For Quick Alerts
  ALLOW NOTIFICATIONS  
  For Daily Alerts

  ಅಪ್ಪು ಓಕೆ ಮಾಡಿದ್ದ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿ ಕೃತಜ್ಞತೆ ತಿಳಿಸಿದ ಆಶಿಕಾ ರಂಗನಾಥ್

  |

  ಕಳೆದ ವರ್ಷ ಮದಗಜ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಆಶಿಕಾ ರಂಗನಾಥ್ ಈ ಬಾರಿಯ ಸೈಮಾದಲ್ಲಿ ಅದೇ ಚಿತ್ರದಲ್ಲಿನ ತನ್ನ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡು ಮಿಂಚಿದ್ದರು. ಸದ್ಯ ತಮಿಳು ನಟ ಸಿದ್ಧಾರ್ಥ್ ಚಿತ್ರವೊಂದಕ್ಕೆ ನಾಯಕಿಯಾಗಿ ಆಯ್ಕೆಯಾಗಿ ಇತ್ತೀಚಿಗಷ್ಟೆ ಚಿತ್ರದ ಮುಹೂರ್ತವನ್ನೂ ಮುಗಿಸಿರುವ ನಾಯಕಿ ಆಶಿಕಾ ಈಗ ಬಹು ಬೇಡಿಕೆ ಹೊಂದಿರುವ ನಟಿಯರಲ್ಲಿ ಓರ್ವಳಾಗಿದ್ದಾರೆ.

  ಇನ್ನು ಜೇಮ್ಸ್ ಹೊರತುಪಡಿಸಿ ಆಶಿಕಾ ರಂಗನಾಥ್ ಅಭಿನಯಿಸಿರುವ ಈ ವರ್ಷದ ಕನ್ನಡ ಚಿತ್ರಗಳಾವುವು ಬಾಕ್ಸ್ ಆಫೀಸ್‌ನಲ್ಲಿ ಗೆಲ್ಲಲಿಲ್ಲ. ಗರುಡ ಚಿತ್ರದಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದ ಆಶಿಕಾ ರಂಗನಾಥ್ ಕಾಣೆಯಾದವರ ಬಗ್ಗೆ ಪ್ರಕಟಣೆ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೀಗೆ ಸಣ್ಣ ಸಿನಿಮಾಗಳಲ್ಲಿ ನಟಿಸಿರುವ ಆಶಿಕಾ ರಂಗನಾಥ್ ಕನ್ನಡದ ಸ್ಟಾರ್ ನಟರಿಗೆ ನಾಯಕಿಯಾಗಿ ಅಭಿನಯಿಸುವ ಅವಕಾಶವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ.

  ಸದ್ಯ ಕೈನಲ್ಲಿರುವ ಮೂರ್ನಾಲ್ಕು ಚಿತ್ರಗಳ ಪೈಕಿ 'O2' ( ಓ ಟು ) ಎಂಬ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಈ ವಿಷಯವನ್ನು ತಿಳಿಸಿರುವ ಆಶಿಕಾ ರಂಗನಾಥ್ ಇದು ದಿವಂಗತ ಪುನೀತ್ ರಾಜ್‌ಕುಮಾರ್ ಸಮ್ಮತಿ ಸೂಚಿಸಿದ್ದ ಸಿನಿಮಾ ಎಂಬುದನ್ನು ಬಿಚ್ಚಿಟ್ಟಿದ್ದಾರೆ.

  ಪಿಆರ್‌ಕೆ ಪ್ರೊಡಕ್ಷನ್ಸ್ ಸಿನಿಮಾ O2

  ಪಿಆರ್‌ಕೆ ಪ್ರೊಡಕ್ಷನ್ಸ್ ಸಿನಿಮಾ O2

  ಇನ್ನು ಈ O2 ಚಿತ್ರಕ್ಕೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪಿಆರ್‌ಕೆ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್ ಸಂಸ್ಥೆಯ ಎಂಟನೇ ಚಿತ್ರ ಇದಾಗಿದ್ದು, ಈ ಚಿತ್ರಕ್ಕೆ ಇಬ್ಬರು ನಿರ್ದೇಶಕರಿದ್ದಾರೆ. ರಾಘವ್ ನಾಯಕ್ ಹಾಗೂ ಪ್ರಶಾಂತ್ ರಾಜ್ ಇಬ್ಬರು ನಿರ್ದೇಶನದ ಈ ಚಿತ್ರದಲ್ಲಿ ತನ್ನನ್ನು ನಂಬಿ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.

  ಪುನೀತ್ ರಾಜ್‌ಕುಮಾರ್ ಆರಿಸಿದ್ದ ಕತೆ

  ಪುನೀತ್ ರಾಜ್‌ಕುಮಾರ್ ಆರಿಸಿದ್ದ ಕತೆ

  ಇನ್ನು ಇದೇ ಪೋಸ್ಟ್‌ನಲ್ಲಿ ಈ ಚಿತ್ರದ ಕತೆಯನ್ನು ನೆಚ್ಚಿಕೊಂಡ ಅಪ್ಪು ಅವರೇ ಈ ಕತೆಯನ್ನು ಆರಿಸಿದ್ದರು ಎಂಬುದನ್ನು ಆಶಿಕಾ ರಂಗನಾಥ್ ತಿಳಿಸಿದ್ದಾರೆ. ಹಾಗೂ ಪ್ರೀತಿ ಮತ್ತು ಬೆಂಬಲ ಕೊಟ್ಟ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೂ ಸಹ ಆಶಿಕಾ ರಂಗನಾಥ್ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಪ್ಪು ಇಂದು ಬದುಕಿದ್ದರೆ ಅವರ ದ್ವಿತ್ವ ಚಿತ್ರದ ಚಿತ್ರೀಕರಣ ಒಂದು ಹಂತಕ್ಕೆ ಮುಗಿದಿರುತ್ತಿತ್ತು ಹಾಗೂ ಆ ಚಿತ್ರದಲ್ಲಿ ಆಶಿಕಾ ರಂಗನಾಥ್ ಸಹ ನಟಿಸಿರುತ್ತಿದ್ದರು. ಆದರೆ ವಿಧಿಯಾಟಕ್ಕೆ ಆಶಿಕಾ ರಂಗನಾಥ್ ಅಪ್ಪು ಜತೆ ನಟಿಸುವ ಅವಕಾಶ ವಂಚಿತರಾಗಿದ್ದಾರೆ.

  ಚಿತ್ರದಲ್ಲಿ ಆಶಿಕಾ ವೈದ್ಯೆ

  ಚಿತ್ರದಲ್ಲಿ ಆಶಿಕಾ ವೈದ್ಯೆ

  ಇನ್ನು ಈ ಚಿತ್ರದಲ್ಲಿ ತಾನು ವೈದ್ಯೆ ಶ್ರದ್ಧಾ ಪಾತ್ರವನ್ನು ನಿರ್ವಹಿಸುತ್ತಿರುವುದಾಗಿಯೂ ನಟಿ ಆಶಿಕಾ ರಂಗನಾಥ್ ಬರೆದುಕೊಂಡಿದ್ದಾರೆ. ಇನ್ನು ಪುನೀತ್ ರಾಜ್‌ಕುಮಾರ್ ಜತೆಗಿನ ದ್ವಿತ್ವ ಚಿತ್ರದಲ್ಲಿಯೂ ಸಹ ಆಶಿಕಾ ರಂಗನಾಥ್ ವೈದ್ಯೆ ಪಾತ್ರದಲ್ಲಿ ನಟಿಸಬೇಕಿತ್ತು.

  English summary
  Ashika Ranganath remembered that Puneeth Rajkumar approves her next movie script. Read on
  Wednesday, September 21, 2022, 17:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X