For Quick Alerts
  ALLOW NOTIFICATIONS  
  For Daily Alerts

  'ಕೋಟಿಗೊಬ್ಬ' ಸುದೀಪ್ ಜೊತೆ 'ಚುಟು ಚುಟು' ಬೆಡಗಿಯ ಮಸ್ತ್ ಡ್ಯಾನ್ಸ್

  |
  ಕೋಟಿಗೊಬ್ಬ3 ಚಿತ್ರದ ಮೋಷನ್ ಪೋಸ್ಟರ್ ನೋಡೋಕೆ ಅಭಿಮಾನಿಗಳ ಕಾತರ | SUDEEP | KOTIGOBBA 3 | POSTER | FILMIBEAT

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಕೋಟಿಗೊಬ್ಬ-3 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಟಾಕಿ ಭಾಗ ಮುಗಿಸಿರುವ ಚಿತ್ರತಂಡ ಸದ್ಯ ಹಾಡಿನ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಕೋಟಿಗೊಬ್ಬ-3 ಸೆಟ್ ನಿಂದ ಬಂದ ಅಭಿನಯ ಚಕ್ರವರ್ತಿಯ ಒಂದಿಷ್ಟು ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ಸಂಕ್ರಾಂತಿಗೆ ಬರ್ತಿವೆ ಸ್ಟಾರ್ ನಟರ ಚಿತ್ರಗಳ ಪೋಸ್ಟರ್: ಅಭಿಮಾನಿಗಳಲ್ಲಿ ಸಂಭ್ರಮಸಂಕ್ರಾಂತಿಗೆ ಬರ್ತಿವೆ ಸ್ಟಾರ್ ನಟರ ಚಿತ್ರಗಳ ಪೋಸ್ಟರ್: ಅಭಿಮಾನಿಗಳಲ್ಲಿ ಸಂಭ್ರಮ

  ಇದರ ಬೆನ್ನಲ್ಲೆ ಈಗ ಚಿತ್ರದಿಂದ ಮತ್ತೊಂದು ಭರ್ಜರಿ ಸುದ್ದಿ ಕೇಳಿ ಬರುತ್ತಿದೆ. ಹೌದು, ಕೋಟಿಗೊಬ್ಬ-3 ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಕ್ಯೂಟ್ ನಟಿ, ಚುಟು ಚುಟು ಖ್ಯಾತಿಯ ಆಶಿಕಾ ರಂಗನಾಥ್ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಆಶಿಕಾ ಚಿತ್ರದಲ್ಲಿ ನಾಯಕಿಯಾಗಿ ಬಣ್ಣಹಚ್ಚಿದ್ದಾರಾ ಎಂತ ಅಂದ್ಕೊಬೇಡಿ. ಆಶಿಕಾ ಚಿತ್ರದ ಒಂದು ಹಾಡಿನಲ್ಲಿ ಅಭಿನಯ ಚಕ್ರವರ್ತಿ ಜೊತೆ ಹೆಜ್ಜೆ ಹಾಕಿದ್ದಾರೆ.

   ಕಿಚ್ಚನ ಜೊತೆ ಆಶಿಕಾ ಡ್ಯಾನ್ಸ್

  ಕಿಚ್ಚನ ಜೊತೆ ಆಶಿಕಾ ಡ್ಯಾನ್ಸ್

  ನಟಿ ಆಶಿಕಾ ರಂಗನಾಥ್ ಕೋಟಿಗೊಬ್ಬ-3 ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿದ್ದಾರೆ. ಚಿತ್ರದ ಪ್ರಮುಖ ಹಾಡು ಇದಾಗಿದ್ದು ಆಶಿಕಾ ಸಖತ್ ಎಕ್ಸಾಯಿಟಿ ಆಗಿದ್ದಾರೆ. ಅಂದ್ಹಾಗೆ ಆಶಿಕಾ ಮೊದಲ ಬಾರಿಗೆ ಸುದೀಪ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳಿಗೂ ಇಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಹಾಡು ನೋಡಲು ಕಾತರರಾಗಿದ್ದಾರೆ.

  ಕಿಚ್ಚ ಸುದೀಪ್ ಗೆ ದುಬಾರಿ ಉಡುಗೊರೆ ನೀಡಿದ ನಟ ಸಲ್ಮಾನ್ ಖಾನ್ಕಿಚ್ಚ ಸುದೀಪ್ ಗೆ ದುಬಾರಿ ಉಡುಗೊರೆ ನೀಡಿದ ನಟ ಸಲ್ಮಾನ್ ಖಾನ್

  ರೆಡಿಯಾಗಿದೆ ಕಲರ್ ಫುಲ್ ಸೆಟ್

  ರೆಡಿಯಾಗಿದೆ ಕಲರ್ ಫುಲ್ ಸೆಟ್

  ಸುದೀಪ್ ಮತ್ತು ಆಶಿಕಾ ಡ್ಯಾನ್ಸ್ ಗೆ ಈಗಾಗಲೆ ಭರ್ಜರಿ ಸೆಟ್ ನಿರ್ಮಾಣವಾಗಿದೆಯಂತೆ. ಬೆಂಗಳೂರಿನ ಕಂಠೀರವ ಸ್ಟೂಡಿಯೋದಲ್ಲಿ ಕಲರ್ ಫುಲ್ ಹಾಡಿನ ಚಿತ್ರೀಕಣ ಚಿತ್ರೀಕರಣ ನಡೆಯಲಿದೆ. ನಾಲ್ಕು ದಿನಗಳ ಕಾಲ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆಯಂತೆ.

  ಸಂಕ್ರಾಂತಿಗೆ ಬರ್ತಿದೆ ಮೋಷನ್ ಪೋಸ್ಟರ್

  ಸಂಕ್ರಾಂತಿಗೆ ಬರ್ತಿದೆ ಮೋಷನ್ ಪೋಸ್ಟರ್

  ವಿಶೇಷ ಅಂದರೆ ಇಂದು ಸಂಜೆ ಬಹುನಿರೀಕ್ಷೆಯ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗುತ್ತಿದೆ. ಸಂಕ್ರಾಂತಿಯ ಪ್ರಯುಕ್ತ ಕಿಚ್ಚನ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್ ನೀಡುತ್ತಿದೆ ಚಿತ್ರತಂಡ. ಮೋಷನ್ ಪೋಸ್ಟರ್ ಹೇಗಿರಲಿದೆ ಎನ್ನುವ ಕಾತರ ಅಭಿಮಾನಿಗಳಲ್ಲಿ ಮನೆಮಾಡಿದೆ.

  ಸ್ನೇಹಕ್ಕೆ ಬೆಲೆ ಕೊಟ್ಟು, ನಿರ್ಧಾರ ಬದಲಿಸಿ, 17 ವರ್ಷಗಳ ಬಳಿಕ ಸುದೀಪ್ ಮಾಡಿದ್ದು 'ಈ' ಕೆಲಸ.!ಸ್ನೇಹಕ್ಕೆ ಬೆಲೆ ಕೊಟ್ಟು, ನಿರ್ಧಾರ ಬದಲಿಸಿ, 17 ವರ್ಷಗಳ ಬಳಿಕ ಸುದೀಪ್ ಮಾಡಿದ್ದು 'ಈ' ಕೆಲಸ.!

  ಶಿವಕಾರ್ತಿಕ್ ನಿರ್ದೇಶನದ ಸಿನಿಮಾ

  ಶಿವಕಾರ್ತಿಕ್ ನಿರ್ದೇಶನದ ಸಿನಿಮಾ

  ಕೋಟಿಗೊಬ್ಬ-3 ಶಿವಕಾರ್ತಿಕ್ ಸಾರಥ್ಯದಲ್ಲಿ ಮೂಡಿಬರುತ್ತಿದೆ, ಸೂರಪ್ಪ ಬಾಬು ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಸುದೀಪ್ ಗೆ ನಾಯಕಿಯಾಗಿ ಮಡೊನ್ನಾ ಸೆಬಾಸ್ಟಿಯನ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಪ್ರಮುಖ ಪಾತ್ರದಲ್ಲಿ ಶ್ರದ್ಧಾ ದಾಸ್, ಪಿ ರವಿಶಂಕರ್ ಅಫ್ತಾಬ್ ಶಿವದಾಸಾನಿ ಸೇರಿದಂತೆ ಸಾಕಷ್ಟು ಕಲಾವಿದರು ಕಾಣಿಸಿಕೊಂಡಿದ್ದಾರೆ.

  Read more about: ashika ranganath
  English summary
  Kannada Actress Ashika Ranganath dance with Sudeep in Kotigobba-3 film. This movie is directed by Shivakartik.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X