈದ್ಯನಾಥನ್, 'ವಿಸ್ಮಯ' ನಿರ್ದೇಶಕ

ರಿಹರ್ಸಲ್ ವೇಳೆ ಏನಾಯ್ತು.?

ರಿಹರ್ಸಲ್ ವೇಳೆ ಏನಾಯ್ತು.?

''ಕೆಲವು ಇಂಪ್ರೊವೈಸೇಷನ್ ಗಳನ್ನ ನಾನು ಎಡಿಟ್ ಮಾಡಿದೆ. ಕೊನೆಗೆ ಸೀನ್ ನ ಶೂಟಿಂಗ್ ಮಾಡಿದ್ವಿ. ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಇಂಪ್ರೊವೈಸೇಷನ್ ಕಾಮನ್. ಎಷ್ಟೋ ಬಾರಿ ಮ್ಯಾಜಿಕ್ ಆಗುವುದು ಇಂತಹ ಇಂಪ್ರೊವೈಸೇಷನ್ ಗಳಿಂದಲೇ'' - ಅರುಣ್ ವೈದ್ಯನಾಥನ್, 'ವಿಸ್ಮಯ' ನಿರ್ದೇಶಕ

ಅಂದು ಅರ್ಜುನ್ ಸರ್ಜಾ ಏನಂದಿದ್ದರು.?

ಅಂದು ಅರ್ಜುನ್ ಸರ್ಜಾ ಏನಂದಿದ್ದರು.?

''ಶೂಟಿಂಗ್ ನಡೆದಿದ್ದು ಎರಡು ವರ್ಷಗಳ ಹಿಂದೆ. ಘಟನೆಯ ಕ್ಷಣ ಕ್ಷಣದ ಮಾಹಿತಿ ನನಗೆ ನೆನಪಿಲ್ಲ. ಆದ್ರೆ, ಒಂದನ್ನ ಮಾತ್ರ ನಾನು ಖಚಿತ ಪಡಿಸುವೆ. ಅದೇನೆಂದರೆ, ಆ ಸೀನ್ ತೆರೆಮೇಲೆ ಬಂದಿರುವುದಕ್ಕಿಂತ ಹೆಚ್ಚು ರೊಮ್ಯಾಂಟಿಕ್ ಆಗಿತ್ತು. ಆದ್ರೆ, ಸ್ಕ್ರಿಪ್ಟಿಂಗ್ ಸ್ಟೇಜ್ ನಲ್ಲಿಯೇ ಅಂತಹ ದೃಶ್ಯಗಳನ್ನ ಕಮ್ಮಿ ಮಾಡುವಂತೆ ಅರ್ಜುನ್ ಸರ್ಜಾ ಮನವಿ ಮಾಡಿದ್ದರು'' - ಅರುಣ್ ವೈದ್ಯನಾಥನ್, 'ವಿಸ್ಮಯ' ನಿರ್ದೇಶಕ

ಸೀನ್ ನಲ್ಲಿ ಬದಲಾವಣೆ

ಸೀನ್ ನಲ್ಲಿ ಬದಲಾವಣೆ

''ವಯಸ್ಸಿಗೆ ಬಂದಿರುವ ಹೆಣ್ಮಕ್ಕಳು ನನಗೆ ಇದ್ದಾರೆ. ಇಂತಹ ದೃಶ್ಯಗಳಲ್ಲಿ ನಾನು ಅಭಿನಯಿಸಲ್ಲ'' ಅಂತ ಅರ್ಜುನ್ ಸರ್ಜಾ ಹೇಳಿದ್ದರು. ನಾನು ಅವರ ಮಾತಿಗೆ ಬೆಲೆ ಕೊಟ್ಟು ಸೀನ್ ನ ಬೇರೆ ತರಹ ಬರೆದಿದ್ದೆ. ಇದು ಸತ್ಯ'' - ಅರುಣ್ ವೈದ್ಯನಾಥನ್, 'ವಿಸ್ಮಯ' ನಿರ್ದೇಶಕ

ದೂರು ಬಂದಿಲ್ಲ

ದೂರು ಬಂದಿಲ್ಲ

''ಸೆಟ್ ಹೊರಗೆ ಇಬ್ಬರ ನಡುವೆ ಏನಾಯ್ತು, ದೂರವಾಣಿ ಕರೆ ಹಾಗೂ ಚಾಟ್ ಗಳಲ್ಲಿ ಏನೇನು ನಡೆಯಿತು ಎಂಬುದು ನನಗೆ ಗೊತ್ತಿಲ್ಲ. ಯಾಕಂದ್ರೆ, ಈ ಬಗ್ಗೆ ದೂರು ಬಂದಿಲ್ಲ. ಹೀಗಾಗಿ, ಇದರ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ'' - ಅರುಣ್ ವೈದ್ಯನಾಥನ್, 'ವಿಸ್ಮಯ' ನಿರ್ದೇಶಕ

ಬೇಸರ ತಂದಿದೆ

ಬೇಸರ ತಂದಿದೆ

''ಅರ್ಜುನ್ ಸರ್ ಹಾಗೂ ಶ್ರುತಿ ನನಗೆ ಸ್ನೇಹಿತರು. ಚಿತ್ರದ ಮೇಕಿಂಗ್ ವೇಳೆ ನಾವೆಲ್ಲ ಖುಷಿಯಾಗಿದ್ವಿ. ಈಗ ಅದರ ಬಗ್ಗೆ ಈ ರೀತಿ ಹೇಳಿಕೆ ನೀಡುತ್ತಿರುವುದು ಬೇಸರ ತಂದಿದೆ. ಒಳ್ಳೆ ಚಿತ್ರವನ್ನು ಮಾಡಲು ಎಲ್ಲರೂ ಒಂದು ತಂಡದಂತೆ ಕೆಲಸ ಮಾಡಿದ್ವಿ'' - ಅರುಣ್ ವೈದ್ಯನಾಥನ್, 'ವಿಸ್ಮಯ' ನಿರ್ದೇಶಕ

More from Filmibeat

English summary
Director Arun Vaidyanathan reacts on Sruthi Hariharan's allegations against Arjun Sarja during the shooting of 'Vismaya'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X