For Quick Alerts
  ALLOW NOTIFICATIONS  
  For Daily Alerts

  ದರ್ಶನ್-ಉಮಾಪತಿ ಪ್ರಕರಣದ 'ಲೇಡಿ'ಯ ಮತ್ತೊಂದು 'ದೋಖಾ' ಬಯಲು

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಪ್ತರು ಮತ್ತು ನಿರ್ಮಾಪಕ ಉಮಾಪತಿ ಹಾಗೂ ಮಹಿಳೆ ಅರುಣಾ ಕುಮಾರಿಗೆ ಸಂಬಂಧಿಸಿದ 25 ಕೋಟಿ ಹಣ ವಂಚನೆ ಯತ್ನ ಪ್ರಕರಣಕ್ಕೆ ಸ್ಪಷ್ಟನೆ ಸಿಕ್ಕಿಲ್ಲ. ಇಲ್ಲಿ ತಪ್ಪು ಯಾರದ್ದು, ಮಹಿಳೆಯ ಹಿಂದೆ ಇರೋದು ಯಾರು ಎನ್ನುವ ಗೊಂದಲ ಉಂಟಾಗಿದೆ. ಈ ನಡುವೆ ಅರುಣಾ ಕುಮಾರಿಯ ಮತ್ತೊಂದು ದೋಖಾ ಕಥೆ ಬಹಿರಂಗವಾಗಿದೆ.

  ಬೆಂಗಳೂರಿನ ಉದ್ಯಮಿ ನಾಗವರ್ಧನ್ ಎನ್ನುವವರು ಅರುಣಾ ಕುಮಾರಿಯಿಂದ ನಾನು ಮೋಸ ಹೋಗಿದ್ದೆ ಎನ್ನುವ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಈ ಕುರಿತು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಮಾಡಿದ ನಾಗವರ್ಧನ್, ನಟ ದರ್ಶನ್-ಉಮಾಪತಿ ಅವರವಿಚಾರದಲ್ಲಿ ವಂಚಿನೆಗೆ ಯತ್ನಿಸಿರುವ ಮಹಿಳೆ ನನ್ನ ಬಳಿಯೂ ಲಕ್ಷಾಂತರ ರೂಪಾಯಿ ದೋಚಿದ್ದರು ಎಂದು ಆಘಾತಕಾರಿ ಮಾಹಿತಿ ಹೊರಹಾಕಿದ್ದಾರೆ. ಏನಿದು ಹೊಸ ಕಹಾನಿ? ಮುಂದೆ ಓದಿ...

  ನಮ್ಮ ನಿರ್ಮಾಪಕರನ್ನು ನಾನು ಬಿಟ್ಟುಕೊಡಲ್ಲ: ಉಮಾಪತಿ ಪರ ದರ್ಶನ್ ಬ್ಯಾಟಿಂಗ್ನಮ್ಮ ನಿರ್ಮಾಪಕರನ್ನು ನಾನು ಬಿಟ್ಟುಕೊಡಲ್ಲ: ಉಮಾಪತಿ ಪರ ದರ್ಶನ್ ಬ್ಯಾಟಿಂಗ್

  ಸಿನಿಮಾ ಮಾಡುವುದಾಗಿ ನಂಬಿಸಿ ವಂಚನೆ

  ಸಿನಿಮಾ ಮಾಡುವುದಾಗಿ ನಂಬಿಸಿ ವಂಚನೆ

  ಸಿನಿಮಾ ಮಾಡ್ತೇನೆ, ನಾನು ನಿರ್ಮಾಪಕಿ. ನಿಮ್ಮನ್ನು ಹೀರೋ ಮಾಡ್ತೇನೆ ಎಂದು ನಂಬಿಸಿ ಆ ಮಹಿಳೆ ಉದ್ಯಮಿ ನಾಗವರ್ಧನ್ ಜೊತೆ ಪರಿಚಯ ಬೆಳೆಸಿದ್ದರು. ನಂದಿನಿ ಎಂಬ ಹೆಸರಿನಿಂದ ಸಂಪರ್ಕಕ್ಕೆ ಬಂದ ಮಹಿಳೆ 6 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ದೋಚಿದ್ದರು ಎಂದು ಉದ್ಯಮಿ ನಾಗವರ್ಧನ್ ಪ್ರೆಸ್‌ಮೀಟ್‌ನಲ್ಲಿ ತಿಳಿಸಿದರು. ನಾಗವರ್ಧನ್ ಗೀತೆರಚನೆಕಾರ ನಾಗೇಂದ್ರ ಪ್ರಸಾದ್ ಅವರ ಸ್ನೇಹಿತ.

  ನನ್ನ ಸ್ನೇಹಿತರನ್ನು ದೂರ ಮಾಡಿದಳು

  ನನ್ನ ಸ್ನೇಹಿತರನ್ನು ದೂರ ಮಾಡಿದಳು

  ''ನನ್ನ ಸಂಪರ್ಕಕ್ಕೆ ಬಂದ ಮೇಲೆ ನನ್ನ ಸುತ್ತಮುತ್ತ ಇದ್ದವರನ್ನು ದೂರ ಮಾಡಿದಳು. ಬಹಳ ವರ್ಷದಿಂದ ಜೊತೆಯಲ್ಲಿದ್ದ ನಾಗೇಂದ್ರ ಪ್ರಸಾದ್ ಅವರನ್ನು ಸಹ ಈಕೆಯಿಂದಲೇ ದೂರ ಆಗಬೇಕಾಯಿತು. ಈಗ ದರ್ಶನ್, ಉಮಾಪತಿ ಅವರ ವಿಚಾರದಲ್ಲೂ ಅದೇ ಆಗಿದೆ'' ಎಂದು ನಾಗವರ್ಧನ್ ಮಾಹಿತಿ ನೀಡಿದ್ದಾರೆ.

  ದುಡ್ಡು ಲೂಟಿ ಮಾಡುವುದು ಆಕೆಯ ಉದ್ದೇಶ

  ದುಡ್ಡು ಲೂಟಿ ಮಾಡುವುದು ಆಕೆಯ ಉದ್ದೇಶ

  ''ಸಿನಿಮಾ ಮಾಡೋಣ ಅಂತ ಬಂದ್ರು. ಆಮೇಲೆ ಸಿನಿಮಾ ಲೇಟ್ ಆಗುತ್ತೆ, ಸೈಟ್ ಮಾರಾಟ ಮಾಡಬೇಕು ಅಂತ ಬಿಲ್ಡರ್ ರೀತಿ ಬಿಂಬಿಸಿಕೊಂಡರು. ಅದಾದ ಮೇಲೆ ನನಗೆ ನನ್ನ ಸಂಬಂಧಿಕರಿಂದ ಬೆದಿರಕೆ ಇದೆ, ನನಗೆ ರಕ್ಷಣೆ ಕೊಡಿ ಎಂದು ಕೇಳಿಕೊಂಡರು. ಅವರ ಮಾತನ್ನು ನಂಬಿ ಅವರಿಗೆ ರಕ್ಷಣೆಯೂ ಕೊಟ್ಟೆ. ಇದರಿಂದ ನಾನು ಸ್ವಲ್ಪ ತಿಂಗಳು ಮನೆಬಿಟ್ಟು ಇರಬೇಕಾಯಿತು. ನನ್ನ ಪತ್ನಿ ಬ್ಯಾಟರಾಯನಪುರದಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ಸಹ ಕೊಟ್ಟಿದ್ದರು. ಈ ಅಂತರದಲ್ಲಿ ಬಹಳಷ್ಟು ಹಣ ನನ್ನಿಂದು ತೆಗೆದುಕೊಂಡಿದ್ದರು. ಈಕೆಯ ಜೊತೆಗಿನ ಸ್ನೇಹದಿಂದ 15 ಲಕ್ಷಕ್ಕೂ ಹೆಚ್ಚು ಕಳೆದುಕೊಂಡಿದ್ದೇನೆ'' ಎಂದು ನಾಗವರ್ಧನ್ ತಿಳಿಸಿದರು.

  25 ಕೋಟಿ ವಂಚನೆ ಪ್ರಕರಣದಲ್ಲಿ ಡಿ ಬಾಸ್ ಬೆಂಬಲಕ್ಕೆ ನಿಂತ ನಾಗವರ್ಧನ್ ಯಾರು..? | Filmibeat Kannada
  ದರ್ಶನ್-ಉಮಾಪತಿಗೆ ವಿಷಯ ಮುಟ್ಟಿಸಿದ್ದೇನೆ

  ದರ್ಶನ್-ಉಮಾಪತಿಗೆ ವಿಷಯ ಮುಟ್ಟಿಸಿದ್ದೇನೆ

  ದರ್ಶನ್ ಹಾಗೂ ಉಮಾಪತಿ ಅವರ ನಡುವಿನ ಈ ಘಟನೆಯಲ್ಲಿ ಅರುಣಾ ಕುಮಾರಿಯನ್ನು ನೋಡಿದ ನಾನು, ಈ ವಿಷಯವನ್ನು ಉಮಾಪತಿ ಮತ್ತು ದರ್ಶನ್ ಇಬ್ಬರಿಗೂ ವಿಷಯ ಮುಟ್ಟಿಸಿದ್ದೇನೆ. ನನ್ನ ಜೀವನದಲ್ಲಿ ಆದ ಘಟನೆ ದರ್ಶನ್ ವಿಚಾರದಲ್ಲಿ ಆಗಬಾರದು'' ಎಂದು ನಾಗೇಂದ್ರ ಪ್ರಸಾದ್ ಸ್ನೇಹಿತ ನಾಗವರ್ಧನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

  English summary
  Aruna Kumari cheated lyricist Dr Nagendra Prasad friend; promise to make hero.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X