For Quick Alerts
  ALLOW NOTIFICATIONS  
  For Daily Alerts

  ಮಾರ್ಚ್ ತಿಂಗಳಲ್ಲಿ ನಡೆಯಲಿದೆ ತಮಿಳು ನಟ ಆರ್ಯ ವಿವಾಹ ಮಹೋತ್ಸವ

  |

  ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮದುವೆ ಸೀಸನ್ ಜೋರಾಗಿದೆ. ಮೊನ್ನೆ ಮೊನ್ನೆಯಷ್ಟೇ ರಜನಿಕಾಂತ್ ಪುತ್ರಿ, ನಿರ್ದೇಶಕಿ ಸೌಂದರ್ಯ ರಜನಿಕಾಂತ್ ಕಲ್ಯಾಣ ನಡೆಯಿತು. ಸದ್ಯದಲ್ಲೇ ವಿವಾಹ ಮಾಡಿಕೊಳ್ಳುವುದಾಗಿ ನಟ ವಿಶಾಲ್ ಕೂಡ ಹೇಳಿಕೊಂಡಿದ್ದಾರೆ. ಇದೀಗ ತಮಿಳು ನಟ ಆರ್ಯ ಸರದಿ.

  ಹೌದು, ಕಾಲಿವುಡ್ ನ ಹ್ಯಾಂಡ್ಸಮ್ ಹೀರೋ ಆರ್ಯ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮಾರ್ಚ್ ತಿಂಗಳಲ್ಲಿ ಹೊಸ ಬದುಕು ಆರಂಭಿಸಲು ಆರ್ಯ ಮನಸ್ಸು ಮಾಡಿದ್ದಾರೆ.

  ಪ್ರೇಮಿಗಳ ದಿನದಂದೇ ತಮ್ಮ ಮದುವೆಯ ಸುದ್ದಿಯನ್ನು ಆರ್ಯ ಬಹಿರಂಗ ಪಡಿಸಿದ್ದಾರೆ. ಹಾಗಾದ್ರೆ, ಆರ್ಯ ಕೈಹಿಡಿಯಲಿರುವ ಹುಡುಗಿ ಯಾರು.? ಇವರದ್ದು ಲವ್ ಮ್ಯಾರೇಜಾ.? ಅರೇಂಜ್ಡ್ ಮ್ಯಾರೇಜಾ.? ಅಂತ ಕೇಳ್ತೀರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

  ಆರ್ಯ ಮದುವೆ ಆಗುತ್ತಿರುವ ಹುಡುಗಿ ಯಾರು.?

  ತಮಿಳು ನಟ ಆರ್ಯ ಮದುವೆ ಆಗುತ್ತಿರುವ ಹುಡುಗಿ ಬೇರೆ ಯಾರೂ ಅಲ್ಲ. ಚಿತ್ರ ನಟ ಸಯ್ಯೇಶಾ ಸೈಗಲ್. ಪ್ರೇಮಿಗಳ ದಿನ... ಅಂದ್ರೆ ನಿನ್ನೆ ತಮ್ಮ ಮದುವೆಯ ಗುಟ್ಟನ್ನು ಈ ಜೋಡಿ ಟ್ವಿಟ್ಟರ್ ನಲ್ಲಿ ರಟ್ಟು ಮಾಡಿದೆ.

  ಲವ್ ಕಮ್ ಅರೇಂಜ್ಡ್ ಮ್ಯಾರೇಜ್

  ಲವ್ ಕಮ್ ಅರೇಂಜ್ಡ್ ಮ್ಯಾರೇಜ್

  ಅಂದ್ಹಾಗೆ, ಆರ್ಯ-ಸಯ್ಯೇಶಾ ರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. 2018 ರಲ್ಲಿ ಬಿಡುಗಡೆಯಾದ 'ಘಜನಿಕಾಂತ್' ಚಿತ್ರದಲ್ಲಿ ಆರ್ಯ ಮತ್ತು ಸಯ್ಯೇಶಾ ಒಟ್ಟಾಗಿ ಅಭಿನಯಿಸಿದ್ದರು. ಆಗಲೇ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿತ್ತು. ಇದೀಗ ಇವರಿಬ್ಬರ ಪ್ರೀತಿಗೆ ಕುಟುಂಬದವರು ಸಮ್ಮತಿ ನೀಡಿದ್ದು, ಮುಂದಿನ ತಿಂಗಳು ಮದುವೆ ನಡೆಯಲಿದೆ.

  ಮದುವೆ ಯಾವಾಗ.? ಎಲ್ಲಿ.?

  ಮದುವೆ ಯಾವಾಗ.? ಎಲ್ಲಿ.?

  ಮುಂದಿನ ತಿಂಗಳು.. ಅಂದ್ರೆ ಮಾರ್ಚ್ 9 ರಂದು ಹೈದರಾಬಾದ್ ನಲ್ಲಿ ಆರ್ಯ-ಸಯ್ಯೇಶಾ ವಿವಾಹ ಮಹೋತ್ಸವ ನಡೆಯಲಿದೆ. ಮುಸ್ಲಿಂ ಸಂಪ್ರದಾಯದಂತೆ ಆರ್ಯ-ಸಯ್ಯೇಶಾ ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ.

  ಕನ್ನಡದ ನಂಟು

  ಕನ್ನಡದ ನಂಟು

  ನಟ ಸುಮೀತ್ ಸೈಗಲ್ ಮತ್ತು ಶಾಹೀನ್ ಬಾನು ದಂಪತಿಯ ಪುತ್ರಿ ಸಯ್ಯೇಶಾ ಸೈಗಲ್. ಇದೇ ಸಯ್ಯೇಶಾ ಸದ್ಯ ಪುನೀತ್ ರಾಜ್ ಕುಮಾರ್ ರವರ 'ಯುವರತ್ನ' ಚಿತ್ರದ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಇನ್ನೂ ಆರ್ಯ ಕೂಡ ಕನ್ನಡದ 'ರಾಜರಥ' ಚಿತ್ರದಲ್ಲಿ ಅಭಿನಯಿಸಿದ್ದರು. ಹೊಸ ಜೀವನಕ್ಕೆ ಅಡಿಯಿಡುತ್ತಿರುವ ಈ ಜೋಡಿಗೆ ಶುಭಾಶಯಗಳು.

  English summary
  Tamil Actor Arya and Actress Sayyeshaa to get married in March.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X