»   » 12 ಸಾವಿರಕ್ಕೂ ಹೆಚ್ಚು ಸಿನಿಮಾ ಗೀತೆಗಳ ಗಾಯನ

12 ಸಾವಿರಕ್ಕೂ ಹೆಚ್ಚು ಸಿನಿಮಾ ಗೀತೆಗಳ ಗಾಯನ

Posted By: Super
Subscribe to Filmibeat Kannada

ನವದೆಹಲಿ: ಪ್ರಸಿದ್ಧ ಗಾಯಕಿ ಆಶಾ ಭೋಂಸ್ಲೆ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ 2000 ಇಸವಿಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಭಾರತೀಯ ಚಲನಚಿತ್ರರಂಗಕ್ಕೆ ಅವರು ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಈ ಅತ್ಯುಚ್ಛ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ.

ಎರಡು ಲಕ್ಷ ರುಪಾಯಿ ನಗದು, ಶಾಲು ಹಾಗೂ ಸ್ವರ್ಣ ಕಮಲವನ್ನು ಪ್ರಶಸ್ತಿ ಒಳಗೊಂಡಿದೆ. ಗಾನರಾಣಿ ಲತಾ ಮಂಗೇಶ್ಕರ್‌ ಅವರ ಕಿರಿಯ ಸೋದರಿಯಾದ ಆಶಾ ಹಿಂದಿ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಸುಮಾರು 12 ಸಾವಿರ ಗೀತೆಗಳನ್ನು ಹಾಡಿದ್ದಾರೆ.


ಆಶಾ ಭೋಂಸ್ಲೆ ಅವರಿಗೆ ಫಾಲ್ಕೆ ಪ್ರಶಸ್ತಿ ದೊರೆಯುವುದರೊಂದಿಗೆ ಸಹೋದರಿಯಿಬ್ಬರೂ (ಲತಾ ಮಂಗೇಶ್ಕರ್‌ ಹಾಗೂ ಆಶಾ ಭೋಂಸ್ಲೆ ) ಚಿತ್ರರಂಗದ ಈ ಅತ್ಯುಚ್ಛ ಪ್ರಶಸ್ತಿ ಪಡೆದಂತಾಗಿದೆ. ಅಂದಹಾಗೆ, ಪ್ರಸಿದ್ಧ ಸಂಗೀತ ನಿರ್ದೇಶಕ ಬರ್ಮನ್‌, ಆಶಾ ಭೋಂಸ್ಲೆ ಅವರ ಪತಿ.

English summary
Singer Asha Bhonsle honoured with Dada Saheb Phalke award for the year 2000

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada