ದರ್ಶನ್ ಜೈಲಿಗೆ ಹೋದ್ಮೇಲೆ ಸುದೀಪ್ ನಿಗರಾಡ್ತಾವ್ರೆ.. ಮೊನ್ನೆ ಪ್ಯಾಂಟ್ ಬಿಚ್ಚಿ ತೋರಿಸ್ಲಾ ಅಂತಿದ್ರು- ಆರ್ಯವರ್ಧನ್
ಎಲುಬಿಲ್ಲದ ನಾಲಿಗೆ ಅಂತ ಜನ ಏನೇನೋ ಮಾತಾಡ್ತಾರೆ. ಸೋಶಿಯಲ್ ಮೀಡಿಯಾ ಜಮಾನ ಶುರುವಾದ ಬಳಿಕ ಹೀಗೆ ಬಾಯಿಗೆ ಬಂದಂತೆ ಮಾತನಾಡುವುದು ವೈರಲ್ ಆಗಿಬಿಡುತ್ತದೆ. ಮಾಜಿ ಬಿಗ್‌ಬಾಸ್ ಸ್ಪರ್ಧಿ, ಸಂಖ್ಯಾಶಾಸ್ತ್ರಜ್ಞ- ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಇದೇ ಮಾತನಾಡಿರುವ ವೀಡಿಯೋ ಇದೀಗ ಚರ್ಚೆ ಹುಟ್ಟಾಕ್ಕಿದೆ.
ನಟ ಸುದೀಪ್ ಬಗ್ಗೆ ಆರ್ಯವರ್ಧನ್ ಆಡಿರುವ ಮಾತು ಅಭಿಮಾನಿಗಳನ್ನು ಕೆರಳಿಸಿದೆ. ಸುದ್ದಿ ವಾಹಿನಿ, ಯೂಟ್ಯೂಬ್ ವಾಹಿನಿಗಳಲ್ಲಿ ಕೂತು ಆರ್ಯವರ್ಧನ್ ಭವಿಷ್ಯ ನುಡಿಯುತ್ತಾರೆ. ಕೆಲವೊಮ್ಮೆ ಹೀಗೆ ನುಡಿದ ಭವಿಷ್ಯ ನಿಜಾವಾಗಿರುವುದು ಇದೆ. ಆದರೆ ಮಾತನಾಡುವಾಗ ಹಿಂದು ಮುಂದು ಯೋಚಿಸಿ ಮಾತನಾಡಬೇಕು. ಮಾತು ಆಡಿದ್ರೆ ಹೋಯ್ತು, ಮುತ್ತು ಒಡೆದ್ರೆ ಹೋಯ್ತು ಎನ್ನುವ ಗಾದೆ ಮಾತು ನೆನಪಿರಬೇಕು.

ಆರ್ಯವರ್ಧನ್ ಗುರೂಜಿ ಬಿಗ್‌ಬಾಸ್ ಕನ್ನಡ ಸೀಸನ್ 9ರ ಸ್ಪರ್ಧಿಯಾಗಿದ್ದರು. ಇದೀಗ ಅಶ್ವವೇಗ ಸುದ್ದಿವಾಹಿನಿ ಸಂದರ್ಶನದಲ್ಲಿ ಆರ್ಯವರ್ಧನ್ ಆಡಿರುವ ಮಾತು ಸುದೀಪ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. "ದರ್ಶನ್ ಜೈಲಿಗೆ ಹೋದ್ಮೇಲೆ ಸುದೀಪ್ ನಿಗರಾಡ್ತಾವ್ರೆ.. ಮೊನ್ನೆ ಪ್ಯಾಂಟ್ ಬಿಚ್ಚಿ ತೋರಿಸ್ಲಾ ಅಂತಿದ್ರು" ಎಂದಿರುವ ವೀಡಿಯೋ ವೈರಲ್ ಆಗ್ತಿದೆ.
ಮೀತಾ ಕ್ರಿಸ್ಟಲ್ ಸಂಖ್ಯಾಶಾಸ್ತ್ರಜ್ಞೆ ಜೊತೆ ಸೇರಿ ಸಂಖ್ಯಾಶಾಸ್ತ್ರ, ಜೋತಿಷಯ ಶಾಸ್ತ್ರದ ಬಗ್ಗೆ ಮಾಹಿತಿ ನೀಡುವಾಗ ಆರ್ಯವರ್ಧನ್ ಗುರೂಜಿ ಈ ರೀತಿ ಮಾತನಾಡಿದ್ದಾರೆ. 2026ನೇ ಸಾಲಿನಲ್ಲಿ ಯಾವ ರಾಶಿಯವರ ಭವಿಷ್ಯ ಏನು ಎಂದು ಮಾತನಾಡಿದ್ದಾರೆ. ಸುದೀಪ್ ಅವರ ಮುಂದಿನ ಸಿನಿಮಾ ಸೂಪರ್ ಹಿಟ್ ಆಗುತ್ತಾ ಎಂದು ಎಂದು ಕೇಳಿದ್ದಾರೆ. ಬಳಿಕ ಹೀಗೆ ಮಾತು ಮುಂದುವರೆದಿದೆ.
ಮಕರ ರಾಶಿ ಕುರಿತು ಮಾತನಾಡುತ್ತಾ ಆರ್ಯವರ್ಧನ್ ಗುರೂಜಿ ಸುದೀಪ್, ದರ್ಶನ್ ವಿಷಯ ಪ್ರಸ್ತಾಪಿಸಿದ್ದಾರೆ. ಮಕರ ರಾಶಿಯವರು ಮನೆ ಕಟ್ತಾರಾ? ಆಸ್ತಿ ತಗೋತ್ತಾರಾ? ಮದುವೆ ಆಗುತ್ತಾ? ಕೋಪ ನಿಯಂತ್ರಿಸಿಕೊಳ್ತಾರಾ ಎಂದು ಆರ್ಯವರ್ಧನ್ ಪ್ರಶ್ನೆಗಳನ್ನು ಕೇಳಿದ್ದಾರೆ. ಎಲ್ಲಿ ಈಗ "ದರ್ಶನ್ ಜೈಲಿಗೆ ಹೋದ್ಮೇಲೆ ಸುದೀಪ್ ನಿಗರಾಡ್ತಾವ್ರೆ" ಎಂದು ಆರ್ಯವರ್ಧನ್ ವ್ಯಂಗ್ಯವಾಡಿದ್ದಾರೆ. ಪ್ಯಾಂಚ್ ಬಿಚ್ಚಿ ತೋರಿಸ್ಲಾ ಅಂತಾರೆ, ಮಾಧ್ಯಮಗಳಲ್ಲಿ ನಾನೇ ನೋಡಿದ್ದೀನಿ ಎಂದು ಆರ್ಯವರ್ಧನ್ ನಕ್ಕಿದ್ದಾರೆ.
ಈ ಹಿಂದೆ ಬಿಗ್‌ಬಾಸ್ ಮನೆಯ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ನೀಡುವ ಚಪ್ಪಾಳೆ ಬಗ್ಗೆ ಆರ್ಯವರ್ಧನ್ ಗುರೂಜಿ ಹಗುರವಾಗಿ ಮಾತನಾಡಿ ಎಡವಟ್ಟು ಮಾಡಿಕೊಂಡಿದ್ದರು. ಸುದೀಪ್ ಅಭಿಮಾನಿಗಳು ಆಕ್ರೋಶಗೊಂಡು ಚಾಮರಾಜಪೇಟೆಯಲ್ಲಿರುವ ಆರ್ಯವರ್ಧನ್ ಕಚೇರಿಗೆ ತೆರಳಿ ತರಾಟೆಗೆ ತೆಗೆದುಕೊಂಡಿದ್ದರು. ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದರು.
ಬಿಗ್‌ಬಾಸ್ ಮನೆ ಒಳಗೆ ಇದ್ದಾಗಲೇ ಆರ್ಯವರ್ಧನ್ ಇದೇ ರೀತಿ ಏನೇನೋ ಮಾತನಾಡಿ ಬಳಿಕ ಕ್ಷಮೆ ಕೇಳಿದ್ದರು. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಅನ್ಯಾಯವಾಗಿದೆ ಎಂದು ಗುರೂಜಿ ಹೇಳಿದ್ದರು. "ನಾನು ಅಂದರೆ ನಂಬರ್, ನಂಬರ್ ಅಂದರೆ ನಾನು" ಎಂದು ಹೇಳುತ್ತಾ ಸುದ್ದಿವಾಹಿನಿಗಳಲ್ಲಿ ಸಂಖ್ಯಾಶಾಸ್ತ್ರಜ್ಞರಾಗಿ ಆರ್ಯವರ್ಧನ್ ಗಮನ ಸೆಳೆದಿದ್ದರು. ಬಳಿಕ ಬಿಗ್‌ಬಾಸ್ ಮನೆಗೆ ಸ್ಪರ್ಧಿ ಆಗಿ ಹೋಗುವ ಅವಕಾಶ ಪಡೆದುಕೊಂಡಿದ್ದರು.
93 ದಿನಗಳ ಕಾಲ ಆರ್ಯವರ್ಧನ್ ಬಿಗ್‌ಬಾಸ್ ಮನೆಯಲ್ಲಿದ್ದರು. ತಮ್ಮ ವಿಭಿನ್ನ ಮಾತಿನ ಶೈಲಿಯಿಂದ ಗಮನ ಸೆಳೆದಿದ್ದರು. ಫಿನಾಲೆಗೆ 3 ದಿನ ಬಾಕಿ ಇರುವಾಗ ಮನೆಯಿಂದ ಹೊರ ಬಂದಿದ್ದರು. ಸದ್ಯ ಸುದೀಪ್ 'ಮಾರ್ಕ್' ಸಿನಿಮಾ ಸಕ್ಸಸ್ ಸಂಭ್ರಮದಲ್ಲಿದ್ದಾರೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ 2ನೇ ವಾರಕ್ಕೆ ಕಾಲಿಟ್ಟಿದೆ.


Click it and Unblock the Notifications











