For Quick Alerts
  ALLOW NOTIFICATIONS  
  For Daily Alerts

  ಆರ್ಯನ್ ಖಾನ್ ಬಂಧನ: ರಮ್ಯಾ ಕೇಳಿದ ಪ್ರಶ್ನೆಗಳಿವು..

  |

  ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ಎನ್‌ಸಿಬಿಯು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದು ಅಕ್ಟೋಬರ್ 07ರ ವರೆಗೆ ಆತನನ್ನು ಎನ್‌ಸಿಬಿ ವಶಕ್ಕೆ ನೀಡಿ ನ್ಯಾಯಾಲಯ ಆದೇಶ ನೀಡಿದೆ. ಆರ್ಯನ್ ಖಾನ್ ಬಂಧನದ ಬಗ್ಗೆ ಹಲವರು ಭಿನ್ನ-ಭಿನ್ನ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

  ನಟಿ ರಮ್ಯಾ ಇದೀಗ ಆರ್ಯನ್ ಖಾನ್ ಬಂಧನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು, ಕೆಲವು ಮೌಲಿಕ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

  ನ್ಯಾಯಾಲಯದ ಒಳಗೆ ವಿಚಾರಣೆ ಸಮಯದಲ್ಲಿ ನಡೆಯುವ ವಾದ-ವಿವಾದಗಳನ್ನು ಯಥಾವತ್ತು ವರದಿ ಮಾಡುವ 'ಲೈವ್‌ ವಾ' ಹಂಚಿಕೊಂಡಿರುವ ಆರ್ಯನ್ ಖಾನ್ ಪ್ರಕರಣದ ವಿಚಾರಣೆಯ ಟ್ವೀಟ್‌ಗಳನ್ನು ಹಂಚಿಕೊಂಡಿರುವ ನಟಿ ರಮ್ಯಾ, ''ಎನ್‌ಸಿಬಿಯು ಆರ್ಯನ್ ಖಾನ್ ಅನ್ನು ವಶಕ್ಕೆ ಪಡೆಯಬೇಕಾದರೆ ಆತನ ಬಳಿ ಡ್ರಗ್ಸ್ ಸಿಕ್ಕಿಲ್ಲ, ಆತ ಡ್ರಗ್ಸ್ ಸೇವಿಸಿದ್ದಾಗಿ ಸಾಕ್ಷಿಯೂ ಇಲ್ಲ ಆದರೂ ಆತನನ್ನು ಬಂಧಿಸಿ ಆತನ ಮೇಲೆ ಸೆಕ್ಷನ್‌ಗಳನ್ನು ಹೊರಿಸಲಾಗಿದೆ'' ಎಂದಿದ್ದಾರೆ.

  ಆರ್ಯನ್ ಖಾನ್ ಬಳಿ ಡ್ರಗ್ಸ್ ದೊರೆತಿಲ್ಲ: ಎನ್‌ಸಿಬಿ

  ಆರ್ಯನ್ ಖಾನ್ ಬಳಿ ಡ್ರಗ್ಸ್ ದೊರೆತಿಲ್ಲ: ಎನ್‌ಸಿಬಿ

  ಎನ್‌ಸಿಬಿಯೇ ಹೇಳಿರುವಂತೆ ಆರ್ಯನ್ ಖಾನ್ ಬಳಿ ಯಾವುದೇ ಡ್ರಗ್ಸ್ ಸಿಕ್ಕಿಲ್ಲ ಮತ್ತು ಆರ್ಯನ್ ಖಾನ್ ಡ್ರಗ್ಸ್ ಸೇವಿಸಿರುವುದಕ್ಕೆ ಯಾವುದೇ ಸಾಕ್ಷ್ಯಗಳನ್ನು ಸಹ ಎನ್‌ಸಿಬಿ ನ್ಯಾಯಾಲಯದ ಮುಂದೆ ನೀಡಿಲ್ಲ. ಈ ಬಗ್ಗೆ ಆರ್ಯನ್ ಖಾನ್ ಪರ ವಕೀಲ ಸತೀಶ್ ಮಾನೆಶಿಂಧೆ ಸಹ ನ್ಯಾಯಾಲಯದ ಗಮನ ಸೆಳೆದಿದ್ದರು.

  ಪಾರ್ಟಿ ಅರೇಂಜ್ ಮಾಡಿದ್ದವರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ: ಎನ್‌ಸಿಬಿ

  ಪಾರ್ಟಿ ಅರೇಂಜ್ ಮಾಡಿದ್ದವರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ: ಎನ್‌ಸಿಬಿ

  ಮತ್ತೊಂದು ಪೋಸ್ಟ್‌ನಲ್ಲಿ, ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ನ್ಯಾಯಾಲಯಕ್ಕೆ ನೀಡಿರುವ ಹೇಳಿಕೆಯನ್ನು ರಮ್ಯಾ ಪ್ರಕಟಿಸಿದ್ದಾರೆ. ಆರೋಪಿಗಳ ವಿರುದ್ಧ ಏನು ಸಾಕ್ಷ್ಯವಿದೆ ಎಂದು ನ್ಯಾಯಾಲಯ ಕೇಳುತ್ತದೆ. ಇದಕ್ಕೆ ಉತ್ತರಿಸುವ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ, ''ಪಾರ್ಟಿ ಅರೇಂಜ್ ಮಾಡಿದ್ದವರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಡ್ರಗ್ಸ್ ಖರೀದಿಸಿದವರಿಗೂ ಅವರಿಗೂ ಏನು ಸಂಬಂಧ ಇದೆ ಎಂಬುದು ಗೊತ್ತಾಗುತ್ತಿಲ್ಲ'' ಎಂದಿದ್ದಾರೆ. ''ಆರೋಪಿಗಳು ನಿಮ್ಮ ವಶಕ್ಕೆ ಬೇಕೆ?'' ಎಂದು ಕೋರ್ಟ್‌ ಪ್ರಶ್ನೆಗೆ ಹೌದು ಎಂದು ಸಮೀರ್ ಉತ್ತರಿಸಿದ್ದಾರೆ. ಸಮೀರ್ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆ ಸಮಂಜಸವಾಗಿಲ್ಲವಾದ್ದರಿಂದ ಅದನ್ನು ಹಂಚಿಕೊಂಡಿದ್ದಾರೆ ನಟಿ ರಮ್ಯಾ.

  ನಾಲ್ಕು ರೈತರನ್ನು ಕೊಂದ ಬಿಜೆಪಿ ಸಚಿವನ ಮಗನ ಬಂಧನ ಏಕಿಲ್ಲ

  ನಾಲ್ಕು ರೈತರನ್ನು ಕೊಂದ ಬಿಜೆಪಿ ಸಚಿವನ ಮಗನ ಬಂಧನ ಏಕಿಲ್ಲ

  ಮತ್ತೊಂದು ಪೋಸ್ಟ್‌ನಲ್ಲಿ, ''ಎನ್‌ಸಿಬಿಯು ಆರ್ಯನ್ ಖಾನ್‌ ಅನ್ನು ಡ್ರಗ್ಸ್ ಇರಿಸಿಕೊಂಡಿದ್ದಕ್ಕಾಗಲಿ, ಸೇವಿಸಿದ್ದಕ್ಕಾಗಲಿ ಬಂಧಿಸಿಲ್ಲ. ಬದಲಿಗೆ ಕೇವಲ ಪ್ರಶ್ನೆ ಮಾಡಲು ಬಂಧಿಸಿದೆ. ಮತ್ತೊಂದೆಡೆ ಬಿಜೆಪಿ ಕೇಂದ್ರ ಮಂತ್ರಿಯ ಮಗ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಕಾರು ಹತ್ತಿಸಿ ನಾಲ್ಕು ರೈತರನ್ನು ಕೊಂದಿದ್ದಾನೆ. ಆದರೆ ಆತನನ್ನು ಈವರೆಗೆ ಬಂಧಿಸಲಾಗಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ ರಮ್ಯಾ. ಅಲ್ಲದೆ, ''ಪ್ರಿಯಾಂಕಾ ಗಾಂಧಿಯನ್ನು ಯಾವುದೇ ನೋಟೀಸ್ ಇಲ್ಲದೆ, ಆದೇಶವಿಲ್ಲದೆ ಗೃಹ ಬಂಧನದಲ್ಲಿ ಇಡಲಾಗಿದೆ. ಆಕೆ ನಿಧನ ಹೊಂದಿದ ರೈತರ ಕುಟುಂಬದವರನ್ನು ಭೇಟಿಯಾಗಲು ಯತ್ನಿಸಿದ್ದರು ಅದಕ್ಕಾ? ಇದೇ ನೋಡಿ ಹುಚ್ಚಾಟದ ಫ್ಯಾನ್ಸಿ ವ್ಯಕ್ತಿಗಳು ನಡೆಸುತ್ತಿರುವ ಹೊಸ ಇಂಡಿಯಾ'' ಎಂದಿದ್ದಾರೆ ರಮ್ಯಾ.

  ಪಾರ್ಟಿ ಆರ್ಗನೈಜರ್‌ಗಳು ಸಿಗುತ್ತಿಲ್ಲವೆಂದು ಮುಗ್ಧರ ಬಂಧನ?

  ಪಾರ್ಟಿ ಆರ್ಗನೈಜರ್‌ಗಳು ಸಿಗುತ್ತಿಲ್ಲವೆಂದು ಮುಗ್ಧರ ಬಂಧನ?

  ''ಎನ್‌ಸಿಬಿ ಹೇಳುತ್ತದೆ ಪಾರ್ಟಿ ಆರ್ಗನೈಸ್ ಮಾಡಿದ್ದವರು ನಮ್ಮ ಕೈಗೆ ಸಿಗುತ್ತಿಲ್ಲ. ಹಾಗಾಗಿ ಡ್ರಗ್ಸ್ ಗ್ರಾಹಕರನ್ನು ವಶಕ್ಕೆ ಪಡೆದಿದ್ದೇವೆ ಎಂದು. ದಯವಿಟ್ಟು ಗಮನಿಸಿ, ಎನ್‌ಸಿಬಿಯೇ ಹೇಳಿರುವಂತೆ ಆರ್ಯನ್ ಖಾನ್ ಬಳಿ ಯಾವುದೇ ಡ್ರಗ್ಸ್ ದೊರೆತಿಲ್ಲ, ಆತ ಡ್ರಗ್ಸ್ ಸೇವಿಸಿದ್ದ ಎಂಬುದಕ್ಕೆ ಸಾಕ್ಷ್ಯಗಳೂ ಇಲ್ಲ. ಪಾರ್ಟಿ ಆರ್ಗನೈಜ್ ಮಾಡಿದ್ದ ಸಂಸ್ಥೆ ಯಾವುದೆಂದು ಎನ್‌ಸಿಬಿಗೆ ಗೊತ್ತು ಸುಲಭವಾಗಿ ವಾರೆಂಟ್ ತೆಗೆದುಕೊಂಡು ಅವರನ್ನು ವಿಚಾರಣೆಗೆ ಕರೆಸಬಹದು ಆದರೆ ಎನ್‌ಸಿಬಿ ಅದನ್ನು ಮಾಡುತ್ತಿಲ್ಲ. ವಾಟ್ಸ್‌ಅಪ್ ಚಾಟ್‌ಗಳು ನ್ಯಾಯಾಲಯದಲ್ಲಿ ಸಾಕ್ಷ್ಯಗಳಲ್ಲ. ಆರ್ಯನ್ ಖಾನ್‌, ಎನ್‌ಸಿಬಿ ಎದುರು ತಪ್ಪೊಪ್ಪಿಕೊಂಡಿದ್ದಾನೆ ಎಂಬುದು ಸಂಪೂರ್ಣ ಸುಳ್ಳು ಏಕೆಂದರೆ ರಿಮ್ಯಾಂಡ್‌ನಲ್ಲಿರುವ ಆರೋಪಿಯ ಹೇಳಿಕೆಯನ್ನು ಬಹಿರಂಗಗೊಳಿಸುವಂತಿಲ್ಲ. ಒಂದೊಮ್ಮೆ ಬಹಿರಂಗಗೊಳಿಸಿದರೆ ಎನ್‌ಸಿಬಿ ಕಾನೂನು ಮುರಿಯುತ್ತಿದೆ ಎಂದರ್ಥ. ವಿಚಾರಣೆ ಸಮಯದಲ್ಲಿ ದೀಪಿಕಾ ಪಡುಕೋಣೆ ಕಣ್ಣೀರು ಹಾಕಿದಳು, ಆರ್ಯನ್ ಖಾನ್ ಮುಗ್ಧನಂತೆ ಅತ್ತ ಇಂಥಹಾ ಗಾಸಿಪ್‌ಗಳನ್ನು ಹರಡುವುದು ಖುಷಿ ಕೊಡುತ್ತದೆ ಹಾಗಾಗಿ ಹರಡುತ್ತಾರೆ. ಅಥವಾ ಮಾಧ್ಯಮಗಳೇ ಇಂಥಹಾ ಸುದ್ದಿಗಳನ್ನು ಗಾಳಿಯಿಂದ ಹೆಕ್ಕಿ ಪ್ರಸಾರ ಮಾಡುತ್ತವೆಯೇ?'' ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ರಮ್ಯಾ.

  English summary
  Actress Ramya questioned why NCB arrests Aryan Khan even he do not posses or consume drugs, and why not BJP minister's son not arrested although he killed four farmers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X