ಅರೆಬೆತ್ತಲೆ ಬೆನ್ನು ತೋರಿಸಿ 'ಮದಗಜ'ಗೆ ಪಟ್ಟ ಶ್ರಮದ ಪಟ್ಟಿಕೊಟ್ಟ ಆಶಿಕಾ ರಂಗನಾಥ್
ಸಿನಿಮಾ ನಟಿಯರ ಬಗ್ಗೆ ಪೂರ್ವಾಗ್ರಹವೊಂದಿದೆ. ನಾಯಕಿರದ್ದು ಆರಾಮದಾಯಕ ಕೆಲಸ, ಎರಡು ಹಾಡು, ನಾಲ್ಕು ದೃಶ್ಯಗಳಲ್ಲಿ ಕಾಣಿಸಿಕೊಂಡರೆ ಸಾಕು, ಬಿಸಿಲಲ್ಲಿ ಫೈಟ್ ಮಾಡುವಂತಿಲ್ಲ, ಚೇಸ್ ಮಾಡುವಂತಿಲ್ಲ ಆರಾಮವಾಗಿರಬಹುದು ಎಂದು. ಆದರೆ ನಾಯಕಿಯರ ಕೆಲಸವೂ ಅಷ್ಟೆ ತ್ರಾಸದಾಯಕವಾಗಿರುತ್ತದೆ.
ನಾಯಕ ನಟರಷ್ಟೆ ಶ್ರಮವನ್ನು ನಾಯಕ ನಟಿಯ ಪಾತ್ರವೂ ಬೇಡುತ್ತದೆ ಅದಕ್ಕೆ ಬೇಕಾದ ಶ್ರಮವನ್ನು ನಟಿಯರೂ ಹಾಕಲೇಬೇಕಾಗುತ್ತದೆ. ಇದಕ್ಕಾ ತಾಜಾ ಉದಾಹರಣೆ ನೀಡಿದ್ದಾರೆ ನಟಿ ಆಶಿಕಾ ರಂಗನಾಥ್.
ಈ ಮುದ್ದು ಚೆಲುವೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅರೆಬೆತ್ತಲೆ ಬೆನ್ನಿನ ಚಿತ್ರ ಹಂಚಿಕೊಂಡಿದ್ದಾರೆ. ಹಾಗೆಂದು ಇದ್ಯಾವುದೋ ಗ್ಲಾಮರಸ್ ಚಿತ್ರವನ್ನು ಬಿಟ್ಟ ಕಣ್ಣಿನಿಂದ ನೋಡಿದರೆ ಅಲ್ಲಿ ಕಾಣುವುದು ಆಶಿಕಾ ಬೆನ್ನ ಮೇಲೆ ಬಿದ್ದಿರುವ ಬರೆ!

ಹೌದು, ಆಶಿಕಾ ಹಂಚಿಕೊಂಡಿರುವ ಚಿತ್ರದಲ್ಲಿ ಆಶಿಕಾರ ಬೆನ್ನ ಮೇಲ್ಭಾಗದಲ್ಲಿ ಕೆಂಪಗೆ ಬರೆಯಂತೆ ಮೂಡಿರುವುದು ಕಾಣುತ್ತಿದೆ. ಬಿಸಿಲಿಗೆ ಆಶಿಕಾರ ಚರ್ಮ ಸುಟ್ಟು ಕೆಂಪೇರಿದೆ. ಇದು 'ಮದಗಜ' ಸಿನಿಮಾದ ಪಾತ್ರಕ್ಕೆ ಪಟ್ಟ ಶ್ರಮ ಎಂದು ನಟಿ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
''ಕಂಡಷ್ಟು ಸುಲಭವಲ್ಲ 'ಮದಗಜ'ದ ನಾಯಕಿ ಪಲ್ಲವಿ ಪಾತ್ರದಲ್ಲಿ ನಟಿಸುವುದು. ಆ ಪಾತ್ರಕ್ಕಾಗಿ ಸಾಕಷ್ಟು ಶ್ರಮ, ಕಷ್ಟ, ತಾಳ್ಮೆಗಳನ್ನು ಸುರಿದು ನಟಿಸಿದ್ದೇನೆ. ಇಂದು ರಾಜ್ಯದೆಲ್ಲೆಡೆಯಿಂದ ಪ್ರಶಂಸೆಗಳು ಕೇಳಿ ಬರುತ್ತಿವೆ ಇದು ನನ್ನ ಶ್ರಮಕ್ಕೆ ಫಲ, ಬಹಳ ಸಂತೋಶವಾಗುತ್ತಿದೆ. ನನ್ನನ್ನು ನನ್ನಂತೆಯೇ ಪ್ರೀತಿಸುವ ಎಲ್ಲ ಹುಡುಗರಿಗೂ ಧನ್ಯವಾದ,'' ಎಂದಿದ್ದಾರೆ ಆಶಿಕಾ ರಂಗನಾಥ್.
'ಮದಗಜ' ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಲ್ಲವಿ ಪಾತ್ರದಲ್ಲಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ಕಳೆ ಕೀಳುವುದು, ಬೆಳೆ ಕೊಯ್ಯುವುದು, ಗದ್ದೆ ಉಳುವುದು, ಟ್ರಾಕ್ಟರ್ ಓಡಿಸುವುದು ಇತರೆ ಕಾರ್ಯಗಳನ್ನು ಆಶಿಕಾ ರಂಗನಾಥ್ ಸಿನಿಮಾದಲ್ಲಿ ಮಾಡಿದ್ದಾರೆ. ಸಿನಿಮಾದಲ್ಲಿ ಆಶಿಕಾರ ಅಭಿನಯದ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ಮಹೇಶ್ ಕುಮಾರ್ ನಿರ್ದೇಶನದ 'ಮದಗಜ' ಸಿನಿಮಾದಲ್ಲಿ ಶ್ರೀಮುರಳಿ ನಾಯಕನಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಜಗಪತಿ ಬಾಬು, ರಂಗಾಯಣ ರಘು, ಚಿಕ್ಕಣ್ಣ ಹಾಗೂ ಇತರರು ಇದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಉಮಾಪತಿ ಶ್ರೀನಿವಾಸ್.
ಇನ್ನು ಆಶಿಕಾ ರಂಗನಾಥ್ ಕನ್ನಡ ಸಿನಿಮಾಗಳಲ್ಲಿ ಬಹಳಷ್ಟು ಬ್ಯುಸಿ, ಆಶಿಕಾ ನಟಿಸಿರುವ 'ರೆಮೊ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಈ ಸಿನಿಮಾವನ್ನು ಪವನ್ ಒಡೆಯರ್ ನಿರ್ದೇಶನ ಮಾಡಿದ್ದಾರೆ. ಶರಣ್ ಜೊತೆಗೆ 'ಅವತಾರ ಪುರುಷ' ಸಿನಿಮಾದಲ್ಲಿಯೂ ಆಶಿಕಾ ನಟಿಸಿದ್ದಾರೆ. ಈ ಸಿನಿಮಾವನ್ನು ಸಿಂಪಲ್ ಸುನಿ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











