»   » ಕರುನಾಡ ಚಕ್ರವರ್ತಿ ಶಿವಣ್ಣನಿಗೆ ಸಿಕ್ಕಳು ಮತ್ತೊಬ್ಬ ಮುದ್ದಾದ ತಂಗಿ

ಕರುನಾಡ ಚಕ್ರವರ್ತಿ ಶಿವಣ್ಣನಿಗೆ ಸಿಕ್ಕಳು ಮತ್ತೊಬ್ಬ ಮುದ್ದಾದ ತಂಗಿ

Posted By:
Subscribe to Filmibeat Kannada

ನಟ ಶಿವಣ್ಣ ಬೆಳ್ಳಿತೆರೆಯಲ್ಲಿ ಮಾಸ್ ಸಿನಿಮಾಗಳ ಜೊತೆಗೆ ಅಣ್ಣನಾಗಿ ಮಿಂಚಿದ್ದಾರೆ. 'ತವರಿಗೆ ಬಾ ತಂಗಿ', 'ಅಣ್ಣ ತಂಗಿ' ಅಂತಹ ಸಿನಿಮಾಗಳು ಶಿವಣ್ಣನ ಸಿನಿ ಜರ್ನಿಯ ದೊಡ್ಡ ಹಿಟ್ ಸಿನಿಮಾಗಳು. ಈ ಸಿನಿಮಾದ ನಂತರ ಶಿವಣ್ಣ ಮತ್ತು ರಾಧಿಕಾ ಸ್ಯಾಂಡಲ್ ವುಡ್ ನ ಅಣ್ಣ ತಂಗಿ ಆಗಿದ್ದರು.

'ಮಾಸ್ ಲೀಡರ್' ಶಿವಣ್ಣನಿಗೆ ಸೆನ್ಸಾರ್ ನಿಂದ ಗ್ರೀನ್ ಸಿಗ್ನಲ್

ಆದರೆ ಈಗ ಶಿವಣ್ಣನಿಗೆ ಮತ್ತೊಬ್ಬ ತಂಗಿ ಸಿಕ್ಕಿದ್ದಾರೆ. ಅವರು ಬೇರೆ ಯಾರು ಅಲ್ಲ ಯುವ ನಟಿ ಆಶಿಕಾ. ಸದ್ಯ ಕನ್ನಡದಲ್ಲಿ ಸಖತ್ ಶೈನ್ ಆಗುತ್ತಿರುವ ಈ ನಟಿ ಶಿವಣ್ಣನ 'ಮಾಸ್ ಲೀಡರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವಣ್ಣನ ಮುದ್ದಿನ ತಂಗಿಯಾಗಿ ಆಶಿಕಾ ನಟಿಸಿದ್ದಾರೆ.

Ashika plays Shiva rajkumar's sister role in 'Mass Leader'.

ಸದ್ಯ ಆಶಿಕಾ 'ಮಗುಳುನಗೆ', 'ರಾಜು ಕನ್ನಡ ಮೀಡಿಯಂ ' ಸೇರಿದಂತೆ ಸಾಕಷ್ಟು ಅವಕಾಶಗಳನ್ನು ಹೊಂದಿದ್ದಾರೆ. ಅಂದಹಾಗೆ, ಶಿವರಾಜ್ ಕುಮಾರ್ ಶಿವಣ್ಣ ಅವರ 'ಮಾಸ್ ಲೀಡರ್' ಸಿನಿಮಾ ಆಗಸ್ಟ್ 11 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

English summary
Kannada actress Ashika plays Shiva Rajkumar's sister role in 'Mass Leader' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada