ಚಿನ್ನಿ ದಾಂಡು ಆಡಿದ 'ರಾಬರ್ಟ್' ನಾಯಕಿ ಆಶಾ: ಕನ್ನಡದ ಅಪ್ಪಟ ಮಣ್ಣಿನ ಮಗಳು ಎಂದ ಫ್ಯಾನ್ಸ್
ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿರುವ ನಟಿ ಆಶಾ ಭಟ್ ಹಳ್ಳಿಯಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಆಶಾ ಭಟ್ ಆಗಾಗ ಹಳ್ಳಿಗೆ ಭೇಟಿ ನೀಡುತ್ತಿರುತ್ತಾರೆ. ಅಂದಹಾಗೆ ಆಶಾ ಹುಟ್ಟಿಬೆಳೆದಿದ್ದು ತನ್ನ ಅಜ್ಜಿ ಮನೆ ಶಿರಸಿಯಲ್ಲಿ. ಹಳ್ಳಿ ವಾತಾವರಣದಲ್ಲಿ ಬೆಳೆದ ಆಶಾಗೆ ಅಜ್ಜಿ ಮನೆ ಹಳ್ಳಿ ಎಂದರೆ ತುಂಬಾ ಇಷ್ಟ. ಭದ್ರಾವತಿಯ ಈ ಸುಂದರಿ ಆಗಾಗ ಹಳ್ಳಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.
ಈ ಮೂಲಕ ಆಶಾ ಅಪ್ಪಟ ಕನ್ನಡ ನಾಡಿನ ಪ್ರತಿಭೆ ಎನ್ನುವುದನ್ನು ಆಗಾಗ ಸಾಬೀತುಪಡಿಸುತ್ತಿರುತ್ತಾರೆ. ಇದೀಗ ಮತ್ತೆ ಅಜ್ಜಿ ಮನೆಗೆ ಭೇಟಿ ನೀಡಿರುವ ಆಶಾ ಹಳ್ಳಿ ಮಕ್ಕಳ ಜೊತೆ ಸೇರೆ ಚಿನ್ನ ದಾಂಡು ಆಟವಾಡಿದ್ದಾರೆ. ಚಿನ್ನಿ ದಾಂಡು ಒಂದು ಪ್ರಸಿದ್ಧ ಗ್ರಾಮೀಣ ಕ್ರೀಡೆ. ಹಳ್ಳಿಗಳಲ್ಲಿ ಮಕ್ಕಳು ಇಂದಿಗೂ ಈ ಕ್ರೀಡೆಯನ್ನು ಆಡುತ್ತಾರೆ. ಇದರೆ ಇತ್ತೀಚಿಗಷ್ಟೆ ತೀರ ಅಪರೂಪದ ಆಟವಾಗಿದೆ. ಈ ಆಟವನ್ನು ಆಶಾ ಭಟ್ ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮುಂದೆ ಓದಿ..

ಮಕ್ಕಳ ಗ್ಯಾಂಗ್ ಜೊತೆ ಆಶಾ ಭಟ್ ಚಿನ್ನಿ ದಾಂಡು ಆಟ
ಸದ್ಯ ಅಜ್ಜಿಮನೆಯಲ್ಲಿ ಕಾಲಕಳೆಯುತ್ತಿರುವ ಆಶಾ, ನೀಲಿ ಬಣ್ಣದ ಕುರ್ತ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುವ ಆಶಾ ಭಟ್ ದುಪ್ಪಟವನ್ನು ಸೊಂಟಕ್ಕೆ ಕಟ್ಟಿ ಚಿನ್ನಿ ದಾಂಡು ಆಟಕ್ಕೆ ಇಳಿದಿದ್ದಾರೆ. ಮಕ್ಕಳ ಗ್ಯಾಂಗ್ ಜೊತೆ ಆಶಾ ಭಟ್ ಚಿನ್ನಿ ದಾಂಡು ಆಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಆಶಾ ಭಟ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಅಭಿಮಾನಿಗಳ ಮೆಚ್ಚುಗೆ
ವಿಡಿಯೋ ಶೇರ್ ಮಾಡಿ, "ಸಣ್ಣ ವಿಷಯವನ್ನು ನೀವು ಪ್ರಶಂಸಿಸಲು ಆರಂಭಿಸಿದಾಗ ಜೀವನವು ತುಂಬಾ ಉತ್ತಮವಾಗಿರುತ್ತದೆ" ಎಂದು ಹೇಳಿದ್ದಾರೆ. ಆಶಾ ಭಟ್ ಈ ವಿಡಿಯೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದುಬಂದಿವೆ. ಇನ್ನು ಕೆಲವರು ಕಾಮೆಂಟ್ ಮಾಡಿ, "ನಮ್ಮ ಕನ್ನಡ ನಾಡಿನ ಅಪ್ಪಟ ಮಣ್ಣಿನ ಮಗಳು ನೀವು. ನಮಗೆ ದೊರೆತ ಅದ್ಭುತ ರತ್ನ" ಎಂದು ಹಾಡಿಹೊಗಳುತ್ತಿದ್ದಾರೆ.

ಅಡಿಕೆ ಸುಲಿದು ಗಮನಸೆಳೆದಿದ್ದ ರಾಬರ್ಟ್ ರಾಣಿ
ಕಳೆದ ವರ್ಷ ಅಜ್ಜಿ ಮನೆಯಿಂದ ಆಶಾ ಭಟ್ ಅಡಿಕೆ ಸುಲಿಯುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಅಜ್ಜಿಮನೆಯಲ್ಲಿ ಅಡಿಕೆ ಸುಲಿದು ಎಂಜಾಯ್ ಮಾಡಿದ್ದರು. ಖುಷಿ ಖುಷಿಯಾಗಿ ಅಡಿಕೆ ಸುಲಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋ ಶೇರ್ ಮಾಡಿ ಅಶಾ ಭಟ್, 'ಅಜ್ಜಿ ಮನೆಯಲ್ಲಿ ಅಡಿಕೆ ಸುಲಿಯುವ ಮಜಾನೇ ಬೇರೆ' ಎಂದು ಬರೆದುಕೊಂಡಿದ್ದರು.
ಆಶಾ ಭಟ್ ಸಿನಿಮಾಗಳು
ಆಶಾ ಭಟ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟರು. ಬಾಲಿವುಡ್ ನಲ್ಲಿ ಜಂಗ್ಲಿ ಸಿನಿಮಾ ಮಾಡಿದ್ದ ಆಶಾ ಭಟ್ ಬಳಿಕ ಕನ್ನಡದ ಕಡೆ ಮುಖಮಾಡಿದ್ದಾರೆ. ರಾಬರ್ಟ್ ಬಳಿಕ ಆಶಾ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾ ಜೊತೆಗೆ ತೆಲುಗಿನ ಒಂದು ಸಿನಿಮಾ ಕೂಡ ಆಶಾ ಕೈಯಲ್ಲಿದೆ.


Click it and Unblock the Notifications











