For Quick Alerts
  ALLOW NOTIFICATIONS  
  For Daily Alerts

  ಹಾಲಿವುಡ್ ನಿರ್ದೇಶಕನ ಸಿನಿಮಾದಲ್ಲಿ ಭದ್ರಾವತಿ ಬೆಡಗಿ ಆಶಾ

  |
  ಹಾಲಿವುಡ್ ನಿರ್ದೇಶಕನ ಸಿನಿಮಾದಲ್ಲಿ ಭದ್ರಾವತಿ ಬೆಡಗಿ ಆಶಾ |FILMIBEAT KANNADA

  ಕನ್ನಡದ ಸಾಕಷ್ಟು ನಟಿಮಣಿಯರು ಬಾಲಿವುಡ್ ಅಂಗಳದಲ್ಲಿ ಮಿಂಚು ಹರಿಸುತ್ತಿದ್ದಾರೆ. ಈಗ ಅದೆ ಸಾಲಿಗೆ ಮತ್ತೋರ್ವ ಕನ್ನಡದ ನಟಿ ಸೇರ್ಪಡೆಯಾಗಿದ್ದಾರೆ. ಅಪ್ಪಟ ಕನ್ನಡತಿ ಭದ್ರಾವತಿಯ ಚೆಲುವೆ ಆಶಾ ಈಗ ಬಾಲಿವುಡ್ ಮಂದಿಯ ಗಮನ ಸೆಳೆದಿದ್ದಾರೆ.

  ಕನ್ನಡತಿಯೊಬ್ಬಳು ಹಿಂದಿ ಸಿನಿಮಾರಂಗದಲ್ಲಿ ಮಿಂಚುತ್ತಿರುವುದು ಇದೆ ಮೊದಲೇನಲ್ಲ. ಬಿ ಟೌನ್ ನಲ್ಲಿ ನಾಯಕಿಯರಾಗಿ ಮೆರೆಯುತ್ತಿರುವ ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ಶಿಲ್ಪಾ ಶೆಟ್ಟಿ ಎಲ್ಲರೂ ಕರ್ನಾಟಕದವರು ಎನ್ನುವುದು ನಮ್ಮ ಹೆಮ್ಮೆ. ಇದೀಗ, ಅವರಂತೆ ಆಶಾ ಭಟ್ ಕೂಡ ಬಿಗ್ ಇಂಡಸ್ಟ್ರಿ ಪ್ರವೇಶ ಮಾಡಿದ್ದು, ಅದೃಷ್ಟದ ಬಾಗಿಲು ಮುಟ್ಟಿದ್ದಾರೆ.

  ಎರಡನೇ ಪತ್ನಿ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕಿದ ನಟ ಜಾನಿ ಡೆಪ್

  ಈಗಾಗಲೇ ಆಶಾ ಅಭಿನಯದ ಚೊಚ್ಚಲ ಹಿಂದಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಬಿ ಟೌನ್ ಮಂದಿಯ ಕಣ್ಣು ಕುಕ್ಕುತ್ತಿದೆ. ವಿಶೇಷ ಅಂದ್ರೆ ಈ ಚಿತ್ರವನ್ನ ನಿರ್ದೇಶನ ಮಾಡಿರೋದು ಹಾಲಿವುಡ್ ಖ್ಯಾತಿಯ ಡೈರೆಕ್ಟರ್. ಅಷ್ಟಕ್ಕೂ, ಕನ್ನಡತಿ ಆಶಾ ಅಭಿನಯದ ಆ ಹಿಂದಿ ಸಿನಿಮಾ ಯಾವುದು? ಆಶಾ ಅವರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ ಆ ಹಾಲಿವುಡ್ ಡೈರೆಕ್ಟರ್ ಯಾರು? ಮುಂದೆ ಓದಿ.....

  ಜಂಗ್ಲಿ ಸಿನಿಮಾದಲ್ಲಿ ಕನ್ನಡತಿ

  ಜಂಗ್ಲಿ ಸಿನಿಮಾದಲ್ಲಿ ಕನ್ನಡತಿ

  ಭದ್ರಾವತಿ ಮೂಲದ ಆಶಾ ಭಟ್ ಅಭಿನಯದ ಮೊದಲ ಬಾಲಿವುಡ್ ಸಿನಿಮಾ ಜಂಗ್ಲಿ ಚಿತ್ರದ ಟ್ರೈಲರ್ ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ತುಂಬಾ ಅದ್ಧೂರಿಯಾಗಿ ಮೂಡಿ ಬಂದಿರುವ ಈ ಟ್ರೈಲರ್ ಬಿ ಟೌನ್ ಮಂದಿಯ ನಿದ್ದೆ ಗೆಡಿಸಿದೆ. ಅಷ್ಟೆಯಲ್ಲ ನಟಿ ಆಶಾ ಭಟ್ ಪಾತ್ರ ಸಹ ಸಿನಿರಸಿಕರ ಗಮನ ಸೆಳೆದಿದೆ.

  'ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್'ಗೆ ಆಸ್ಕರ್ : ಉತ್ತರ ಪ್ರದೇಶದ ಗ್ರಾಮದಲ್ಲಿ ಸಂಭ್ರಮ

  ಹಾಲಿವುಡ್ ನಿರ್ದೇಶಕನ ಜೊತೆ ಭದ್ರಾವತಿ ಹುಡುಗಿ

  ಹಾಲಿವುಡ್ ನಿರ್ದೇಶಕನ ಜೊತೆ ಭದ್ರಾವತಿ ಹುಡುಗಿ

  ಮೊದಲ ಸಿನಿಮಾದಲ್ಲಿ ಆಶಾ ಅವರಿಗೆ ಹಾಲಿವುಡ್ ನಿರ್ದೇಶಕನ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಹೌದು, ಬಾಲಿವುಡ್ ನ ಜಂಗ್ಲಿ ಸಿನಿಮಾಗೆ ನಿರ್ದೇಶನ ಮಾಡುತ್ತಿರುವುದು ಹಾಲಿವುಡ್‌ ನ ಖ್ಯಾತ ನಿರ್ದೇಶಕ ಚಕ್ ರುಸ್ಸೇಲ್. ಈ ಹಿಂದೆ ರುಸ್ಸೇಲ್ ನಿರ್ದೇಶ ಮಾಡಿದ್ದ 'ದಿ ಮಾಸ್ಕ್' ಸಿನಿಮಾ ಆಸ್ಕರ್ ಗೆ ನಾಮಿನೇಟ್ ಆಗಿತ್ತು. ಅಂತಹ ಖ್ಯಾತ ಹಾಲಿವುಡ್ ನಿರ್ದೇಶಕನ ಸಿನಿಮಾದಲ್ಲಿ ಭದ್ರಾವತಿಯ ಆಶಾ ನಾಯಕಿಯಾಗಿ ಸಿನಿಮಾ ಪಯಣವನ್ನು ಪ್ರಾರಂಭಿಸುತ್ತಿದ್ದಾರೆ.

  ಹಾಲಿವುಡ್ ನಲ್ಲಿ ಮಿಂಚುತ್ತಿರುವ ಬೆಂಗಳೂರು ಹುಡುಗಿ

  ಮಿಸ್ ಸುಪ್ರಾ ಇಂಟರ್ ನ್ಯಾಷನಲ್ ವಿನ್ನರ್

  ಮಿಸ್ ಸುಪ್ರಾ ಇಂಟರ್ ನ್ಯಾಷನಲ್ ವಿನ್ನರ್

  ಓದುತ್ತಿರುವಾಗಲೆ ಮಿಸ್ ಸುಪ್ರಾ ಇಂಟರ್ ನ್ಯಾಶನಲ್ ಆಡಿಶನ್ ನಲ್ಲಿ ಭಾಗಿಯಾಗಿ ನಂತರ ಕಿರೀಟವನ್ನು ಮುಡಿಗೇರಿಸಿಕೊಂಡವರು. 2014ರಲ್ಲಿ ಪೋಲೆಂಡ್ ನಲ್ಲಿ ನಡೆದ ಮಿಸ್ ಸುಪ್ರಾ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು ಆಶಾ. ಮಿಸ್ ಸುಪ್ರಾ ಇಂಟರ್ ನ್ಯಾಷನಲ್ ಕಿರೀಟವನ್ನು ತನ್ನದಾಗಿಸಿಕೊಳ್ಳುವ ಮೂಲಕ ಆಶಾ ಈ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ನಾರಿ ಅನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದ್ದಾರೆ.

  ಯಾರು ಈ ಆಶಾ?

  ಯಾರು ಈ ಆಶಾ?

  ಆಶಾ ಕರ್ನಾಟಕದ ಭದ್ರಾವತಿಯವರು. ಮೂಡಬಿದರೆಯ ಆಳ್ವಾಸ್ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಮುಗಿಸಿದ್ದಾರೆ. ಓದುತ್ತಿರುವಾಗಲೆ ಫ್ಯಾಶನ್ ಲೋಕಕ್ಕೆ ಎಂಟ್ರಿಕೊಟ್ಟಿದ್ದ ಆಶಾ ಮಿಸ್ ಸುಪ್ರಾ ಇಂಟರ್ ನ್ಯಾಷನಲ್ ಕಿರೀಟ ಗೆದ್ದ ನಂತರ ಜಾಹಿರಾತು ಪ್ರಪಂಚದಲ್ಲಿ ಗುರುತಿಸಿಕೊಂಡಿದ್ದರು. ಆ ನಂತರ ಓದಿನ ಕಡೆ ಹೆಚ್ಚು ಗಮನ ಹರಿಸಿದ್ದ ಆಶಾ. ಈಗ ಓದು ಮುಗಿಸಿ ಸಿನಿ ಪಯಣವನ್ನು ಪ್ರಾರಂಭಿಸಿದ್ದಾರೆ.

  ಜಂಗ್ಲಿ ಸಿನಿಮಾದಲ್ಲಿ ಇಬ್ಬರು ನಾಯಕಿಯರು

  ಜಂಗ್ಲಿ ಸಿನಿಮಾದಲ್ಲಿ ಇಬ್ಬರು ನಾಯಕಿಯರು

  ಹಾಲಿವುಡ್ ನಿರ್ದೇಶಕ ಚಕ್ ರುಸ್ಸೇಲ್ ನಿರ್ದೇಶನ ಮಾಡುತ್ತಿರುವ ಜಂಗ್ಲಿ ಚಿತ್ರದಲ್ಲಿ ನಾಯಕನಾಗಿ ವಿದ್ವತ್ ಜಮ್ ವಾಲ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರು ಬಣ್ಣಹಚ್ಚಿದ್ದಾರೆ. ಆಶಾ ಅವರಿಗೆ ಜೊತೆಯಾಗಿ ಮತ್ತೋರ್ವ ನಾಯಕಿ ಪೂಜಾ ಸಾವಂತ್ ಜೊತೆಯಾಗಿದ್ದಾರೆ.

  English summary
  Asha is the first indian to win miss supra national pageante. asha will make her debut in hindi with jungle movie. junglee is directed by hollywood filmmaker Chuck Russell.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X