"ಸಂಭಾವನೆಯಲ್ಲಿ ತಾರತಮ್ಯ ಇದೆ, ನನಗೆ ಇಲ್ಲಿರುವ ನೇಮು, ಫೇಮು ಬೇರೆ ಕಡೆ ಇದ್ದಿದ್ರೆ ಕಥೆ ಬೇರೆನೆ ಇರ್ತಿತ್ತು"

ಪಟಾಕಿ ಪೋರಿ ಆಶಿಕಾ ರಂಗನಾಥ್ ಇತ್ತೀಚೆಗೆ ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸಲು ಆರಂಭಿಸಿದ್ದಾರೆ. ನಾಗಾರ್ಜುನಾ ಬಳಿಕ ಚಿರಂಜೀವಿ ಜೊತೆ ನಟಿಸೋ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಆಶಿಕಾ ನಟಿಸಿದ ಕನ್ನಡದ 'O2' ಸಿನಿಮಾ ಬಿಡುಗಡೆ ಆಗಿತ್ತು. ಕಳೆದ ವಾರವಷ್ಟೆ ಸಿನಿಮಾ ಓಟಿಟಿಗೆ ಬಂದು ಒಳ್ಳೆ ಪ್ರತಿಕ್ರಿಯೆ ಪಡೆದಿತ್ತು. ಆಕೆ ನಟನೆ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿತ್ತು.

ತುಮಕೂರಿನಲ್ಲಿ ಹುಟ್ಟಿ ಬೆಳೆದ ಆಶಿಕಾ, ಬೆಂಗಳೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿದವರು. ಮಿಸ್ ಫ್ರೆಶ್ ಫೇಸ್ 2014 ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದರು. ಅಲ್ಲಿಂಗ್ ಮುಂದೆ ಸಿನಿಮಾ 'ಕ್ರೇಜಿ ಬಾಯ್' ಚಿತ್ರದ ಅವಕಾಶ ಸಿಕ್ಕಿತ್ತು. ಬಳಿಕ ನಿಧಾನವಾಗಿ ಒಂದೊಂದೇ ಸಿನಿಮಾದಲ್ಲಿ ನಟಿಸುತ್ತಾ ಹೋದರು. ಕಿಚ್ಚ ಸುದೀಪ್ ಜೊತೆ 'ಕೋಟಿಗೊಬ್ಬ-3' ಚಿತ್ರದಲ್ಲಿ 'ಪಟಾಕಿ ಪೋರಿಯೋ' ಹಾಡಿಗೆ ಬಿಂದಾಸ್ ಹೆಜ್ಜೆ ಹಾಕಿದ್ದರು.

Ashika Ranganath opens up on her remuneration and pay parity in film industry

ಅಂದ, ಅಭಿನಯ ಎರಡೂ ಚೆಲುವೆಯ ಸ್ವಂತವಾಗಿದ್ದರೂ ದೊಡ್ಡ ಅವಕಾಶಗಳು ಮಾತ್ರ ಸಿಗಲಿಲ್ಲ. ಎರಡು ವರ್ಷಗಳ ಹಿಂದೆ ಒಂದು ತಮಿಳು ಚಿತ್ರದಲ್ಲಿ ನಟಿಸಿದ್ದ ಆಶಿಕಾ ಬಳಿಕ ತೆಲುಗು ಚಿತ್ರಕ್ಕೂ ಬಣ್ಣ ಹಚ್ಚಿದರು. 'ಅಮಿಗೋಸ್' ಚಿತ್ರದಲ್ಲಿ ಕಲ್ಯಾಣ್‌ ರಾಮ್‌ಗೆ ಜೊತೆಯಾಗಿದ್ದಾರೆ. ಇನ್ನು 'ನಾ ಸಾಮಿ ರಂಗಾ' ಚಿತ್ರದಲ್ಲಿ ಕಿಂಗ್ ನಾಗಾರ್ಜುನಾಗೆ ಜೊತೆಯಾದರು. ಆಶಿಕಾ ತಮ್ಮ ಸಂಭಾವನೆ, ತೆಲುಗು ಹಾಗೂ ಕನ್ನಡ ಚಿತ್ರರಂಗಕ್ಕೂ ಇರುವ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ.

ಕೆಲ ದಿನಗಳ ಹಿಂದೆ ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನಲ್ ಪಾಡ್‌ಕಾಸ್ಟ್‌ನಲ್ಲಿ ಆಶಿಕಾ ಭಾಗಿ ಆಗಿದ್ದರು. ಆಕೆ ತಮ್ಮ ಸಂಭಾವನೆ ಬಗ್ಗೆ ಮಾತನಾಡಿದ್ದ ವೀಡಿಯೋ ಈಗ ವೈರಲ್ ಆಗುತ್ತಿದೆ. "ಚಿತ್ರರಂಗಕ್ಕೂ ಬರುವ ಮುನ್ನ ನಾನು ಡ್ಯಾನ್ಸ್ ಶೋ ಮಾಡ್ತಿದ್ದೆ. ಕಾಲೇಜು ದಿನಗಳಲ್ಲಿ ಪಾಕೆಟ್ ಮನಿಗಾಗಿ ಅದನ್ನ ಮಾಡ್ತಿದ್ದೆ. ಆಗ ನನಗೆ ಸಿಕ್ಕ ಮೊದಲ ಸಂಭಾವನೆ 500 ರೂಪಾಯಿ. ಆಗ ಎಸ್‌ಎಸ್‌ಎಲ್‌ಸಿ ಮುಗಿಸಿ, ಫಸ್ಟ್ ಪಿಯುಸಿ ಓದುತ್ತಿದ್ದೆ"

Ashika Ranganath opens up on her remuneration and pay parity in film industry

"ಮೊದಲ ಚಿತ್ರ 'ಕ್ರೇಜಿಬಾಯ್'ಗೆ ಒಳ್ಳೆ ಸಂಭಾವನೆಯೇ ಸಿಕ್ಕಿತ್ತು. ಬಳಿಕ ಏಯ್ ಯಾರು ಅಷ್ಟು ಕೇಳ್ತಾರೆ? ಅವರೇ ಅಷ್ಟಕ್ಕೇ ಮಾಡ್ತಾರೆ? ಇವರೇ ಇಷ್ಟಕ್ಕೆ ಮಾಡ್ತಾರೆ? ಎನ್ನುವ ಮಾತುಗಳು ಇಂಡಸ್ಟ್ರಿಯಲ್ಲಿ ಮಾತನಾಡಿದ್ದು ಕೇಳಿ ಅಚ್ಚರಿಯಾಯಿತು. ಯಾಕೆ ಹೀಗೆ ಮಾಡ್ತಾರೆ? ಹೀಗೆ ಹೇಳ್ತಾರೆ? ಅಂತ. ಆದರ ನಿಧಾನವಾಗಿ ಕರಿಯರ್‌ನಲ್ಲಿ ಮೇಲೇರಿದಂತೆ ಸಂಭಾವನೆ ತಕ್ಕಮಟ್ಟಿಗೆ ಹೆಚ್ಚಾಯಿತು"

"ನಿಜ ಹೇಳಬೇಕು ಅಂದ್ರೆ ಕನ್ನಡದಲ್ಲಿ ನಾಯಕಿಯರಿಗೆ ತುಂಬಾ ಕಮ್ಮಿ ಸಂಭಾವನೆ ಇದೆ. ತುಂಬಾ ಜನ ನಾಯಕಿಯರು ಈ ಬಗ್ಗೆ ಆರೋಪ ಮಾಡುತ್ತಾರೆ. ಬೇರೆ ಇಂಡಸ್ಟ್ರಿಯಲ್ಲಿ ನಾಯಕಿಯರಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ, ಅವರ ಸಂಭಾವನೆ, ಅವರ ಸ್ಟೈಲಿಂಗ್ ಎಲ್ಲದರಲ್ಲೂ ಬಹಳ ವ್ಯತ್ಯಾಸವಿದೆ. ಜನ ಕನ್ನಡ ಚಿತ್ರರಂಗಕ್ಕೂ ತೆಲುಗಿಗೂ ಏನು ವ್ಯತ್ಯಾಸ ಎಂದು ಕೇಳುತ್ತಾರೆ. ನಿಜ ಹೇಳಬೇಕು ಅಂದ್ರೆ ಅಲ್ಲಿ ಒಳ್ಳೆ ಸಂಭಾವನೆ ಕೊಡುತ್ತಾರೆ. ಕಾರಣ ಅವರ ಸಿನಿಮಾಗಳು ದೊಡ್ಡದಾಗಿರುತ್ತವೆ, ಹೆಚ್ಚು ಜನರನ್ನು ತಲುಪುತ್ತವೆ" ಎಂದಿದ್ದಾರೆ.

ಕನ್ನಡ ಚಿತ್ರಕ್ಕೆ ತಾವು ಪಡೆಯುತ್ತಿರುವ ಸಂಭಾವನೆ ಬಗ್ಗೆಯೂ ಆಶಿಕಾ ಮಾತನಾಡಿದ್ದಾರೆ. ಇತ್ತೀಚೆಗೆ ಚಿತ್ರವೊಂದಕ್ಕೆ 30ರಿಂದ 35 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದೇನೆ ಎನ್ನುವ ಅರ್ಥದಲ್ಲಿ ಪ್ರತಿಕ್ರಿಯಿಸಿದ್ದಾರೆ. ನನಗೆ ಕನ್ನಡದಲ್ಲಿ ಸಿಕ್ಕಿರುವ ಜನಪ್ರಿಯತೆ ಬೇರೆ ಇಂಡಸ್ಟ್ರಿಯಲ್ಲಿ ಆಗಿದ್ದರೆ ಇನ್ನು ಹೆಚ್ಚು ಸಂಭಾವನೆ ಸಿಗುತ್ತಿತ್ತು ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಆದರೆ ತೆಲುಗಿಗೆ ಹೋಲಿಸಿದರೆ ಕನ್ನಡ ಚಿತ್ರರಂಗ ಚಿಕ್ಕದು. ಹಾಗಾಗಿ ಈ ಬಗ್ಗೆ ಮಾತನಾಡುವುದು ಸರಿ ಅನ್ನಿಸಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

"ಕನ್ನಡದಲ್ಲಿ ಒಳ್ಳೆ ಸಿನಿಮಾಗಳು ಬರ್ತಿವೆ. ಆದರೆ ಹೆಚ್ಚು ಜನ ನೋಡುತ್ತಿಲ್ಲ, ಕನ್ನಡ ಪ್ರೇಕ್ಷಕರು ಬಹಳ ಸ್ಮಾರ್ಟ್, ಬಹಳ ಚೂಸಿ ಇಂತಹ ಮಾತುಗಳನ್ನೇ ಬಹಳ ಕೇಳುತ್ತೇವೆ. ಫಿಲ್ಮ್‌ ಮೇಕರ್ಸ್ ಈ ಬಗ್ಗೆ ಹೆಚ್ಚು ಗಮನಹರಿಸಬೇಕು. ಆದರೆ ನಾಯಕ ನಟರಿಗಿಂತ ನಟಿಯರಿಗೆ ತುಂಬಾ ಕಮ್ಮಿ ಸಂಭಾವನೆ ಇದೆ. ಹಾಗಾಗಿ ಬಹಳ ವ್ಯತ್ಯಾಸ ಇದೆ ಅನ್ನಿಸುತ್ತದೆ" ಎಂದು ಆಶಿಕಾ ವಿವರಿಸಿದ್ದಾರೆ.

More from Filmibeat

English summary
Ashika Ranganath talks on actresses remuneration differences in kannada compared to other industries;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X