For Quick Alerts
  ALLOW NOTIFICATIONS  
  For Daily Alerts

  ಡಿಗ್ರಿ ಪಡೆದು ಮುಗುಳು ನಕ್ಕ ನಟಿ ಆಶಿಕಾ ರಂಗನಾಥ್

  By Naveen
  |
  ಮುಗುಳುನಗೆ ಬೆಡಗಿ ಏಜ್ ಇನ್ನು ಸೀಕ್ರೆಟ್ ಆಗಿ ಉಳಿದಿಲ್ಲ ! | Filmibeat Kannada

  ಕನ್ನಡದ ನಟಿ ಆಶಿಕಾ ರಂಗನಾಥ್ ಸದ್ಯ ಒಂದರ ನಂತರ ಒಂದರಂತೆ ಒಳ್ಳೆ ಒಳ್ಳೆಯ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾಗಳ ಜೊತೆಗೆ ಈಗ ಆಶಿಕಾ ರಂಗನಾಥ್ ಸಂತಸಕ್ಕೆ ಮತ್ತೊಂದು ಕಾರಣ ಸಿಕ್ಕಿದೆ. ಆಶಿಕಾ ಇದೀಗ ಬರಿ ನಟಿ ಮಾತ್ರ ಅಲ್ಲ ಪದವೀದರೆ ಕೂಡ ಆಗಿದ್ದಾರೆ.

  ಬೆಂಗಳೂರಿನ ಮಲೇಶ್ವರಂ ನಲ್ಲಿರುವ ಎಂಇಎಸ್ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ ಆಶಿಕಾ ಈಗ ತಮ್ಮ ಡಿಗ್ರಿ ಪಡೆದಿದ್ದಾರೆ. ಸಿನಿಮಾದ ಜೊತೆಗೆ ಈಗ ಓದಿನಲ್ಲಿಯೂ ಮುಂದೆ ಬಂದಿದ್ದಾರೆ. ಅಂದಹಾಗೆ, ಪದವಿ ಪಡೆದ ಸಂತದಲ್ಲಿರುವ ಆಶಿಕಾ ತಮ್ಮ ಖುಷಿಯನ್ನು 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಹಂಚಿಕೊಂಡಿದ್ದಾರೆ.

  ''ತುಂಬ ಖುಷಿ ಆಗುತ್ತಿದೆ. ಸಿನಿಮಾ ಮತ್ತು ಓದು ಎರಡು ಇರುವುದರಿಂದ ಟೈಂ ಹೇಗೆ ಹೋಯ್ತು ಅಂತನೇ ಗೊತ್ತಾಗಲಿಲ್ಲ. ಆದರೆ ಎಕ್ಸಾಂ ಮತ್ತು ಇಂಟರ್ನಲ್ಸ್ ಇರುವಾಗ ಎರಡನ್ನು ಮ್ಯಾನೆಜ್ ಮಾಡುವುದು ಕಷ್ಟ ಅನಿಸಿತು. ಒಳ್ಳೆಯ ಸಿನಿಮಾಗಳು ಕೈ ನಲ್ಲಿ ಇದೆ. ಮುಂದೆ ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ. ಜೊತೆಗೆ ಎಂ ಬಿ ಎ ಮಾಡುವ ಪ್ಲಾನ್ ಕೂಡ ಇದೆ ನೋಡೋಣ.'' ಎಂದರು ಆಶಿಕಾ ರಂಗನಾಥ್.

  ದ್ವಿತೀಯ ಪಿ ಯು ಸಿ ಮುಗಿದ ನಂತರ 'ಕ್ರೇಜಿ ಬಾಯ್' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದ ಆಶಿಕಾ ರಂಗನಾಥ್ ಈಗ ಬೇಡಿಕೆಯ ನಟಿ ಆಗಿದ್ದಾರೆ. 'ಮುಗುಳುನಗೆ', 'ರಾಜು ಕನ್ನಡ ಮೀಡಿಯಂ' ಚಿತ್ರಗಳ ನಂತರ ಈಗ 'ರಾಂಬೋ 2' ಸಿನಿಮಾದಲ್ಲಿ ಆಶಿಕಾ ಬಿಜಿ ಇದ್ದಾರೆ.

  English summary
  Kannada actress 'Mugulunage' fame Ashika Ranganath graduated with bachelor of commerce.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X