Ashika Ranganath: ತಮಿಳು ಸಾಂಗು, ತುಂಡು ಫ್ರಾಕು, ಆಶಿಕಾ ಇನ್‌ಸ್ಟಾ ರೀಲ್ ವೈರಲ್: ಕಾಮೆಂಟ್ಸ್ ಮಾತ್ರ ಓದ್ಬೇಡಿ!

By ಫಿಲ್ಮಿಬೀಟ್ ಡೆಸ್ಕ್

ನಟಿ ಆಶಿಕಾ ರಂಗನಾಥ್ ಇತ್ತೀಚೆಗೆ ಸ್ನೇಹಿತರ ಜೊತೆ ಮಾಲ್ಡೀವ್ಸ್‌ಗೆ ಪ್ರವಾಸ ಹೋಗಿ ಬಂದಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. ಇನ್ನು ಮಾಲ್ಡೀವ್ಸ್‌ನಲ್ಲೇ ಒಂದು ತಮಿಳು ಹಾಡಿಗೆ ಇನ್‌ಸ್ಟಾ ರೀಲ್ ಮಾಡಿ ಶೇರ್ ಮಾಡಿದ್ದಾರೆ. ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಆದರೆ ಅದಕ್ಕೆ ನೆಟ್ಟಿಗರಿಂದ ಚಿತ್ರ ವಿಚಿತ್ರ ಕಾಮೆಂಟ್‌ಗಳು ಬರ್ತಿವೆ.

ಆಶಿಕಾ ನಟನೆಯ ಯಾವುದೇ ಸಿನಿಮಾ ಇತ್ತೀಚೆಗೆ ದೊಡ್ಡದಾಗಿ ಸದ್ದು ಮಾಡ್ತಿಲ್ಲ. ಟಾಲಿವುಡ್‌, ಕಾಲಿವುಡ್‌ಗೆ ಎಂಟ್ರಿ ಕೊಟ್ಟರೂ ಹೋದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ಬಂದರು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಚೆಲುವೆ ಹಾಟ್ ಹಾಟ್ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಸದ್ಯ ತಮಿಳಿನ 'ಜಿಮಿಕಿ ಪೊನ್ನು' ಹಾಡಿಗೆ ಬಿಂದಾಸ್ ಆಗಿ ಇನ್‌ಸ್ಟಾ ರೀಲ್ ಮಾಡಿ ಸಂಭ್ರಮಿಸಿದ್ದಾರೆ. ಅದಕ್ಕೆ ನೆಗೆಟೀವ್ ಕಾಮೆಂಟ್‌ಗಳೇ ಹೆಚ್ಚಾಗಿ ಬಂದಿದೆ.

Ashika Ranganath gets brutally trolled for new Instagram reel, netizens call her Rashmika Mandannas Sister

ಪಿಂಕ್ ಕಲರ್ ಶಾರ್ಟ್ ಫ್ರಾಕ್‌ನಲ್ಲಿ ಆಶಿಕಾ ಕುಣಿದಿದ್ದಾರೆ. ಆಕೆಯ ಡ್ರೆಸ್ ನೋಡಿ ಕೆಲವರು "ಯಾಕೆ ಮೇಡಂ ಬರ್ತಾ ಬರ್ತಾ ಬಟ್ಟೆ ಕಮ್ಮಿ ಆಗ್ತಿದೆ" ಎಂದಿದ್ದಾರೆ. ಮತ್ತೊಬ್ಬರು ಆಶಿಕಾ ಕೂಡ ರಶ್ಮಿಕಾ ಆಗಿ ಬದಲಾಗುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ತಮಿಳಿ ಹಾಡಿಗೆ ರೀಲ್ಸ್ ಮಾಡಿರೋದು ಕೆಲವರ ಬೇಸರಕ್ಕೆ ಕಾರಣವಾಗಿದೆ. ಕನ್ನಡದಲ್ಲಿ ಯಾವುದೇ ಹಾಡು ಸಿಗಲಿಲ್ವಾ ? ಎಂದು ಕೇಳಿದ್ದಾರೆ. ತೆಲುಗು, ತಮಿಳಿಗೆ ಹೋದಮೇಲೆ ಮೈಮಾಟ ಪ್ರದರ್ಶನ ಹೆಚ್ಚಾಗುತ್ತಿದೆ ಎನ್ನುವ ಕಾಮೆಂಟ್ ಕೂಡ ಬಂದಿದೆ.

ವಾರದ ಹಿಂದೆ ಆಶಿಕಾ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿದ್ದರು. ಸಹೋದರಿ ಅನುಷಾ, ಸ್ನೇಹಿತೆಯರಾದ ತೇಜಸ್ವಿನಿ ಹಾಗೂ ಸೊನಾಲಿ ಕರಿಯಪ್ಪ ಸಾಥ್ ನೀಡಿದ್ದರು. ನಾಲ್ಕೈದು ದಿನಗಳ ಕಾಲ ದ್ವೀಪ ರಾಷ್ಟ್ರದಲ್ಲಿ 4 ಜನ ರಜೆಯ ಮಜಾ ಅನುಭವಿಸಿದ್ದರು. ಅದ್ರಾನ್ ಪ್ರೆಸ್ಟೀಜ್ ವಡೂ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಆಶಿಕಾ ಸಖತ್ ಎಂಜಾಯ್ ಮಾಡಿದ್ದರು. ಸ್ಕೂಬಾ ಡೈವಿಂಗ್, ಸ್ವಿಮ್ಮಿಂಗ್ ಅಂತೆಲ್ಲಾ ಬಹಳ ಖುಷಿ ಪಟ್ಟಿದ್ದರು. ಆ ವಿಡಿಯೋಗಳನ್ನು ಕೂಡ ಹಂಚಿಕೊಂಡಿದ್ದಾರೆ. ಆದರೆ ಈ ಶೇರ್ ಮಾಡಿರುವ ಇನ್‌ಸ್ಟಾ ರೀಲ್ ವೀಡಿಯೋ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.

Ashika Ranganath gets brutally trolled for new Instagram reel, netizens call her Rashmika Mandannas Sister

'ಕ್ರೇಜಿ ಬಾಯ್' ಸಿನಿಮಾದಲ್ಲಿ ನಟಿಸಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಆಶಿಕಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರೂ ದೊಡ್ಡ ಬ್ರೇಕ್ ಮಾತ್ರ ಸಿಗಲಿಲ್ಲ. ಅಂದ, ಅಭಿನಯ ಎರಡರಲ್ಲೂ ಸೈ ಎನಿಸಿಕೊಂಡರೂ ಪ್ರಯೋಜನವಾಗಲಿಲ್ಲ. ಈಗ ಇಂತಹ ಪೋಸ್ಟ್‌ಗಳಿಂದ ಸುದ್ದಿಯಲ್ಲಿದ್ದಾರೆ. 'ಮುಗುಳು ನಗೆ', 'ರ್ಯಾಂಬೋ -2', 'ತಾಯಿಗೆ ತಕ್ಕ ಮಗ', 'ಮದಗಜ', 'ಅವತಾರ ಪುರುಷ', 'ರೇಮೋ' ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಕೋಟಿಗೊಬ್ಬ- 3' ಚಿತ್ರದ 'ಪಟಾಕಿ ಪೋರಿಯೋ' ಹಾಡು ಕೊಂಚಮಟ್ಟಿಗೆ ಸೌಂಡ್ ಮಾಡಿತ್ತು.

ಕೊನೆಯದಾಗಿ ತಮಿಳಿನ 'ಅಮಿಗೋಸ್' ಚಿತ್ರದಲ್ಲಿ ಆಶಿಕಾ ರಂಗನಾಥ್ ಮಿಂಚಿದ್ದರು. ಫೆಬ್ರವರಿ 10ಕ್ಕೆ ರಿಲೀಸ್ ಆಗಿದ್ದ ಸಿನಿಮಾ ಸದ್ದು ಮಾಡಲೇಯಿಲ್ಲ. ಚಿತ್ರದ ಸಾಂಗ್‌ವೊಂದರಲ್ಲಿ ಹಾಟ್ ಆಗಿ ದರ್ಶನ ಕೊಟ್ಟಿದ್ದರು. ಅದಕ್ಕೂ ಮುನ್ನ 'ಪತ್ತಾತು ಅರಸನ್' ಎನ್ನುವ ತಮಿಳು ಚಿತ್ರದಲ್ಲೂ ನಟಿಸಿದ್ದರು. ಮುಂದಿ ತೆಲುಗು, ತಮಿಳಿನಲ್ಲಿ ಚೆಲುವೆಗೆ ಅವಕಾಶಗಳು ಸಿಗುತ್ತಾ ಕಾದು ನೋಡಬೇಕು. ಸದ್ಯ ಎರಡು ಸಿನಿಮಾಗಳು ಆಶಿಕಾ ರಂಗನಾಥ್ ಕೈಯಲ್ಲಿದೆ. ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್‌ 'O2' ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಸಿಂಪಲ್ ಸುನಿ ನಿರ್ದೇಶನದ 'ಗತವೈಭವ' ಚಿತ್ರದಲ್ಲಿ ದುಷ್ಯಂತ್ ಜೋಡಿಯಾಗಿ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ.

More from Filmibeat

English summary
Ashika Ranganath gets brutally trolled for new Instagram reel, netizens call her Rashmika Mandanna's Sister. Ashika Maldives vacation Photos and Videos Goes Viral. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X