ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಯಲ್ ಸ್ಟಾರ್ ಉಪೇಂದ್ರ 'ನೆಕ್ಸ್ಟ್‌ ಲೆವೆಲ್'

ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಫಿಲ್ಮ್ ಮೇಕರ್ಸ್ ನೆಕ್ಸ್ಟ್‌ ಲೆವೆಲ್ ಸಿನಿಮಾಗಳನ್ನು ಮಾಡಬೇಕಾಗಿದೆ. ದೊಡ್ಡ ದೊಡ್ಡ ಕನಸು ಕಂಡು ಅದನ್ನು ತೆರೆಗೆ ತರುವ ಸಾಹಸ ನಡೀತಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನ ಇದು. ದೊಡ್ಡ ಬಜೆಟ್, ದೊಡ್ಡ ಸ್ಕೇಲ್, ದೊಡ್ಡದಾಗಿ ಪ್ರಚಾರ, ಮಾರ್ಕೆಟಿಂಗ್ ಮಾಡಿ ಸಿನಿಮಾವನ್ನು ದೊಡ್ಡದಾಗಿಯೇ ಬಿಡುಗಡೆ ಮಾಡಬೇಕಾಗಿದೆ.

ಸೋಶಿಯಲ್ ಮೀಡಿಯಾ, ಓಟಿಟಿ ಎಲ್ಲಾ ಬಂದು ಜನ ಮನೆಯಲ್ಲೆ ಕೂತು ಸಿನಿಮಾ ನೋಡುವಂತಾಗಿದೆ. ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಬೇಕು ಅಂದರೆ ಸಿನಿಮಾದಲ್ಲಿ ನೆಕ್ಸ್ಟ್ ಲೆವೆಲ್ ಆಗಿ ಏನಾದರೂ ಇರಬೇಕು. 25 ವರ್ಷಗಳ ಹಿಂದೆಯೇ ಉಪೇಂದ್ರ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದವರು. ಅವರ ಸಿನಿಮಾಗಳು ಪರಭಾಷೆಗೆ ಡಬ್ ಆಗಿ ಸದ್ದು ಮಾಡಿದ್ದವು. ಇದೀಗ ಉಪ್ಪಿ 'ನೆಕ್ಸ್ಟ್ ಲೆವೆಲ್' ಸಿನಿಮಾ ಒಪ್ಪಿಕೊಂಡಿದ್ದಾರೆ.

Arvind Kaushik Teams Up with Upendra for a Next Level Pan-India Project

ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ 'ನೆಕ್ಸ್ಟ್ ಲೆವೆಲ್' ಸಿನಿಮಾ ಮೂಡಿ ಬರಲಿದೆ. ತರುಣ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ತರುಣ್ ಶಿವಪ್ಪ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಉಪೇಂದ್ರ ಆಲೋಚನೆಗಳು, ಸಿನಿಮಾಗಳು ನೆಕ್ಸ್ಟ್ ಲೆವೆಲ್‌ನಲ್ಲೇ ಇರುತ್ತದೆ. ಇನ್ನು 'ನೆಕ್ಸ್ಟ್ ಲೆವೆಲ್' ಸಿನಿಮಾ ಹೇಗಿರುತ್ತೆ? ಎನ್ನುವ ಕುತೂಹಲ ಮೂಡಿದೆ. ಸಿನಿಮಾ ಬಗ್ಗೆ ನಿರ್ದೇಶಕ ಅರವಿಂದ್ ಕೌಶಿಕ್ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.

ನಟ ಉಪೇಂದ್ರ ಜೊತೆ ಸಿನಿಮಾ ಮಾಡುತ್ತಿರುವ ಬಗ್ಗೆ ಅರವಿಂದ್ ಸಂತಸ ವ್ಯಕ್ತಪಡಿಸಿದ್ದಾರೆ. "ಕನ್ನಡ ಚಿತ್ರರಂಗವನ್ನು ಈಗಾಗಲೇ ನೆಕ್ಸ್ಟ್ ಲೆವೆಲ್‌ಗೆ ತಗೊಂಡು ಹೋಗಿರುವವರ ಜೊತೆ 'ನೆಕ್ಸ್ಟ್ ಲೆವೆಲ್' ಸಿನಿಮಾ ಅಷ್ಟೆ. ಬಹಳ ಕ್ರೇಜಿ ಸಿನಿಮಾ ಇದು. ಇನ್ನುಳಿದ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಕೊಡುತ್ತೇವೆ" ಎಂದು ಅರವಿಂದ್ ತಿಳಿಸಿದ್ದಾರೆ.

Arvind Kaushik Teams Up with Upendra for a Next Level Pan-India Project

ಸದ್ಯ ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ನಡೀತಿದೆ ಎಂದು ನಿರ್ದೇಶಕರು ಹೇಳಿದ್ದಾರೆ. "ಎರಡ್ಮೂರು ತಿಂಗಳಲ್ಲಿ ಮುಗಿಯುತ್ತದೆ. ವರ್ಷದ ಕೊನೆಗೆ ಸಿನಿಮಾ ಆರಂಭಿಸುವ ತಯಾರಿ ನಡೀತಿದೆ. ಟೆಕ್ನಿಕಲಿ ದೊಡ್ಡ ಸಿನಿಮಾ. ಹಾಗಾಗಿ ಆ ಬಗ್ಗೆ ಹೆಚ್ಚಿನ ತಯಾರಿ ನಡೀತಿದೆ. ವಿವಿಧ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಿಸುವ ಪ್ರಯತ್ನ ಶುರುವಾಗಿದೆ" ಎಂದಿದ್ದಾರೆ.

ಉಪೇಂದ್ರಗೆ ಆಕ್ಷನ್ ಕಟ್ ಹೇಳುವ ಬಗ್ಗೆ ಮಾತನಾಡಿ "ನಾನು ಉಪ್ಪಿ ಸರ್ ಅವರಿಂದ ಬಹಳ ಕಲಿತ್ತಿದ್ದೀನಿ. ಅವರ ಸಿನಿಮಾಗಳನ್ನು ನೋಡಿ ಪ್ರೇರಣೆಗೊಂಡಿದ್ದೇನೆ. ಈಗ ಅವರೊಟ್ಟಿಗೆ ಸಿನಿಮಾ ಎನ್ನುವುದು ಕನಸು. ಕಥೆ ಕೇಳಿದ ಕೂಡಲೇ ಸರ್ ಬಂದು ತಬ್ಬಿಕೊಂಡರು. ಈ ಸಿನಿಮಾ ನನಗೆ ಒಂದು ಚಾಲೆಂಜ್. ಅದನ್ನು 'ನೆಕ್ಸ್ಟ್ ಲೆವೆಲ್‌'ನಲ್ಲೇ ತೆರೆಮೇಲೆ ತರಬೇಕು. ಆ ಕಡೆ ಗಮನ ಹರಿಸಿದ್ದೇವೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಸ್ಟಾರ್ ಕಲಾವಿದರು ಇರ್ತಾರೆ. ಈ ಬಗ್ಗೆ ಮಾತುಕತೆ ನಡೀತಿದೆ. ಮುಂದೆ ನೋಡಬೇಕು" ಎಂದು ಮಾಹಿತಿ ನೀಡಿದ್ದಾರೆ.

ಉಪೇಂದ್ರ ಸರ್ ಲೆಜೆಂಡ್. ಅಂತಹ ವ್ಯಕ್ತಿ, ವ್ಯಕ್ತಿತ್ವವನ್ನು ಹ್ಯಾಂಡಲ್ ಮಾಡಲು ಸಿನಿಮಾ ನೆಕ್ಸ್ಟ್ ಲೆವೆಲ್ ಆಗಬೇಕು. ನಿರ್ಮಾಪಕರು ಕೂಡ ಈ ವಿಚಾರದಲ್ಲಿ ಜೊತೆಗಿದ್ದಾರೆ. ಎಲ್ಲವೂ ಕೂಡಿ ಬಂದು ಒಳ್ಳೆ ಸಿನಿಮಾ ಆಗುತ್ತದೆ ಎನ್ನುವ ನಂಬಿಕೆ ಇದೆ. ಜಾನರ್ ಬಗ್ಗೆ ಹೇಳಬೇಕು ಅಂದ್ರೆ 'ನೆಕ್ಸ್ಟ್ ಲೆವೆಲ್' ಅಷ್ಟೆ ಎಂದು ಅರವಿಂದ್ ಕೌಶಿಕ್ ವಿವರಿಸಿದ್ದಾರೆ.

'ನಮ್ ಏರಿಯಾಲ್ ಒಂದಿನ', 'ತುಗ್ಲಕ್', 'ಹುಲಿರಾಯ' ಹಾಗೂ 'ಶಾರ್ದೂಲ' ಸಿನಿಮಾಗಳನ್ನು ಈ ಹಿಂದೆ ಅರವಿಂದ್ ಕೌಶಿಕ್ ಕಟ್ಟಿಕೊಟ್ಟಿದ್ದರು. ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಗುರ್ತಿಸಿಕೊಂಡಿದ್ದಾರೆ. ಇನ್ನು ನಟ ಉಪೇಂದ್ರ ಈಗ 'ಭಾರ್ಗವ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. '45' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಹೊಸದಾಗಿ ಮತ್ಯಾವುದೇ ಸಿನಿಮಾ ಘೋಷಿಸಿಲ್ಲ. 'ಭಾರ್ಗವ' ಬಳಿಕ 'ನೆಕ್ಸ್ಟ್ ಲೆವೆಲ್' ಸಿನಿಮಾ ಶುರುವಾಗುವ ಸಾಧ್ಯತೆಯಿದೆ.

More from Filmibeat

English summary
Director Arvind Kaushik shares his excitement about teaming up with legend Upendra for the upcoming pan-India film Next Level. With high technical standards and star cast discussions underway, the film aims to redefine Kannada cinema;
Read more about: upendra sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X