For Quick Alerts
  ALLOW NOTIFICATIONS  
  For Daily Alerts

  ತಮಿಳು ಚಿತ್ರರಂಗಕ್ಕೆ ಹಾರಿದ ಆಶಿಕಾ ರಂಗನಾಥ್; ತನ್ನ ನೆಚ್ಚಿನ ಹೀರೊ ಜತೆ ಪ್ರಥಮ ಚಿತ್ರ ಘೋಷಣೆ!

  |

  2016ರಲ್ಲಿ ಬಿಡುಗಡೆಯಾಗಿದ್ದ ಕ್ರೇಜಿ ಬಾಯ್ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಆಶಿಕಾ ರಂಗನಾಥ್ ನಂತರ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರದಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದರು. ಆದರೆ ಈ ಎರಡೂ ಸಿನಿಮಾಗಳಲ್ಲಿಯೂ ಸಿಗದ ಐಡೆಂಟಿಟಿಯನ್ನು ಆಶಿಕಾಗೆ ತಂದುಕೊಟ್ಟದ್ದು ಗಣೇಶ್ ಅಭಿನಯದ ಮುಗುಳುನಗೆ ಚಿತ್ರ.

  ಮುಗುಳುನಗೆ ಚಿತ್ರದ ಮೂವರು ನಾಯಕಿಯರಲ್ಲಿ ಓರ್ವಳಾಗಿ ಕಾಣಿಸಿಕೊಂಡಿದ್ದರೂ ಸಹ ಆಶಿಕಾ ರಂಗನಾಥ್ ಅಭಿಮಾನಿಗಳ ಮನಸ್ಸಿನಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಚಿತ್ರದಲ್ಲಿ ತನ್ನ ಪಾತ್ರಕ್ಕೆ ಕಡಿಮೆ ಅವಕಾಶವಿದ್ದರೂ ಸಹ ಅಷ್ಟರಲ್ಲಿಯೇ ಆಶಿಕಾ ರಂಗನಾಥ್ ಪಡ್ಡೆ ಹುಡುಗರ ಕ್ರಶ್ ಆಗಿಬಿಟ್ಟಿದ್ದರು.

  ಹೀಗೆ ಮುಗುಳುನಗೆ ಚಿತ್ರದ ಮೂಲಕ ಫೇಮ್ ಗಿಟ್ಟಿಸಿಕೊಂಡ ಆಶಿಕಾ ರಂಗನಾಥ್ ನಂತರ ರ‍್ಯಾಂಬೋ 2 ಚಿತ್ರದ ಮೂಲಕ ಚೊಚ್ಚಲ ಶತದಿನೋತ್ಸವದ ಅನುಭವವನ್ನು ಪಡೆದರು. ನಂತರ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದ ಆಶಿಕಾ ರಂಗನಾಥ್ ಇತ್ತೀಚೆಗಷ್ಟೇ ಜೇಮ್ಸ್ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು ಹಾಗೂ ಕಳೆದ ವರ್ಷ ಬಿಡುಗಡೆಯಾಗಿದ್ದ ಮದಗಜ ಚಿತ್ರಕ್ಕಾಗಿ ಸೈಮಾ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಕೂಡ ಗಿಟ್ಟಿಸಿಕೊಂಡರು. ಹೀಗೆ ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟಿ ಆಶಿಕಾ ರಂಗನಾಥ್ ಇದೀಗ ತಮಿಳು ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ. ತಮ್ಮ ನೆಚ್ಚಿನ ನಟನ ಜತೆಗೆ ತಮಿಳು ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿರುವುದರ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ ಆಶಿಕಾ ರಂಗನಾಥ್.

  ಸಿದ್ಧಾರ್ಥ್ ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿ

  ಸಿದ್ಧಾರ್ಥ್ ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿ

  ತಮಿಳು ಹಾಗೂ ತೆಲುಗಿನ ಹಲವಾರು ಜನಪ್ರಿಯ ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿ ಸೈ ಎನ್ನಿಸಿಕೊಂಡಿರುವ ನಟ ಸಿದ್ಧಾರ್ಥ್ ಅಭಿನಯದ ಮುಂದಿನ ತಮಿಳು ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಇನ್ನೂ ಸಹ ಶೀರ್ಷಿಕೆಯನ್ನು ಇಟ್ಟಿಲ್ಲ. ಪ್ರೊಡಕ್ಷನ್ ನಂಬರ್ 1 ಎಂಬ ತಾತ್ಕಾಲಿಕ ಶೀರ್ಷಿಕೆ ಅಡಿಯಲ್ಲಿ ಇಂದು ( ಸೆಪ್ಟೆಂಬರ್ 15 ) ಚೆನ್ನೈನಲ್ಲಿ ಚಿತ್ರದ ಮುಹೂರ್ತ ಸಮಾರಂಭವನ್ನು ನಡೆಸಲಾಗಿದ್ದು, ಈ ಕಾರ್ಯಕ್ರಮದ ಫೋಟೊಗಳನ್ನು ಆಶಿಕಾ ರಂಗನಾಥ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

   ಸಿದ್ಧಾರ್ಥ್ ನನ್ನ ನೆಚ್ಚಿನ ಹೀರೋಗಳಲ್ಲಿ ಓರ್ವರು ಎಂದ ಆಶಿಕಾ

  ಸಿದ್ಧಾರ್ಥ್ ನನ್ನ ನೆಚ್ಚಿನ ಹೀರೋಗಳಲ್ಲಿ ಓರ್ವರು ಎಂದ ಆಶಿಕಾ

  ಹೀಗೆ ಮುಹೂರ್ತದ ಚಿತ್ರಗಳನ್ನು ಹಂಚಿಕೊಂಡು ತನ್ನ ಮೊದಲ ತಮಿಳು ಸಿನಿಮಾದ ಕುರಿತು ಮಾಹಿತಿ ನೀಡಿರುವ ಆಶಿಕಾ ರಂಗನಾಥ್ ನೆಚ್ಚಿನ ನಟರಲ್ಲಿ ಓರ್ವರಾದ ಸಿದ್ಧಾರ್ಥ್ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ಅವಕಾಶ ಸಿಗುತ್ತಿರುವುದು ಖುಷಿಯ ವಿಚಾರ ಎಂದಿದ್ದಾರೆ. ಸಿದ್ಧಾರ್ಥ್ ಅಭಿನಯದ 'ಬೊಮ್ಮರಿಲ್ಲು' ಹಾಗೂ 'ನುವ್ವೊಸ್ತಾನಂಟೆ ನೇನೊದ್ದಂಟಾನಾ' ಚಿತ್ರಗಳನ್ನು ಎಷ್ಟು ಬಾರಿ ನೋಡಿದ್ದೇನೆ ಎಂಬುದೇ ಲೆಕ್ಕವಿಲ್ಲ ಎಂದು ಬರೆದುಕೊಂಡಿರುವ ಆಶಿಕಾ ರಂಗನಾಥ್ ಸಿದ್ಧಾರ್ಥ್ ಜತೆ ನಟಿಸುತ್ತಿರುವುದು ತುಂಬಾ ವಿಶೇಷ ಎಂದಿದ್ದಾರೆ.

  ಅಥರ್ವನಾ ಚಿತ್ರದ ಟೈಟಲ್?

  ಅಥರ್ವನಾ ಚಿತ್ರದ ಟೈಟಲ್?

  ಇನ್ನು ಈ ಚಿತ್ರಕ್ಕೆ ಯಾವುದೇ ರೀತಿಯ ಟೈಟಲ್ ಇಡಲಾಗಿಲ್ಲ. 'ಕಾಲದಿಲ್ ಸಂದಿಪೊಮ್' ಚಿತ್ರವನ್ನು ನಿರ್ದೇಶಿಸಿದ್ದ ಎನ್ ರಾಜಶೇಖರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ರಾಟ್ಸಸನ್ ಖ್ಯಾತಿಯ ಗಿಬ್ರಾನ್ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿದ್ದಾರೆ. ಒಟ್ಟಿನಲ್ಲಿ ಒಂದೊಳ್ಳೆ ತಂಡದ ಜತೆ ಆಶಿಕಾ ರಂಗನಾಥ್ ತಮಿಳು ಚಿತ್ರರಂಗವನ್ನು ಪ್ರವೇಶಿಸುತ್ತಿದ್ದಾರೆ. ಹಾಗೂ ಈ ಚಿತ್ರಕ್ಕೆ ಅಥರ್ವ ಎಂಬ ಶೀರ್ಷಿಕೆಯನ್ನು ಇಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

  English summary
  Kannada Actress Ashika Ranganath to romance actor Siddharth in her debut Tamil film. Read on
  Thursday, September 15, 2022, 20:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X