ಡಾಕ್ಟರ್ ಆಗಿದ್ದಾರೆ ನಟಿ ಆಶಿಕಾ ರಂಗನಾಥ್
ನಟಿ ಆಶಿಕಾ ರಂಗನಾಥ್ ಈಗ ಡಾಕ್ಟರ್ ಆಗ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಇವರು ಸಿನಿಮಾ ಬಿಟ್ಟು ಡಾಕ್ಟರ್ ಆಗುತ್ತಿಲ್ಲ. ಸಿನಿಮಾದಲ್ಲಿಯೇ ಡಾಕ್ಟರ್ ಆಗುತ್ತಿದ್ದಾರೆ.
ಆಶಿಕಾ ರಂಗನಾಥ್ ಕೈ ತುಂಬ ಆಫರ್ ಗಳು ಇವೆ. ಈಗ ಅವರು ಮತ್ತೊಂದು ಸಿನಿಮಾಗೆ ಆಯ್ಕೆ ಆಗಿದ್ದಾರೆ. ಪಿ ಸಿ ಶೇಖರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಆಶಿಕಾ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಡಾಕ್ಟರ್ ಪಾತ್ರ ನಿರ್ವಹಿಸುತ್ತಿದ್ದಾರೆ.
ಪ್ರಜ್ವಲ್ ದೇವರಾಜ್ ಈ ಚಿತ್ರದ ನಾಯಕನಾಗಿದ್ದಾರೆ. 'ಅರ್ಜುನ' ಬಳಿಕ ಮತ್ತೆ ಪ್ರಜ್ವಲ್ ಹಾಗೂ ಪಿ ಸಿ ಶೇಖರ್ ಒಂದಾಗಿದ್ದಾರೆ. ಈಗ ಈ ಟೀಮ್ ಗೆ ಆಶಿಕಾ ಸೇರಿಕೊಂಡಿದ್ದಾರೆ.

ಆಶಿಕಾ ಈವರೆಗೆ ನಿರ್ವಹಿಸದ ಪಾತ್ರವನ್ನು ಈ ಬಾರಿ ಮಾಡುತ್ತಿದ್ದಾರೆ. ಅವರ ಪಾತ್ರ ತುಂಬ ಸೈಲೆಂಟ್ ಆಗಿ ಇರುತ್ತದೆಯಂತೆ. ಸದ್ಯದಲ್ಲಿಯೇ ಆಶಿಕಾ ಲುಕ್ ಟೆಸ್ಟ್ ನಡೆಯಲಿದೆ.
ಪ್ರತಿ ಸಿನಿಮಾದಲ್ಲಿಯೂ ಬೇರೆ ಬೇರೆ ಜಾನರ್ ಪ್ರಯತ್ನ ಮಾಡುವ ಪಿ ಸಿ ಶೇಖರ್ ಈ ಬಾರಿ ಗ್ಯಾಂಗ್ ಸ್ಟರ್ ಚಿತ್ರವನ್ನು ಮಾಡುತ್ತಿದ್ದಾರೆ. ಮಚ್ಚು ಗಿಚ್ಚು ಎಲ್ಲ ಬಿಟ್ಟು ಬೇರೆ ರೀತಿಯಲ್ಲಿ ಗ್ಯಾಂಗ್ ಸ್ಟರ್ ಸಿನಿಮಾವನ್ನು ಇಲ್ಲಿ ತೋರಿಸಲಿದ್ದಾರಂತೆ.
ಚಂದನ್ ಗೌಡ ತಮ್ಮ 3C ಬ್ಯಾನರ್ ನಲ್ಲಿ ಈ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ. ಜುಲೈ ಎರಡನೇ ಅಥವಾ ಮೂರನೇ ವಾರದಲ್ಲಿ ಸಿನಿಮಾದ ಚಿತ್ರೀಕರಣ ಶುರು ಆಗಲಿದೆ.


Click it and Unblock the Notifications











