ಬರ್ತಡೇ ಸ್ಪೆಷಲ್: ಮತ್ತೆ ಮತ್ತೆ ನೆನಪಾಗುವ ಆಶಾ ಭೋಂಸ್ಲೆ ಹಾಡುಗಳು

By Pavithra

ಬಾಲಿವುಡ್ ನ ಪ್ರಖ್ಯಾತ ಹಿನ್ನಲೆ ಗಾಯಕಿ ಆಶಾ ಭೋಂಸ್ಲೆ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 85ನೇ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿರುವ ಆಶಾ ಭೋಂಸ್ಲೆ ಅವರಿಗೆ ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಸಹೋದರಿಯೂ ಆಗಿರುವ ಆಶಾ, ಲತಾ ಅವರಷ್ಟೇ ಗಾಯನದಲ್ಲಿ ಖ್ಯಾತಿ ಪಡೆದಿದ್ದಾರೆ. ಆಶಾ ಭೋಂಸ್ಲೆ 1933 ಸೆ.8 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದರು. ಹಿಂದಿ ಸೇರಿದಂತೆ 20 ಭಾಷೆಗಳಲ್ಲಿ ಹಾಡು ಹಾಡಿದ ಖ್ಯಾತಿ ಇವರದ್ದಾಗಿದೆ.

ಒಟ್ಟು 12 ಸಾವಿರಕ್ಕೂ ಅಧಿಕ ಹಾಡನ್ನು ಹಾಡಿದ್ದಾರೆ. 1953 ರಲ್ಲಿ ಆಶಾ ಬೋಸ್ಲೆ ಅವರ ವೃತ್ತಿ ಜೀವನ ಆರಂಭವಾಯಿತು. ಸಿನೆಮಾ, ಪಾಪ್, ಗಜಲ್, ಭಜನೆ ಸೇರಿದಂತೆ ಎಲ್ಲಾ ರೀತಿಯ ಹಾಡನ್ನು ಹಾಡಿದ್ದಾರೆ. ಆಶಾ ಭೋಂಸ್ಲೆ ಹುಟ್ಟುಹಬ್ಬದ ಸಂದರ್ಭದಲ್ಲಿ ನಿಮಗಾಗಿ ಅವರ ವೃತ್ತಿ ಜೀವನದಲ್ಲಿ ಅತ್ಯಂತ ಯಶಸ್ಸು ತಂದು ಕೊಟ್ಟ ಹಾಗೂ ಮತ್ತೆ ಮತ್ತೆ ನೆನಪಾಗುವ ಐದು ಬೇರೆ ಬೇರೆ ಶೈಲಿಯ ಹಾಡುಗಳನ್ನು ನಿಮ್ಮ ಮುಂದೆ..

ಇಂದಿಗೂ ಫೇಮಸ್

ಇಂದಿಗೂ ಫೇಮಸ್ "ಧಮ್ ಮಾರೋ ಧಮ್ "

'ಧಮ್ ಮಾರೋ ಧಮ್' ಆರ್ ಡಿ ಬರ್ಮನ್ ಹಾಗೂ ಆಶಾ ಭೋಂಸ್ಲೆ ಕಾಂಬಿನೇಶನ್ ನಲ್ಲಿ ಮೂಡಿ ಬಂದ ಹಾಡು. 'ಹರೇ ರಾಮ ಹರೇ ಕೃಷ್ಣ' ಸಿನಿಮಾ ಈ ಹಾಡು ಸಂಗೀತ ಪ್ರಿಯರ ಹಾಡುಗಳ ಲೀಸ್ಟ್ ನಲ್ಲಿ ಮೊದಲಿರುತ್ತೆ. ಇದೇ ಹಾಡಿನ ರೀಮಿಕ್ಸ್ ನಲ್ಲಿ ದೀಪಿಕಾ ಪಡುಕೋಣೆ ಹೆಜ್ಜೆ ಹಾಕಿದ್ದರು.

ಮುಮ್ತಾಜ್ ಸೌಂದರ್ಯಕ್ಕೆ ಧ್ವನಿಯಾಗಿದ್ದ ಆಶಾ

ಮುಮ್ತಾಜ್ ಸೌಂದರ್ಯಕ್ಕೆ ಧ್ವನಿಯಾಗಿದ್ದ ಆಶಾ

ಆಶಾ ಭೋಂಸ್ಲೆ ನಟಿ ಮುಮ್ತಾಜ್ ಅವರ ಬಹುತೇಕ ಹಾಡುಗಳಿಗೆ ಧ್ವನಿ ಆಗುತ್ತಿದ್ದರು. ಅವುಗಳಲ್ಲಿ ಸೂಪರ್ ಹಿಟ್ ಆದ ಹಾಡು "ಯೇ ಹೈ ರಶ್ಮಿ ಜುಲ್ಫೋನ್ ಕಾ ಅಂದೇರಾ" ಓಪಿ ನಯ್ಯರ್ ಕಂಪೋಸ್ ಮಾಡಿದ ಈ ಹಾಡು ಆಶಾ ಭೋಂಸ್ಲೆ ಧ್ವನಿಯಿಂದ ಮತ್ತಷ್ಟು ಇಂಪಾಗಿತ್ತು.

ಎಲ್ಲಾ ರೀತಿಯ ಹಾಡುಗಳಿಗೆ ಆಶಾ ಧ್ವನಿ

ಎಲ್ಲಾ ರೀತಿಯ ಹಾಡುಗಳಿಗೆ ಆಶಾ ಧ್ವನಿ

ಆಶಾ ಭೋಂಸ್ಲೆ ಅವರನ್ನು ಕ್ಯಾಬರೆ ಹಾಡನ್ನು ಹಾಡಿಸಲು ಸಾಕಷ್ಟು ನಿರ್ದೇಶಕರು ನಿರ್ಮಾಪಕರು ಇಷ್ಟ ಪಡುತ್ತಿದ್ದರಂತೆ. ಕಾರಣ ಅವರ ಧ್ವನಿಯಲ್ಲಿ ಕ್ಯಾಬರೆ ಹಾಡಿಗೆ ಮ್ಯಾಚ್ ಆಗುವಂತಹ ಮಾದಕತೆ ಇತ್ತು. ಬಿಂದು ಮತ್ತು ಹೆಲೆನ್ ನಂತಹ ಹಲವು ಐಟಂ ಗೀತೆಗಳಿಗೆ ಆಶಾ ಭೋಂಸ್ಲೆ ಧ್ವನಿ ನೀಡಿದ್ದಾರೆ. ಆದರೆ 1971 ರ 'ಕಾರವಾನ್' ಚಿತ್ರದ 'ಪಿಯಾ ತು ಅಬ್ ತೋ ಆಜಾ' ಸಖತ್ ಫೇಮಸ್ ಆಗಿತ್ತು.

ಗಝಲ್ ಗೆ ಹೇಳಿ ಮಾಡಿಸಿದ ಧ್ವನಿ

ಗಝಲ್ ಗೆ ಹೇಳಿ ಮಾಡಿಸಿದ ಧ್ವನಿ

1981 ರಲ್ಲಿ ಬಿಡುಗಡೆಯಾದ ಚಲನಚಿತ್ರವಾದ 'ಉಮ್ರಾವ್ ಜಾನ್' ಚಿತ್ರದಲ್ಲಿ ಆಶಾ ಭೋಂಸ್ಲೆ ಹಾಡಿದ ಹಾಡನ್ನು ಕೇಳಿ ಇಡೀ ಚಿತ್ರರಂಗವೇ ಆಶ್ಚರ್ಯ ಪಟ್ಟಿತ್ತು. ಆಶಾ ಭೋಂಸ್ಲೆ ಅವರು ಗಝಲ್ ಗಳಿಗೆ ಧ್ವನಿ ನೀಡಬಹುದೆಂದು ಯಾರೂ ಊಹಿಸಲಿಲ್ಲ. ಆದರೆ ಅವರು ಪರಿಪೂರ್ಣ ಆಯ್ಕೆ ಎಂದು ಎನ್ನುವುದು ಹಾಡಿ ಕೇಳಿದ ಪ್ರತಿಯೊಬ್ಬರ ಅಭಿಪ್ರಾಯವಾಗಿತ್ತು.

ತನ್ಹಾ ತನ್ಹಾ ಎಂದು ಹಾಡಿದ ಆಶಾ

ತನ್ಹಾ ತನ್ಹಾ ಎಂದು ಹಾಡಿದ ಆಶಾ

ಆಶಾ ಬೋಸ್ಲೆ ತಮ್ಮ 60ನೇ ವಯಸ್ಸಿನಲ್ಲಿ ರಂಗೀಲಾ ಸಿನಿಮಾದ ತನ್ಹಾ ತನ್ಹಾ ಹಾಡಿಗೆ ಧ್ವನಿಯಾಗಿದ್ದರು. ಎ ಆರ್ ರೆಹಮಾನ್ ಟ್ಯೂನ್ ಗೆ ಆಶಾ ವಾಯ್ಸ್ ಸಖತ್ತಾಗಿಯೇ ಮ್ಯಾಚ್ ಆಗಿತ್ತು.

More from Filmibeat

English summary
Senior singer Asha Bhosle is celebrating his birthday today. Here are some of the special songs that Asha Bhosle sings.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X