For Quick Alerts
  ALLOW NOTIFICATIONS  
  For Daily Alerts

  ಎಜುಕೇಶನ್ ವ್ಯವಸ್ಥೆಯ ಹೊಸ ದಿಕ್ಸೂಚಿ 'ಅಸತೋಮ ಸದ್ಗಮಯ'

  By Pavithra
  |

  ಹೆತ್ತವರು ಆಶ್ರಮ ಪಾಲಾಗಲು ನಮ್ಮ ಎಜುಕೇಶನ್ ಸಿಸ್ಟಂ ಕೂಡಾ ಕಾರಣ. ಈಗೇನಿದ್ದರೂ ಸ್ಪರ್ಧಾತ್ಮಕ ಜಗತ್ತು. ಸ್ವಲ್ಪ ಯಾಮಾರಿದ್ರೂ ನಾವು ತುಂಬಾ ಹಿಂದೆ ಉಳಿದು ಬಿಡ್ತೀವಿ. ನಮ್ಮ ಮಕ್ಕಳು ದೊಡ್ಡವರಾರದ ಮೇಲೆ ದೊಡ್ಡ ಕೆಲಸದಲ್ಲಿರಬೇಕು, ಕೈತುಂಬಾ ದುಡೀಬೇಕು ಎನ್ನುವುದು ಹೆತ್ತವರ ಆಸೆ. ಹಾಗಾಗಿ ಈ ಸ್ಪರ್ದಾತ್ಮಕ ಜಗತ್ತಿನಲ್ಲಿ ಗೆಲ್ಲಲು ತಯಾರಿ ಮಗು ಹೊಟ್ಟೆಯಲ್ಲಿರುವಾಗಲೇ ಶುರುವಾಗುತ್ತದೆ.

  ಮೊದಲ ಹೆಜ್ಜೆ ಮಗುವಿಗೆ ಉತ್ತಮ ಶಾಲೆಗೆ ಸೇರಿಸುವುದಾದರೆ, ಎರಡನೆಯದು ಮಕ್ಕಳಿಗೆ ಅದಕ್ಕೆ ಪೂರಕವಾದ ಕಲೆಗಳ ಟ್ರೈನಿಂಗ್. ಹೀಗೆ ಮಕ್ಕಳಿಗೆ ಕರಿಯರ್ ಓರಿಯೆಂಟೆಡ್ ಟ್ರೈನಿಂಗ್ ಚಿಕ್ಕಂದಿನಿಂದಲೇ ಪ್ರಾರಂಭವಾಗುತ್ತದೆ. ಇದರಿಂದಾಗಿ ಇಂದಿನ ಮಕ್ಕಳು ಆಟದಿಂದ ಹಿಡಿದು, ಕುಟುಂಬದೊಂದಿಗೆ ಸಮಯ ಕಳೆಯಲೂ ಪುರುಸೊತ್ತು ಇಲ್ಲದಷ್ಟು ಬ್ಯುಸಿಯಾಗಿದ್ದರೆ, ಈಗ ಯಾಕೆ ಈ ಮಾತು ಅಂತ ಯೋಚನೆ ಮಾಡಬೇಡಿ, ಮುಂದಿನ ತಿಂಗಳು ಅಂದರೆ ಜುಲೈ 6ರಂದು ಬಿಡುಗಡೆಯಾಗಲಿರುವ "ಅಸತೋಮ ಸದ್ಗಮಯ" ಕನ್ನಡ ಚಲನಚಿತ್ರದಲ್ಲಿ ಈ ಒಂದು ಸೂಕ್ಷ್ಮ ವಿಚಾರವನ್ನ ತುಂಬಾ ಅಚ್ಚುಕಟ್ಟಾಗಿ ತಿಳಿಸಲಾಗಿದೆ.

  ಅಮ್ಮಂದಿರಿಗಾಗಿ ಅನುರಾಧ ಭಟ್ ಹಾಡಿರುವ ಹೊಸ ಹಾಡು ಕೇಳಿಅಮ್ಮಂದಿರಿಗಾಗಿ ಅನುರಾಧ ಭಟ್ ಹಾಡಿರುವ ಹೊಸ ಹಾಡು ಕೇಳಿ

  ತುಂಬಾ ಮನೋರಂಜನಾತ್ಮಕವಾಗಿ ಪ್ರೆಸೆಂಟ್ ಮಾಡಲಾಗಿದೆ. ಇದಕ್ಕೆ ಬರೀ ಹೆತ್ತವರು ಮಾತ್ರ ಕಾರಣವಲ್ಲದೆ, ಈಗಿನ ಎಜುಕೇಶನ್ ಸಿಸ್ಟಂ ಕೂಡಾ ಕಾರಣವಾಗಿದೆ. ಹಾಗಾಗಿ ಎಜುಕೇಶನ್ ಸಿಸ್ಟಂ ಹೇಗಿರಬೇಕು, ಮುಚ್ಚುತ್ತಿರುವ ಸರಕಾರಿ ಶಾಲೆಗಳು ಉಳಿಯಬೇಕಾದರೆ ಏನು ಮಾಡಬೇಕು.. ಎಂಬುದನ್ನು ಕೂಡ ಈ ಚಿತ್ರದಲ್ಲಿ ಹೇಳಲಾಗಿದೆ.

  Asathoma Sadgamaya film is being released on July 6th

  'ಅಸತೋಮ ಸದ್ಗಮಯ' ಚಿತ್ರವನ್ನು ರಾಜೇಶ್ ವೇಣೂರು ನಿರ್ದೇಶನ ಮಾಡಿದ್ದು . ಚಿತ್ರದಲ್ಲಿ ರಾಧಿಕಾ ಚೇತನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ, ಕಿರಣ್ ರಾಜ್ ಮತ್ತು ಲಾಸ್ಯ ನಾಗರಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

  English summary
  Kannada Asathoma Sadgamaya film is being released on July 6th. Radhika Chetan has played the lead role in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X