CCL 2025 ; ಕಳೆದ ವರ್ಷ ಫೈನಲ್‌ನಲ್ಲಿ ಗೆಲುವಿನ ಅಂಚಿನಲ್ಲಿದ್ದ ಕರ್ನಾಟಕ ತಂಡ ಸೋತಿದ್ದು ಹೇಗೆ ?

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ ಕೇವಲ ನಾಯಕ ಮಾತ್ರ ಅಲ್ಲ ನಿರ್ದೇಶಕ ಕೂಡ ಹೌದು. ಗಾಯಕ ಕೂಡ ಹೌದು. ಇಷ್ಟೇ ಅಲ್ಲ ಸುದೀಪ್ ಅತ್ಯದ್ಭುತ ಕ್ರಿಕೆಟ್ ಪ್ಲೇಯರ್ ಕೂಡ ಹೌದು. ಸಿನಿಮಾದಷ್ಟೇ ಕ್ರಿಕೆಟ್‌ನ್ನು ಕೂಡ ಅತೀವವಾಗಿ ಇಷ್ಟ ಪಡುವ ಸುದೀಪ್ ಚೂರು ಬಿಡುವು ಸಿಕ್ಕರೂ ಸಾಕು ಕಾಣಿಸುವುದು ಮೈದಾನದಲ್ಲಿಯೇ.

ಕೆಸಿಸಿ, ಸಿಸಿಎಲ್ ಹೀಗೆ ವರ್ಷಕ್ಕೆ ಕಡಿಮೆ ಅಂದರೂ ಎರಡು ಬಾರಿ ತಮ್ಮ ಹುಡುಗರ ಜೊತೆ ಅಖಾಡಕ್ಕಿಳಿಯುವ ಸುದೀಪ್ ಈ ವರ್ಷ ಕೂಡ ಸಿಸಿಎಲ್‌ನಲ್ಲಿ ತೀವೃ ಪೈಪೋಟಿಯನ್ನು ನೀಡಲು ಸಿದ್ಧರಾಗಿದ್ದಾರೆ. ಪಂದ್ಯಾವಳಿಯ ಆರಂಭಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಈ ಹಿನ್ನೆಲೆ ಈ ವರ್ಷ ಕರ್ನಾಟಕ ಬುಲ್ಡೋಜರ್ಸ್ ತಂಡ ವಿಜಯದ ಪತಾಕೆಯನ್ನು ಹಾರಿಸಲಿ ಎಂದು ಆಶಿಸುತ್ತಾ ಕಳೆದ ವರ್ಷ ನಡೆದ ರೋಚಕ ಫೈನಲ್‌ನ ನಾವು ಇಲ್ಲಿ ನೆನಪು ಮಾಡಿಕೊಳ್ಳುತ್ತಿದ್ದೇವೆ.

as-the-countdown-begins-for-the-celebrity-cricket-league-2025-heres-a-quick-recap-of-the-2024-final

ಬೆಂಗಾಲ್ ಟೈಗರ್ಸ್ VS ಕರ್ನಾಟಕ ಬುಲ್ಡೋಜರ್ಸ್

ಕಳೆದ ವರ್ಷ ಮಾರ್ಚ್ 17ರಂದು ತಿರುವನಂತಪುರಂನಲ್ಲಿ ಕೊನೆಯ ಸೆಣಸಾಟ ನಡೆದಿತ್ತು. ಹತ್ತು ವರ್ಷದಿಂದ ಟೇಬಲ್‌ನ ಕೆಳ ಕ್ರಮಾಂಕದಲ್ಲಿಯೇ ಕಾಣಿಸುತ್ತಿದ್ದ ಬೆಂಗಾಲ್ ತನ್ನ ಆಟದಿಂದ ಎಲ್ಲರನ್ನು ಅಚ್ಚರಿಗೆ ದೂಡಿತ್ತು. ಫೈನಲ್‌ನಲ್ಲಿ ಕರ್ನಾಟಕ ಬುಲ್ದೋಜರ್ಸ್ ತಂಡಕ್ಕೆ ಸವಾಲು ಹಾಕಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಜಿಸ್ಶು ಸೇನ್‌ಗುಪ್ತಾ ನಾಯಕತ್ವದ ಬೆಂಗಾಲ್ ಟೈಗರ್ಸ್ ಮೊದಲ ಹತ್ತು ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 114ರನ್ ಗಳಿಸಿತ್ತು. ಆ ನಂತರ ಆಡಲು ಇಳಿದ ಸುದೀಪ್ ಸಾರಥ್ಯದ ಕರ್ನಾಟಕ ಬುಲ್ದೋಜರ್ಸ್ ತಂಡ ಹತ್ತು ಓವರ್‌ಗಳಲ್ಲಿ ಕೇವಲ 86 ರನ್ ಮಾತ್ರ ಗಳಿಸಿತ್ತು. ಈ ಮೂಲಕ ಬೆಂಗಾಲ್ ಟೈಗರ್ಸ್‌ಗೆ ಮೊದಲ ಇನಿಂಗ್ಸ್‌ನಲ್ಲಿ 32ರನ್‌ಗಳ ಲೀಡ್ ಸಿಕ್ಕಿತ್ತು.

ಹೇಗಿತ್ತು ಎರಡನೇ ಇನಿಂಗ್ಸ್ ?

ಎರಡನೇ ಇನಿಂಗ್ಸ್‌ನಲ್ಲಿ ಕೂಡ ಬೆಂಗಾಲ್‌ನ ಸ್ಟಾರ್‌ಗಳು ಅಬ್ಬರಿಸಿದರು. ಹತ್ತು ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 105ರನ್ ಗಳಿಸಿದರು. ಇನ್ನು ಮೊದಲೇ 32ರನ್ ಲೀಡ್ ಇತ್ತಾದ್ದರಿಂದ ಕರ್ನಾಟಕ ಬುಲ್ಡೋಜರ್ಸ್ ತಂಡದ 138ರನ್‌ಗಳ ಗುರಿ ತಲುಪುವ ಸವಾಲಿತ್ತು. ಈ ಸವಾಲನ್ನು ಆತ್ಮ ವಿಶ್ವಾಸದಿಂದ ಬೆನ್ನತ್ತಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡ 125ರನ್ ಕಲೆ ಹಾಕಿತ್ತು. ಕೇವಲ ಹದಿಮೂರು ರನ್‌ಗಳಿಂದ ಮಾತ್ರ ಸೋತು ಹೋಯ್ತು.

ಫೈನಲ್ ಸ್ಟಾರ್ ಪ್ಲೇಯರ್‌ಗಳು ಯಾರು ಯಾರು ?

ಫೈನಲ್ ನಲ್ಲಿ ಎರಡು ತಂಡದ ಸದಸ್ಯರು ಶಕ್ತಿ ಮೀರಿ ಪ್ರಯತ್ನ ಮಾಡಿದ್ದರು. ರಣ ರೋಚಕತೆಯಿಂದ ಕೂಡಿದ್ದ ಫೈನಲ್‌ನಲ್ಲಿ ತಮ್ಮ ಸಾಮಥ್ಯದ ಪ್ರದರ್ಶನ ಮಾಡಿದ್ದರು. ಆ ಪೈಕಿ ಬೆಂಗಾಲ್ ಟೈಗರ್ಸ್‌ನ ಜೇಮಿ ಬ್ಯಾನರ್ಜಿ ಎರಡನೇ ಇನಿಂಗ್ಸ್‌ನಲ್ಲಿ 18 ಬಾಲ್‌ನಲ್ಲಿ 39ರನ ಸಿಡಿಸಿದ್ದರು. ಇನ್ನು ಕರ್ನಾಟಕ ಬುಲ್ಡೋಜರ್ಸ್ ತಂಡದ ಪರವಾಗಿ ಆರಂಭದಿಂದ ಅತೀ ಹೆಚ್ಚು ರನ್ ಕಲೆ ಹಾಕಿದ್ದ ಡಾರ್ಲಿಂಗ್ ಕೃಷ್ಣ ಫೈನಲ್‌ನಲ್ಲಿ ಮುಗ್ಗರಿಸಿದರು. ಇನ್ನು ಜಯರಾಮ್ ಕಾರ್ತಿಕ್ ಮತ್ತು ಚಂದನ್ ಎರಡೆರಡು ಓವರ್‌ನಲ್ಲಿ ಎರಡು ವಿಕೆಟ್ ಕಬಳಿಸಿದರಾದರೂ ಇತರೆ ಬೌಲರಗಳು ದುಬಾರಿ ಎನಿಸಿಕೊಂಡಿದ್ದರು. ರಾಜೀವ್ ಹನು ಕೊನೆಯರೆಗೆ ಹೋರಾಟವನ್ನು ಮಾಡಿದ್ದರು. ಆದರೆ ಗೆಲ್ಲಿಸುವ ಅದೃಷ್ಟ ಇರಲಿಲ್ಲ

ಸೋತರೂ ಫೈನಲ್ ಬಂದಿದ್ದು ಹೇಗೆ ಬೆಂಗಾಲ್ ?

ಫೈನಲ್‌ ಮುನ್ನ ಬೆಂಗಾಲ್ ಟೈಗರ್ಸ್, ನಮ್ಮ ಕರ್ನಾಟಕ ಬುಲ್ದೋಜರ್ಸ್ ತಂಡದ ಜೊತೆ ಮುಖಾಮುಖಿಯಾಗಿತ್ತು. ಸೋಲನ್ನು ಕಂಡಿತ್ತು. ಮೊದಲ ಇನಿಂಗ್ಸ್‌ನಲ್ಲಿ ಬೆಂಗಾಲ್ ಟೈಗರ್ಸ್ ತಂಡ 10 ಓವರ್‌ಗಳಲ್ಲಿ 3 ಕಳೆದುಕೊಂಡು 86 ಕಲೆ ಹಾಕಿತ್ತು. ಕರ್ನಾಟಕ ತಂಡ 10 ಎಸೆತಗಳಲ್ಲಿ ಜೆಕೆ 24 ರನ್‌ ಪೇರಿಸಿದದ ಕಾರಣ 28 ರನ್‌ಗಳ ಮುನ್ನಡೆಯನ್ನು ಸಾಧಿಸಿತು. 10 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 114 ರನ್ ಗಳಿಸಿತ್ತು.ಅಂತಿಮವಾಗಿ ನೂರು ರನ್‌ಗಳ ಗುರಿಯನ್ನು 8 ಓವರ್‌ನಲ್ಲಿ 2 ವಿಕೆಟ್ ನಷ್ಟಕ್ಕೆ ತಲುಪಿದ ಕರ್ನಾಟಕ ಬುಲ್ದೋಜರ್ಸ್ ಫೈನಲ್ ತಲುಪಿತ್ತು. ಈ ಕಡೆ ಮತ್ತೊಂದು ಕ್ವಾಲಿಫೈಯರ್ ಪಂದ್ಯದಲ್ಲಿ ಬೆಂಗಾಲ್‌ ಟೈಗರ್ಸ್‌ ಗೆ ಇನ್ನೊಂದು ಅವಕಾಶ ಸಿಕ್ಕಿತ್ತು. ಮುಂಬೈ ಹೀರೊಸ್ ತಂಡವನ್ನು ಮಣಿಸಿ ಬೆಂಗಾಲ್ ಆ ನಂತರ ಫೈನಲ್ ಹಂತಕ್ಕೆ ಬಂದಿತ್ತು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X