ಪ್ರಿಯಾ ಸ್ಟೈಲ್ ನಲ್ಲಿ ಕಿಸ್ ಕೊಟ್ಟ 'ಮುಗುಳುನಗೆ' ಸುಂದರಿ
ಪ್ರಿಯಾ ಪ್ರಕಾಶ್ ವಾರಿಯರ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟು ಮಾಡಿದ ಹುಡುಗಿ. ಒಂದು ಕಡೆ ಪ್ರಿಯಾ ಮಾಡಿರುವ ಸ್ಟೈಲ್ ನೋಡಿ ಹುಡುಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಇತ್ತ ನಟಿಯರಿಗೆ ಸಹ ಆ ಸ್ಟೈಲ್ ತುಂಬ ಇಷ್ಟ ಆಗಿದೆ.
ಕನ್ನಡದ ನಟಿ 'ಮುಗುಳು ನಗೆ' ಖ್ಯಾತಿಯ ಆಶಿಕಾ ರಂಗನಾಥ್ ಸಹ ಪ್ರಿಯಾ ಸ್ಟೈಲ್ ಮಾಡಿದ್ದಾರೆ. ಕಿಸ್ ಕೊಟ್ಟು ಡೈರೆಕ್ಟ್ ಆಗಿ ಹುಡುಗರ ಹೃದಯಕ್ಕೆ ಶೂಟ್ ಮಾಡಿದ್ದಾರೆ. ಇಷ್ಟು ದಿನ ಪ್ರಿಯಾ ಅವರನ್ನು ನೋಡಿದ್ದ ಹುಡುಗರು ಈಗ ಆಶಿಕಾ ರಂಗನಾಥ್ ಸ್ಟೈಲ್ ನೋಡಿ ಮನ ಸೋತಿದ್ದಾರೆ.
ಯಾವಾಗಲೂ ಚಂದ ಚಂದದ ಡಬ್ ಸ್ಮಾಶ್ ಗಳನ್ನು ಮಾಡುವ ಆಶಿಕಾ ರಂಗನಾಥ್ ಈಗ ಈ ಹೊಸ ವಿಡಿಯೋ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಆಶಿಕಾ ರಂಗನಾಥ್ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಅಂದಹಾಗೆ, 'ಮುಗುಳುನಗೆ' ನಂತರ ಆಶಿಕಾ ರಂಗನಾಥ್ 'ಮಾಸ್ ಲೀಡರ್' ಮತ್ತು 'ರಾಜು ಕನ್ನಡ ಮೀಡಿಯಂ' ಸಿನಿಮಾದಲ್ಲಿ ನಟಿಸಿದ್ದರು. ಈಗ ಶರಣ್ ಜೊತೆಗೆ ಆಶಿಕಾ 'ರಾಂಬೋ 2' ಸಿನಿಮಾ ಮಾಡುತ್ತಿದ್ದಾರೆ.
English summary
Kannada actress Ashika Ranganath did Priya Prakash Varrier style.
ashika ranganath priya prakash varrier malayalam cinema mollywood ಪ್ರಿಯಾ ಪ್ರಕಾಶ್ ವಾರಿಯರ್ ಮಲೆಯಾಳಂ ಮಾಲಿವುಡ್


Click it and Unblock the Notifications