'ನನ್ನ ಜೀವನ ಕೆಟ್ಟರೆ ಯಾರೂ ಬರಲ್ಲ': ದರ್ಶನ್ ಆರೋಪಕ್ಕೆ ಅರುಣಾ ಕುಮಾರಿ ತಿರುಗೇಟು

25 ಕೋಟಿ ವಂಚನೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಅರುಣಾ ಕುಮಾರಿ ಮಂಗಳವಾರ ಬೆಳಗ್ಗೆ ವಿಡಿಯೋವೊಂದನ್ನು ಬಹಿರಂಗಪಡಿಸಿದ್ದಾರೆ.

ಅಜ್ಙಾತ ಸ್ಥಳದಿಂದ ವಿಡಿಯೋ ಬೈಟ್ ರಿಲೀಸ್ ಮಾಡಿರುವ ಅರುಣಾ ಕುಮಾರಿ ಈ ಪ್ರಕರಣದಲ್ಲಿ 'ನನ್ನದು ಪ್ರಮುಖ ಪಾತ್ರವಿಲ್ಲ, ನನ್ನನ್ನು ಬಳಸಿಕೊಂಡಿದ್ದಾರೆ ಅಷ್ಟೇ' ಎಂದಿದ್ದಾರೆ. 'ಹೆಣ್ಣು ಎಂಬ ಕಾರಣಕ್ಕೆ ಸಮಾಜದಲ್ಲಿ ನನ್ನ ಬಗ್ಗೆ ತೇಜೋವಧೆ ಮಾಡುವುದು ತಪ್ಪು' ಎಂದು ನಿರ್ಮಾಪಕ ಉಮಾಪತಿ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಸೀಲ್ ಹಾಕಿ 2 ಲಕ್ಷ ಲಂಚ ಪಡೆಯುತ್ತಾರೆ ಎಂದು ನಟ ದರ್ಶನ್ ಮಾಡಿದ್ದ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಅರುಣಾ ಕುಮಾರಿ ''ಅದು ನನ್ನ ಜೀವನ, ನನಗೆ ಯಾರೂ ಸಹಾಯ ಮಾಡೋಕೆ ಬರಲ್ಲ'' ಎಂದಿದ್ದಾರೆ.

 Rs 25 cr fraud case controversy: Aruna Kumari React about Darshan Alligation

ಸೋಮವಾರ ಬೆಳಗ್ಗೆ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಟ ದರ್ಶನ್ 'ಅರುಣಾ ಕುಮಾರಿ ಬ್ಯಾಂಕ್ ಮ್ಯಾನೇಜರ್ ಅಲ್ಲ, ಆಕೆ ಪಿಯುಸಿ ಪಾಸ್ ಆಗಿಲ್ಲ' ಎಂದು ಬಹಿರಂಗಪಡಿಸಿದ್ದರು. ಅದೇ ಸಂದರ್ಭದಲ್ಲಿ ಅರುಣಾ ಕುಮಾರಿ ಅವರ ಪತಿಯನ್ನು ವೇದಿಕೆಗೆ ಕರೆಯಿಸಿ 'ಅರುಣಾ ಕುಮಾರಿ ಸೀಲ್ ಹಾಕೋಕೆ 2 ಲಕ್ಷ ಲಂಚ ಪಡೆಯುತ್ತಾರೆ' ಎಂದು ದೂರಿದ್ದರು.

ಈ ವಿಷಯಕ್ಕೆ ಅರುಣಾ ಕುಮಾರಿ ಪ್ರತಿಕ್ರಿಯಿಸಿ, ''ಜನರಲ್ ಆಗಿ ಅದು ನನ್ನ ಲೈಫ್. ನಾನು ಏನ್ ತೆಗೆದುಕೊಳ್ತೀನಿ, ಬಿಡ್ತೀನಿ ಅದು ನನ್ನ ಬದುಕು. ನನ್ನ ಲೈಫ್ ಕೆಟ್ಟರೆ ದರ್ಶನ್, ಉಮಾಪತಿ, ಮತ್ತೊಬ್ಬರು, ಮತ್ತೊಬ್ಬರು ಬೇರೆ ಯಾರೂ ಬರಲ್ಲ'' ಎಂದಿದ್ದಾರೆ.

''ಇದು ದೊಡ್ಡವರ ವಿಷಯ, ನನ್ನನ್ನು ಸುಮ್ಮನೆ ಎಳೆದುಕೊಂಡು ಬಂದಿದ್ದಾರೆ. ಅವರವರೇ ಬಗೆಹರಿಸಿಕೊಳ್ಳಬಹುದಿತ್ತು. ಸುಮ್ಮನೆ ನನ್ನ ಮರ್ಯಾದೆ ಹಾಳು ಮಾಡಿದರು'' ಎಂದು ಅರುಣಾ ಕುಮಾರಿ ಆಕ್ರೋಶ ಹೊರಹಾಕಿದ್ದಾರೆ.

More from Filmibeat

English summary
Rs 25 cr fraud case controversy: Aruna Kumari React about Darshan Alligation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X