For Quick Alerts
  ALLOW NOTIFICATIONS  
  For Daily Alerts

  ಕಾಶ್ಮೀರಿ ಕುವರಿಯಾಗಿ Ramp walk ಮಾಡಿದ ಆಶಿಕಾ ರಂಗನಾಥ್

  |

  ನಟಿ ಆಶಿಕಾ ರಂಗನಾಥ್ ನೋಡಿದರೆ ಅಭಿಮಾನಿಗಳ ಹೃದಯ ಚುಟು ಚುಟು ಎನ್ನುತ್ತದೆ. ಈ ಮುದ್ದು ಚಲುವೆ ಈಗ ಕಾಶ್ಮೀರಿ ಕುವರಿಯಾಗಿದ್ದಾರೆ.

  ಆಶಿಕಾ ರಂಗನಾಥ್ ಮೊದಲ ಬಾರಿಗೆ ಬೆಂಗಳೂರು ಫ್ಯಾಶನ್ ವೀಕ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, Ramp walk ಮಾಡಿದ್ದಾರೆ. ಕಾಶ್ಮೀರಿ ಉಡುಗೆಯಲ್ಲಿ ಆಶಿಕಾ ಶೋ ಸ್ಟಾಪರ್ ಆಗಿ ಮಿಂಚಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಆಶಿಕಾಗೆ ತುಂಬ ಖುಷಿ ನೀಡಿದೆಯಂತೆ.

  ನನ್ನ ಮೊದಲ ಸಿನಿಮಾ : ನಟನೆ ಬರಲ್ಲ ಎಂದುಕೊಂಡೆ ಇಂಡಸ್ಟ್ರಿಗೆ ಬಂದಿದ್ದರು ಆಶಿಕಾ

  Ramp walk ಮಾಡಿದ ಫೋಟೋವನ್ನು ಆಶಿಕಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾಶ್ಮೀರಿ ಉಡುಗೆಯಲ್ಲಿ ಮತ್ತಷ್ಟು ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸೀರೆ ಮತ್ತು ಆಭರಣ ಅವರ ಅಂದವನ್ನು ಹೆಚ್ಚು ಮಾಡಿದೆ.

  ಈ ಹಿಂದೆ ಕಾಲೇಜಿನಲ್ಲಿ ಓದುವಾಗ ಬೆಂಗಳೂರು ಟೈಮ್ಸ್ ಫ್ರೆಶ್ ಫೇಸ್ ನಲ್ಲಿ ಆಶಿಕಾ ಭಾಗಿಯಾಗಿದ್ದರು. ಇದು ಅವರ ಸಿನಿಮಾ ಪಯಣಕ್ಕೆ ಪ್ರಮುಖ ಕಾರಣ ಆಗಿತ್ತು.

  ಸದ್ಯ, 'ತಾಯಿಗೆ ತಕ್ಕ ಮಗ' ಸಿನಿಮಾದ ಬಳಿಕ ಆಶಿಕಾ 'ಅವತಾರ್ ಪುರುಷ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  Kannada actress Ashika Ranganath has done ramp walk for bangalore fashion week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X