For Quick Alerts
  ALLOW NOTIFICATIONS  
  For Daily Alerts

  ತಮಿಳು ನಟ ಆರ್ಯ ಗೆಟಪ್ ಗೆ ಕಿಚ್ಚ ಸುದೀಪ್ ಸ್ಫೂರ್ತಿ.!

  By Bharath Kumar
  |
  ತಮಿಳು ನಟ ಆರ್ಯ ಗೆಟಪ್ ಗೆ ಕಿಚ್ಚ ಸುದೀಪ್ ಸ್ಫೂರ್ತಿ | Oneindia Kannada

  ಕಿಚ್ಚ ಸುದೀಪ್ ಅವರನ್ನ ಸ್ಪೂರ್ತಿಯಾಗಿರಿಸಿಕೊಂಡು ಅದೇಷ್ಟೋ ಜನ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಇಲ್ಲದವರು ಕೂಡ ಸುದೀಪ್ ಅವರ ವ್ಯಕ್ತಿತ್ವವನ್ನ ಅಳವಡಿಸಿಕೊಂಡಿರುವ ಉದಾಹರಣೆಗಳಿವೆ. ಇನ್ನು ಅಭಿಮಾನಿಗಳಂತೂ ಸುದೀಪ್ ಅವರ ವೇಷಭೂಷಣ, ಹೇರ್ ಸ್ಟೈಲ್, ಅವರ ವಾಕಿಂಗ್ ಸ್ಟೈಲ್ ಹೀಗೆ ಎಲ್ಲವನ್ನ ಅನುಕರಣೆ ಮಾಡ್ತಾರೆ.

  ಹೀಗಿರುವಾಗ, ತಮಿಳು ಆರ್ಯ ಅಭಿನಯಿಸುತ್ತಿರುವ ಕನ್ನಡ ಸಿನಿಮಾದ ಲುಕ್ ಕಿಚ್ಚ ಸುದೀಪ್ ಅವರಿಂದ ಸ್ಪೂರ್ತಿ ಪಡೆದುಕೊಂಡಿದೆ ಎಂಬ ವಿಚಾರ ಈಗ ಬಹಿರಂಗವಾಗಿದೆ.

  ಹೌದು, ಆರ್ಯ ಅಭಿನಯಿಸುತ್ತಿರುವ ಮೊದಲ ಕನ್ನಡ ಸಿನಿಮಾ 'ರಾಜರಥ'. ಇದರಲ್ಲಿ ಅವರು 'ವಿಶ್ವ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪಾತ್ರದ ಫಸ್ಟ್ ಲುಕ್ ಸಂಚಲನವನ್ನೇ ಸೃಷ್ಠಿಸಿದೆ. ಅಷ್ಟಕ್ಕೂ, ಆರ್ಯ ಅವರ ಲುಕ್ ಕಿಚ್ಚ ಸುದೀಪ್ ರವರಿಂದ ಹೇಗೆ ಸ್ಫೂರ್ತಿಯಾಗಿದೆ ಎಂಬ ಇಂಟ್ರೆಸ್ಟಿಂಗ್ ಕಥೆ ಇಲ್ಲಿದೆ. ಮುಂದೆ ಓದಿ.....

  ಅನೂಪ್ ಅವರ ತಂದೆ ಬಳಿ ಕೆಲಸ ಮಾಡಿದ್ದ ಕಿಚ್ಚ

  ಅನೂಪ್ ಅವರ ತಂದೆ ಬಳಿ ಕೆಲಸ ಮಾಡಿದ್ದ ಕಿಚ್ಚ

  ಸುದೀಪ್ ಅವರು ಅನೂಪ್ ಮತ್ತು ನಿರೂಪ್ ತಂದೆ ಸುಧಾಕರ್ ಭಂಡಾರಿ ಅವರ ಟಿವಿ ಧಾರಾವಾಹಿ 'ಪ್ರೇಮದ ಕಾದಂಬರಿ'ಯಲ್ಲಿ 90ರ ದಶಕದಲ್ಲಿ ಕೆಲಸ ಮಾಡಿದ್ದರು. ಅಂದಿನಿಂದ ಸುದೀಪ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಹಲವಾರು ಕಥೆಗಳನ್ನು ಅನೂಪ್ ಹಾಗು ನಿರೂಪ್ ಚರ್ಚಿಸುತ್ತಿದ್ದರು.

  ಆಗಲೇ ಸುದೀಪ್ ಗಾಗಿ ಸ್ಕ್ರಿಪ್ಟ್ ಸಿದ್ದವಾಗಿತ್ತು

  ಆಗಲೇ ಸುದೀಪ್ ಗಾಗಿ ಸ್ಕ್ರಿಪ್ಟ್ ಸಿದ್ದವಾಗಿತ್ತು

  ತಮ್ಮ ಎಂಜಿನಿಯರಿಂಗ್ ದಿನಗಳಲ್ಲಿ ಅನೂಪ್ ಅವರು "ಯೋಧಾ" ಎಂಬ ಶೀರ್ಷಿಕೆಯಡಿ ಒಂದು ಸ್ಕ್ರಿಪ್ಟ್ ತಯಾರಿಸಿ, ಸುದೀಪ್ ಅವರು ಪೋಲೀಸ್ ಪಾತ್ರ ನಿಭಾಯಿಸಿದರೆ ಚೆನ್ನಾಗಿ ಮೂಡಿ ಬರುತ್ತದೆ ಎಂಬ ಆಲೋಚನೆ ಮಾಡಿದ್ದರಂತೆ. ಬಹುಶಃ ಇದು ಮುಂದಿನ ದಿನಗಳಲ್ಲಿ ಈ ಬಯಕೆ ಈಡೇರಿದರೂ ಅಚ್ಚರಿಯಿಲ್ಲ.

  ಯಶ್ ರಿಲೀಸ್ ಮಾಡಿದ್ದ 'ರಾಜರಥ' ಹಾಡಿಗೆ ಸಿಕ್ಕಿದೆ ದೊಡ್ಡ ರೆಸ್ಪಾನ್ಸ್ಯಶ್ ರಿಲೀಸ್ ಮಾಡಿದ್ದ 'ರಾಜರಥ' ಹಾಡಿಗೆ ಸಿಕ್ಕಿದೆ ದೊಡ್ಡ ರೆಸ್ಪಾನ್ಸ್

  ಸುದೀಪ್ ಮನಸ್ಸಿನಲ್ಲಿಟ್ಟುಕೊಂಡೇ ಹುಟ್ಟಿದ ಪಾತ್ರ

  ಸುದೀಪ್ ಮನಸ್ಸಿನಲ್ಲಿಟ್ಟುಕೊಂಡೇ ಹುಟ್ಟಿದ ಪಾತ್ರ

  2010ರಲ್ಲಿ ಅನೂಪ್, 'ವರ್ಡ್ಸ್' ಎಂಬ ಪ್ರಶಸ್ತಿ ಗೆದ್ದ ಕಿರುಚಿತ್ರ ನಿರ್ದೇಶಿಸಿದಾಗ, ಪತ್ರಿಕಾಗೋಷ್ಠಿಗೆ ಅತಿಥಿಯಾಗಿ ಬಂದ ಸುದೀಪ್ ರಿಂದ ಪ್ರಶಂಸೆ ಗಳಿಸಿದ್ದರು. ಆ ಸಮಯದಲ್ಲಿ ಅನೂಪ್ 'ರಾಜರಥ'ದ ಡ್ರಾಫ್ಟ್ ಮಾಡುತ್ತಿದ್ದರು. ಸುದೀಪ್ ಅವರ ವೇಷಭೂಷಣ, ನೀಲಿ ಕುರ್ತಾ, ಜೀನ್ಸ್ ಮತ್ತು ಸ್ಯಾಂಡಲ್ಸ್ ಗಳು ಕೂಡಲೇ ಅನೂಪ್ ಗೆ ಇಷ್ಟವಾಗಿ, "ಕಥೆಯಲ್ಲಿ ಬರುವ ವಿಶ್ವ ಪಾತ್ರದಂತೆಯೇ ಇದೆಯಲ್ಲ ಎಂದನಿಸಿತಂತೆ". 'ರಾಜರಥ'ದ ಕೆಲಸ ಶುರುವಾದಂತೆ ವಸ್ತ್ರ ವಿನ್ಯಾಸಕರಾದ ಪತ್ನಿ ನೀತಾ ಶೆಟ್ಟಿಗೆ ಇದೇ ಸಲಹೆ ನೀಡಿದರು, ಅದನ್ನೇ ಕಾರ್ಯರೂಪಕ್ಕೂ ತರಲಾಯಿತು.

  ಆರ್ಯ ಗೆಟಪ್ ನೋಡಿ ಫುಲ್ ಖುಷ್

  ಆರ್ಯ ಗೆಟಪ್ ನೋಡಿ ಫುಲ್ ಖುಷ್

  ಆರ್ಯ ಅವರ ಸಹಾಯಕರು ತಮ್ಮ ಯಜಮಾನರ ವೇಷಭೂಷಣವನ್ನು ತುಂಬಾ ಇಷ್ಟಪಟ್ಟರು, ಅವರು 'ರಾಜರಥ'ದಲ್ಲಿ ಅತ್ಯುತ್ತಮವಾಗಿ ಕಾಣುತ್ತಾರೆ ಎಂದು ಅವರೆಲ್ಲರೂ ಭಾವಿಸಿದರು. ಆರ್ಯ ಪರದೆಯ ಮೇಲೆ ನಟಿಯರ ಜೊತೆ ಪ್ರಣಯರಾಜನ ಪಾತ್ರ ಮಾಡದೆ, ಈ ಚಿತ್ರದಲ್ಲಿ ಆರ್ಯ ವಿಭಿನ್ನ ಪಾತ್ರ ಮಾಡುವುದನ್ನು ನೋಡಿ ತುಂಬಾ ಖುಷಿಪಟ್ಟರು. ಆರ್ಯ, ಅವರು ಸಂಭಾಷಣೆಗಳನ್ನು ಜಿಮ್ನಲ್ಲಿ, ತಿನ್ನುವಾಗ, ಮಲಗಿದ್ದಾಗ, ಅಕ್ಷರಶಃ ಎಲ್ಲೆಡೆ ಅಭ್ಯಾಸ ಮಾಡುತಿದ್ದರು, ಇದನ್ನು ಕಂಡ ಆರ್ಯ ಅವರ ಸಹಾಯಕರು "ನಿರ್ದೇಶಕ ಅನೂಪ್ ಭಂಡಾರಿ ಆರ್ಯರನ್ನು ಚಿತ್ರಹಿಂಸಿಸುತ್ತಿದ್ದಾರೆಂದು "ಹಾಸ್ಯದಿಂದ ಹೇಳುತ್ತಿದ್ದರು.

  ರಂಗಿತರಂಗ ಚಿತ್ರಕ್ಕೆ ಆರ್ಯ ಅಭಿಮಾನಿ

  ರಂಗಿತರಂಗ ಚಿತ್ರಕ್ಕೆ ಆರ್ಯ ಅಭಿಮಾನಿ

  ಕನ್ನಡ ಭಾಷೆ ಆರ್ಯರಿಗೆ ಹೊಸದಾಗಿದ್ದರಿಂದ ತಮ್ಮ ಸಾಲುಗಳನ್ನು ಹಾಗೂ ಅಭಿವ್ಯಕ್ತಿಗಳನ್ನು ಸರಿಯಾದ ರೀತಿಯಲ್ಲಿ ಪಡೆದುಕೊಳ್ಳುವುದಕ್ಕಾಗಿ ಆರ್ಯ ಸಂಪೂರ್ಣವಾಗಿ ಗಮನ ವಹಿಸುತ್ತಿದ್ದರು. ತೆಲುಗು ಅವರ ಮೊದಲ ಭಾಷೆ ಅಲ್ಲ ಹಾಗಾಗಿ ಅವರು ತೆಲುಗಿನ ಸಾಲುಗಳನ್ನು ಪೂರ್ವಾಭ್ಯಾಸ ಮಾಡಿಕೊಳ್ಳುತ್ತಿದ್ದರು. ಆರ್ಯ 'ರಂಗಿತರಂಗ'ದ ದೊಡ್ಡ ಅಭಿಮಾನಿಯಾದ ಕಾರಣ, ತಾನು ಪ್ರೀತಿಯಿಂದ ಒಪ್ಪಿಕೊಂಡಿರುವ ಪಾತ್ರಕ್ಕೆ ಅತ್ಯುತ್ತಮವಾದ ಅಭಿನಯ ನೀಡಬೇಕೆಂಬ ಉದ್ದೇಶ ಅವರದಾಗಿತ್ತು.

  'ರಾಜರಥ' ಚಿತ್ರದ ಎರಡನೇ ಹಾಡು ರಿಲೀಸ್ ಮಾಡಿದ ರಕ್ಷಿತ್ ಶೆಟ್ಟಿ'ರಾಜರಥ' ಚಿತ್ರದ ಎರಡನೇ ಹಾಡು ರಿಲೀಸ್ ಮಾಡಿದ ರಕ್ಷಿತ್ ಶೆಟ್ಟಿ

  ಆರ್ಯ ಬಗ್ಗೆ ಅನೂಪ್ ಮೆಚ್ಚುಗೆ

  ಆರ್ಯ ಬಗ್ಗೆ ಅನೂಪ್ ಮೆಚ್ಚುಗೆ

  'ರಾಜರಥ' ತಂಡದ ಪ್ರಕಾರ ಕೆಲಸ ಮಾಡುವ ಅತ್ಯಂತ ವಿನಮ್ರ ವ್ಯಕ್ತಿಯಲ್ಲಿ ಆರ್ಯ ಸಹ ಒಬ್ಬರು. "ಅವರು ಸಮಯಕ್ಕೆ ಸೆಟ್ಟಿನಲ್ಲಿರುತ್ತಾರೆ ಮತ್ತು ಪ್ರಶ್ನಿಸದೆಯೇ ಪಾತ್ರಕ್ಕೆ ಅಗತ್ಯವಿರುವ ನಟನೆಯನ್ನು ಮಾಡುತ್ತಿದ್ದರು" ಎಂದು ನಿರ್ದೇಶಕ ಅನುಪ್ ಭಂಡಾರಿ ತಿಳಿಸಿದ್ದಾರೆ. 'ರಾಜರಥ' ರೋಮ್ಯಾನ್ಸ್, ಕಾಮಿಡಿ, ಸಂಗೀತದ ಅಂಶವಿರುವ ಚಿತ್ರ. ನಿರೂಪ್ ಭಂಡಾರಿ, ಅವಂತಿಕಾ ಶೆಟ್ಟಿ, ರವಿಶಂಕರ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು, ಮಾರ್ಚ್ 23 ರಂದು ಚಿತ್ರ ಬಿಡುಗಡೆ ಮಾಡುತಿದ್ದಾರೆ.

  ಲವ್ ಫೇಲ್ಯೂರ್ ಹುಡುಗರು ನೋಡಲೇ ಬೇಕಾದ ಹಾಡುಲವ್ ಫೇಲ್ಯೂರ್ ಹುಡುಗರು ನೋಡಲೇ ಬೇಕಾದ ಹಾಡು

  English summary
  Arya's first look as Vishwa in Rajaratha had created quite a stir. Apparently his look in the film was inspired by Abhinaya Chakravarthy Kiccha Sudeep. the movie directed by anup bhandari.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X