'ಮದಗಜ' ಚಿತ್ರದ ನಾಯಕಿ ಆಶಿಕಾ ರಂಗನಾಥ್?
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷೆಯ ಮದಗಜ ಚಿತ್ರ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಚಿತ್ರದ ನಾಯಕಿ ಯಾರೆಂದು ಗುರುತಿಸಿ ಎಂದು ತಿರುಗಿ ನಿಂತಿರುವ ನಾಯಕಿಯ ಪೋಸ್ಟರ್ ಅನ್ನು ರಿಲೀಸ್ ಮಾಡಿತ್ತು ಸಿನಿಮಾತಂಡ. ಈ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಜೊತೆಗೆ ನಾಯಕಿಯಾರೆಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
ಸಾಕಷ್ಟು ಮಂದಿ ಮದಗಜ ಚಿತ್ರದ ನಾಯಕಿ ಯಾರೆಂದು ಊಹಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅನೇಕರು ಆಶಿಕಾ ರಂಗನಾಥ್ ಮತ್ತು ಶಾನ್ವಿ ಶ್ರೀವಾತ್ಸವ್ ಹೆಸರನ್ನು ಹೇಳುತ್ತಿದ್ದಾರೆ. ಆದರೀಗ ನಾಯಕಿ ಯಾರೆಂದು ರಿವೀಲ್ ಆಗಿದೆ.
ಹೌದು, ಚಿತ್ರತಂಡ ರಿಲೀಸ್ ಮಾಡಿರುವ ಪೋಸ್ಟರ್ ನಲ್ಲಿರುವ ನಾಯಕಿ ಆಶಿಕಾ ರಂಗನಾಥ್ ಎಂದು ಹೇಳಲಾಗುತ್ತಿದೆ. ಅಂದ್ಮೇಲೆ ಆಶಿಕಾ ಮೊದಲ ಬಾರಿಗೆ ಶ್ರೀಮುರಳಿ ಜೊತೆ ಅಭಿನಯಿಸುತ್ತಿದ್ದಾರೆ. 'ಮುಗುಳುನಗೆ' ಚಿತ್ರದ ನಂತರ ಆಶಿಕಾಗೆ ಅಭಿನಯಿಸುತ್ತಿರುವ ಮತ್ತೊಂದು ದೊಡ್ಡ ಸಿನಿಮಾ ಇದಾಗಿದೆ.

ಪ್ರೇಮಿಗಳ ದಿನದಂದು ಅಂದರೆ ನಾಳೆ ಚಿತ್ರದ ನಾಯಕಿಯಾರೆಂದು ರಿವೀಲ್ ಮಾಡುವುದಾಗಿ ಚಿತ್ರತಂಡ ಅನೌನ್ಸ್ ಮಾಡಿತ್ತು. ಆದರೆ ಆಗಲೆ ನಾಯಕಿ ಯಾರು ಎಂದು ರಿವೀಲ್ ಆಗಿದೆ. ಪೋಸ್ಟರ್ ನೋಡುತ್ತಿದ್ದರೆ ಚಿತ್ರದಲ್ಲಿ ಆಶಿಕಾ ಪಕ್ಕಾ ಹಳ್ಳಿಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಗೊತ್ತಾಗುತ್ತಿದೆ. ಈ ಬಗ್ಗೆ ಆಶಿಕಾ ಆಗಲಿ ಅಥವಾ ಚಿತ್ರತಂಡ ಆಗಲಿ ಯಾವುದೆ ಮಾಹಿತಿ ಬಹಿರಂಗ ಪಡಿಸಿಲ್ಲ.
ಸದ್ಯ ಭಾರಿ ಕುತೂಹಲ ಮೂಡಿಸಿರುವ ಮದಗಜ ಇದೆ ತಿಂಗಳು ಮುಹೂರ್ತ ಮಾಡಿಕೊಳ್ಳುತ್ತಿದೆ. ಫೆಬ್ರವರಿ 21 ಶಿವರಾತ್ರಿಯ ದಿನ ಚಿತ್ರದ ಮುಹೂರ್ತ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಮದಗಜ ನಿರ್ದೇಶಕ ಮಹೇಶ್ ಕುಮಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಉಳಿದಂತೆ ಚಿತ್ರದಲ್ಲಿ ಯಾರೆಲ್ಲ ಕಲಾವಿದರು ಇದ್ದಾರೆ, ತಂತ್ರಜ್ಞರು ಯಾರು? ಎನ್ನುವ ಬಗ್ಗೆ ಮಾಹಿತಿ ಹೊರಬೀಳಬೇಕಿದೆ.


Click it and Unblock the Notifications











