For Quick Alerts
  ALLOW NOTIFICATIONS  
  For Daily Alerts

  'ಅಸತೋಮ ಸದ್ಗಮಯ' ಟ್ರೈಲರ್-ಸಾಂಗ್ಸ್ ಹಿಟ್ ಈಗ ಸಿನಿಮಾ ಟೈಮ್

  By Bharath Kumar
  |

  ರಾಧಿಕಾ ಚೇತನ್ ಅಭಿನಯದ "ಅಸತೋಮ ಸದ್ಗಮಯ' ಸಿನಿಮಾ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಸದ್ಯ, ಟ್ರೈಲರ್ ಮತ್ತು ಹಾಡುಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಭರವಸೆ ಮೂಡಿಸಿರುವ ಈ ಚಿತ್ರ ಜುಲೈ 6 ರಂದು ಬಿಡುಗಡೆಯಾಗುತ್ತಿದೆ.

  ಐಕೇರ್ ಮೂವೀಸ್‌ ಲಾಂಛನದಡಿಯಲ್ಲಿ, ಅಶ್ವಿನ್ ಪಿರೇರಾರವರು ನಿರ್ಮಿಸಿ, ರಾಜೇಶ್ ವೇಣೂರ್ ನಿರ್ದೇಶನ ಮಾಡಿರುವ ಈ ಚಿತ್ರ ಸಸ್ಪೆನ್ಸ್, ಕಾಮಿಡಿ, ಆಕ್ಷನ್, ಮೆಸೆಜ್ ಹೀಗೆ ಎಲ್ಲಾ ಅಂಶಗಳ ಮೂಲಕ ಗಮನ ಸೆಳೆದಿದೆ. ಹಾಡುಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

  ರಾಧಿಕಾ ಚೇತನ್ ಚೇತನ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಎನ್.ಆರ್.ಐ ಪಾತ್ರವನ್ನ ನಿರ್ವಹಿಸಿದ್ದಾರೆ. 'ಮಾರ್ಚ್ 22' ಚಿತ್ರದಲ್ಲಿ ನಟಿಸಿದ್ದ ಕಿರಣ್ ರಾಜ್ ಈ ಚಿತ್ರದ ನಾಯಕನಾಗಿದ್ದು, ಇದು ಅವರಿಗೆ ಎರಡನೇ ಸಿನಿಮಾ. 'ಬಿಗ್ ಬಾಸ್' ಖ್ಯಾತಿ ಲಾಸ್ಯ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದು, ಚಿತ್ರಕ್ಕೆ ಗ್ಲಾಮರ್ ಹೆಚ್ಚಿಸಿದ್ದಾರೆ. 'ಡ್ರಾಮಾ ಜೂನಿಯರ್ಸ್' ಖ್ಯಾತಿಯ ಚಿತ್ರಾಲಿ ಕೂಡ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದ್ದಾರೆ.

  ಅಂದ್ಹಾಗೆ, ರಾಜೇಶ್ ವೇಣೂರು ಅವರು ಚೊಚ್ಚಲ ಸಿನಿಮಾ ಇದಾಗಿದ್ದು, ಇದಕ್ಕೂ ಮುಂಚೆ ಮಂಗಳೂರಿನಲ್ಲಿ ಪೇಸ್ ಮೀಡಿಯಾ ಪ್ರೊಡಕ್ಷನ್ ಹೌಸ್ ಮೂಲಕ ಸಾಕ್ಷ್ಯಚಿತ್ರ ಮತ್ತು ಜಾಹೀರಾತುಗಳನ್ನ ನಿರ್ದೇಶನ ಮಾಡಿದ್ದಾರೆ. ಪತ್ರಿಕೋಧ್ಯಮ ಪದವಿಧರರು ಆಗಿದ್ದಾರೆ. ಇನ್ನು ಈ ಚಿತ್ರವನ್ನ ನಿರ್ಮಾಣ ಮಾಡಿರುವ ಅಶ್ವಿನ್ ಪರೇರಾ ಅವರು ಮೂಡಬಿದ್ರಿಯಲ್ಲಿ ಖ್ಯಾತ ಉದ್ಯಮಿಯಾಗಿದ್ದು, ಜೆಡಿಎಸ್ ಪಕ್ಷದ ಸಂಚಾಲಕರಾಗಿದ್ದಾರೆ.

  Asathoma Sadgamaya releasing on july 6th

  ಇನ್ನು ಚಿತ್ರದ ಕಥೆ ಬಗ್ಗೆ ಹೇಳುವುದಾರೇ, 'ಅಸತೋಮ ಸದ್ಗಮಯ' ಸಂಬಂಧಗಳ ಮೌಲ್ಯವನ್ನ ಎತ್ತು ಹಿಡಿಯುತ್ತೆ. ಶಿಕ್ಷಣ ವ್ಯವಸ್ಥೆಯ ಬಗ್ಗೆ ಸೂಕ್ಷ್ಮವಾಗಿ ಗಮನ ಹರಿಸಿರುವ ಚಿತ್ರತಂಡ ಮನರಂಜನೆಯ ಜೊತೆಗೆ ಒಂದೊಳ್ಳೆ ಸಂದೇಶ ನೀಡುವ ಪ್ರಯತ್ನ ಮಾಡಿದೆ.

  ಈಗಿನ ಜನರೇಶನ್ ಮಕ್ಕಳು ತುಂಬಾ ಸ್ಮಾರ್ಟ್ ಇದ್ದರೂ, ಸಂಬಂಧಗಳ ಬೆಲೆ ಕಡಿಮೆಯಾಗಿರುತ್ತೆ. ಹೆತ್ತವರು ತಮ್ಮ ಮಕ್ಕಳ ಮಾರ್ಕ್ಸ್ಸ ಮತ್ತು ಕರಿಯರ್ ಬಗ್ಗೆ ಜಾಸ್ತಿ ಗಮನ ಹರಿಸುತ್ತಾರೆ ಹೊರತು, ಅದರಿಂದ ಏನೆಲ್ಲಾ ಪರಿಣಾಮ ಬೀರುತ್ತೆ ಎಂಬುದರ ಬಗ್ಗೆ ಅರಿವಿರಲ್ಲ. ಈ ಅಂಶಗಳನ್ನಿಟ್ಟು ಒಂದೊಳ್ಳೆ ಮನರಂಜನೆಯ ಜೊತೆ ಸಿನಿಮಾ ಮಾಡಲಾಗಿದೆ.

  ಇನ್ನುಳಿದಂತೆ ವಹಾಬ್ ಸಲೀಂ ಸಾಹಿತ್ಯದ ಜೊತೆ ಚಿತ್ರಕ್ಕೆ ಸಂಗೀತ ನೀಡಿದ್ದು, ಒಂದಕ್ಕಿಂತ ಒಂದು ಹಾಡುಗಳು ಮೋಡಿ ಮಾಡುತ್ತಿದೆ. ಕಿಶೋರ್ ಕುಮಾರ್ ಅವರ ಕ್ಯಾಮೆರಾ, ರವಿಚಂದ್ರನ್ ಅವರ ಸಂಕಲನ ಚಿತ್ರಕ್ಕಿದೆ.

  English summary
  Much awaited movie "Asathoma Sadgamaya" is ready to release. The movie produced by Ashwin Pereira and directed by Rajesh Venoor and starring radhika chethan, lasya, kiran raj in the lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X