For Quick Alerts
  ALLOW NOTIFICATIONS  
  For Daily Alerts

  ಪ್ರಜ್ವಲ್ ದೇವರಾಜ್ ಮುಂದಿನ ಚಿತ್ರದಲ್ಲಿ ಆಶಿಕಾ ಅಥವಾ ಅದಿತಿ?

  |

  ಇನ್ಸ್‌ಪೆಕ್ಟರ್ ವಿಕ್ರಂ, ಅರ್ಜುನ್ ಗೌಡ, ವೀರಂ ಅಂತಹ ಚಿತ್ರಗಳಲ್ಲಿ ಬ್ಯುಸಿಯಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹೊಸದೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದರು. 'ಅಂಬಿ ನಿಂಗ್ ವಯಸ್ಸಾಯ್ತೋ' ನಿರ್ದೇಶಕ ಗುರುದತ್ ಗಾಣಿಗ ಜೊತೆ ಹೊಸ ಸಿನಿಮಾ ಶುರುವಾಗಿದ್ದು. ನಾಯಕಿ ವಿಚಾರಕ್ಕೆ ಈ ಚಿತ್ರ ಸುದ್ದಿಯಲ್ಲಿದೆ.

  ಪ್ರಜ್ವಲ್ ದೇವರಾಜ್‌ಗೆ ಈ ಚಿತ್ರದಲ್ಲಿ ನಾಯಕಿಯಾಗಿ ಯಾರು ನಟಿಸಬಹುದು ಎಂಬ ಕುತೂಹಲ ಕಾಡುತ್ತಿದೆ. ಈ ನಡುವೆ ಕನ್ನಡದ ಇಬ್ಬರು ಸ್ಟಾರ್ ನಟಿಯರ ಹೆಸರು ಕೇಳಿ ಬರುತ್ತಿದ್ದು, ಈ ಇಬ್ಬರಲ್ಲಿ ಯಾರು ಅಂತಿಮ ಆಯ್ಕೆಯಾಗುತ್ತಾರೆ ಎನ್ನುವುದು ಕಾದು ನೋಡಬೇಕಿದೆ. ಮುಂದೆ ಓದಿ...

  ಆಶಿಕಾ-ಅದಿತಿ ನಾಯಕಿ?

  ಆಶಿಕಾ-ಅದಿತಿ ನಾಯಕಿ?

  ಗುರುದತ್ ಗಾಣಿಗ ನಿರ್ದೇಶನ ಹಾಗೂ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ ಹೊಸ ಚಿತ್ರದಲ್ಲಿ ಆಶಿಕಾ ರಂಗನಾಥ್ ಅಥವಾ ಅದಿತಿ ಪ್ರಭುದೇವ ನಟಿಸುವ ಸಾಧ್ಯತೆ ಇದೆ. ಈ ಇಬ್ಬರನ್ನು ಚಿತ್ರತಂಡ ಸಂಪರ್ಕ ಮಾಡಿದ್ದು, ಒಬ್ಬರು ಓಕೆ ಆಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  'ಅಂಬಿ ನಿಂಗ್ ವಯಸ್ಸಾಯ್ತೋ' ನಿರ್ದೇಶಕರ 2ನೇ ಸಿನಿಮಾ ಅನೌನ್ಸ್; ನಾಯಕ ಯಾರು?'ಅಂಬಿ ನಿಂಗ್ ವಯಸ್ಸಾಯ್ತೋ' ನಿರ್ದೇಶಕರ 2ನೇ ಸಿನಿಮಾ ಅನೌನ್ಸ್; ನಾಯಕ ಯಾರು?

  ಕನ್ನಡದ ನಟಿಯೇ ಬೇಕು

  ಕನ್ನಡದ ನಟಿಯೇ ಬೇಕು

  ಈ ಕುರಿತು ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ ನಿರ್ದೇಶಕ ಗುರುದತ್ ಗಾಣಿಗ ''ಈ ಚಿತ್ರದಲ್ಲಿ ನಾಯಕಿ ಪಾತ್ರ ಪ್ರಮುಖವಾಗಿರುತ್ತದೆ, ಆಗಷ್ಟೇ ಕಾಲೇಜು ಮುಗಿಸಿರುವ ಹುಡುಗಿ ಪಾತ್ರ. ನಾಯಕಿ ಅಭಿನಯಕ್ಕೆ ಹೆಚ್ಚು ಜಾಗವಿದೆ. ನೋಡಿದ ತಕ್ಷಣ ಇಷ್ಟ ಆಗುವ ಜೊತೆಗೆ ಪರ್ಫಾಮೆನ್ಸ್ ಮಾಡುವವರು ಬೇಕು. ಕನ್ನಡದ ಹುಡುಗಿಯೇ ಇರಬೇಕು ಎಂದು ಕಾಯುತ್ತಿದ್ದೇವೆ. ಆಶಿಕಾ ರಂಗನಾಥ್ ಮತ್ತು ಅದಿತಿ ಪ್ರಭುದೇವ ಅವರನ್ನು ಅಪ್ರೋಚ್ ಮಾಡಿದ್ದೇವೆ. ಇಬ್ಬರಲ್ಲಿ ಒಬ್ಬರು ಆಯ್ಕೆ ಮಾಡ್ತೇವೆ'' ಎಂದು ತಿಳಿಸಿದ್ದಾರೆ.

  ಪ್ರಮುಖ ಪಾತ್ರದಲ್ಲಿ ದೇವರಾಜ್ ನಟನೆ!

  ಪ್ರಮುಖ ಪಾತ್ರದಲ್ಲಿ ದೇವರಾಜ್ ನಟನೆ!

  ಇದೊಂದು ಥ್ರಿಲ್ಲರ್ ಜಾನರ್ ಸಿನಿಮಾವಾಗಿದ್ದು, ದೊಡ್ಡ ಬಜೆಟ್‌ನಲ್ಲಿ ತಯಾರಾಗಲಿದೆ. ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ. ಸದ್ಯಕ್ಕೆ ಪ್ರಿ-ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ. ವಿಶೇಷ ಅಂದ್ರೆ ಪ್ರಜ್ವಲ್ ಅವರ ತಂದೆ ಹಿರಿಯ ನಟ ದೇವರಾಜ್ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಲ್ಲಿ ನಟಿಸಲಿದ್ದಾರೆ. ಆದ್ರೆ, ಯಾವ ಪಾತ್ರ ಎನ್ನುವುದು ಗೌಪ್ಯವಾಗಿ ಉಳಿಸಲಾಗಿದೆ.

  ಪ್ರಜ್ವಲ್ ದೇವರಾಜ್ 'ಅಬ್ಬರ'ಕ್ಕೆ ಮೂವರು ನಾಯಕಿಯರುಪ್ರಜ್ವಲ್ ದೇವರಾಜ್ 'ಅಬ್ಬರ'ಕ್ಕೆ ಮೂವರು ನಾಯಕಿಯರು

  ಮಾತಾಡೋರು ಇದ್ರೇನೆ ಅವರು ಬದುಕಿದ್ದಾರೆ ಅನೋದು ಗೊತ್ತಾಗೋದು | Filmibeat Knnada
  ಸದ್ಯದ ಬ್ಯುಸಿ ನಟಿಯರು

  ಸದ್ಯದ ಬ್ಯುಸಿ ನಟಿಯರು

  ಆಶಿಕಾ ರಂಗನಾಥ್ ಅವರು ಶ್ರೀಮುರಳಿ ಜೊತೆ ಮದಗಜ, ಇಶಾನ್ ಜೊತೆ ರೆಮೋ, ಶರನ್ ಜೊತೆ ಅವತಾರ್ ಪುರುಷ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದಿತಿ ಪ್ರಭುದೇವ ತ್ರಿಬಲ್ ರೈಡಿಂಗ್, ಭಗವಾನ್ ಶ್ರೀ ಕೃಷ್ಣ ಪರಮಾತ್ಮ, ಗಜಾನನ ಗ್ಯಾಂಗ್, ಓಲ್ಡ್‌ಮಂಕ್, ದಿಲ್ಮಾರ್, ಆನ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಈ ಇಬ್ಬರು ಹೆಚ್ಚು ಬ್ಯುಸಿಯಿರುವ ನಾಯಕಿಯರು. ಇವರಿಬ್ಬರಲ್ಲಿ ಯಾರು ಪಕ್ಕಾ ಆಗ್ತಾರೆ ಎಂಬ ಸುದ್ದಿ ತಿಳಿಯಲು ಫಿಲ್ಮಿಬೀಟ್ ಫಾಲೋ ಮಾಡ್ತಿರಿ....

  English summary
  Kannada actress Ashika Ranganath and Aditi Prabhudeva shortlisted for Prajwal Devaraj’s next movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X