ಡಾರ್ಲಿಂಗ್ ಕೃಷ್ಣ-ಪಿಸಿ ಶೇಖರ್ ಚಿತ್ರಕ್ಕೆ 'ಮದಗಜ' ಸುಂದರಿ ನಾಯಕಿ

'ಲವ್ ಮಾಕ್ಟೈಲ್' ಸಿನಿಮಾ ಯಶಸ್ಸಿನ ನಂತರ ಡಾರ್ಲಿಂಗ್ ಕೃಷ್ಣ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಪಿಸಿ ಶೇಖರ್ ಜೊತೆ ಹೊಸ ಚಿತ್ರವೊಂದನ್ನು ಆರಂಭಿಸಿದ್ದಾರೆ. ಈ ಕುರಿತು ಈ ಹಿಂದೆಯೇ ಫಿಲ್ಮಿಬೀಟ್ ಕನ್ನಡ ವರದಿ ಮಾಡಿತ್ತು. ಇದೀಗ ಈ ಚಿತ್ರದ ಬಗ್ಗೆ ಹೊಸದೊಂದು ಅಪ್‌ಡೇಟ್ ಸಿಕ್ಕಿದೆ. ಡಾರ್ಲಿಂಗ್ ಕೃಷ್ಣ ಜೊತೆ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎನ್ನುವ ವಿಚಾರ ಹೊರಬಿದ್ದಿದೆ.

ಸದ್ಯದ ಮಾಹಿತಿ ಪ್ರಕಾರ ನಟಿ ಆಶಿಕಾ ರಂಗನಾಥ್ ಈ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ, ಚಿತ್ರತಂಡ ಅಧಿಕೃತ ಮಾಡಿಲ್ಲ. ಇನ್ನು ಹೆಸರಿಡದ ಈ ಚಿತ್ರದ ನಾಯಕಿ ಪಾತ್ರಕ್ಕೆ ಆಶಿಕಾ ಸೂಕ್ತ ಎಂದು ನಿರ್ಧರಿಸಿದ ನಿರ್ದೇಶಕರು ಕನ್ನಡದ ಹುಡುಗಿಯನ್ನೇ ಹೀರೋಯಿನ್ ಆಗಿ ನೇಮಕ ಮಾಡಿಕೊಂಡಿದ್ದಾರೆ.

ಸಿನಿಮಾದಲ್ಲಿ ಆಶಿಕಾ ರಂಗನಾಥ್ ಎಚ್‌ಆರ್ ವಿಭಾಗದಲ್ಲಿ ಕೆಲಸ ಮಾಡಿದ್ರೆ, ಡಾರ್ಲಿಂಗ್ ಕೃಷ್ಣ ಸಾಫ್ಟ್‌ವೇರ್ ಇಂಜಿನಿಯರ್. ಇದು ಕಾರ್ಪೋರೇಟ್ ಹಿನ್ನೆಲೆಯಲ್ಲಿ ನಡೆಯುವ ರೊಮ್ಯಾಂಟಿಕ್ ಲವ್ ಸ್ಟೋರಿಯಾಗಿದೆ ಎಂದು ತಿಳಿದು ಬಂದಿದೆ. ಮುಂದೆ ಓದಿ...

ಕಾರ್ಪೋರೇಟ್ ಲವ್ ಸ್ಟೋರಿ

ಕಾರ್ಪೋರೇಟ್ ಲವ್ ಸ್ಟೋರಿ

ಈ ಹಿಂದೆ ಫಿಲ್ಮಿಬೀಟ್ ಜೊತೆ ಪಿಸಿ ಶೇಖರ್ ಮಾತನಾಡಿದ ಸಂದರ್ಭದಲ್ಲಿ ''ರೋಮಿಯೋ ಸಿನಿಮಾ ಆದ್ಮೇಲೆ ಅಂತಹದೊಂದು ಜಾನರ್‌ನಲ್ಲಿ ಮಾಡುತ್ತಿರುವ ಚಿತ್ರ ಇದು. ಲವ್, ಕಾಮಿಡಿ, ಭಾವನೆ, ಫ್ಯಾಮಿಲಿ ಅಂಶಗಳೊಂದಿಗೆ ಮೂಡಿ ಬರಲಿದೆ. ಈಗಿನ ಕಾರ್ಪೋರೇಟ್ ವಾತಾವರಣದ ಕುಟುಂಬ ಹಿನ್ನೆಲೆ ಹೊಂದಿರುವ ಕಥಾನಾಯಕ. ಕೆಲವು ಹಳ್ಳಿಯಲ್ಲಿ ನಡೆಯುವ ದೃಶ್ಯಗಳು ಇದೆ. ದೊಡ್ಡ ತಂತ್ರಜ್ಞರು, ನಾಯಕಿ ಈ ಚಿತ್ರಕ್ಕೆ ಬರುವ ಸಾಧ್ಯತೆ ಇದೆ. ಬೆಂಗಳೂರು, ಮಂಡ್ಯ ಚಿತ್ರೀಕರಣ ಅಂತ ಅಂದುಕೊಂಡಿದ್ದೀವಿ. ಇನ್ನುಳಿದ ಮಾಹಿತಿಯನ್ನು ಮುಂದಿನ ದಿನದಲ್ಲಿ ಹೇಳುತ್ತೇವೆ'' ಎಂದಿದ್ದರು.

ಅಕ್ಟೋಬರ್‌ನಲ್ಲಿ ಶೂಟಿಂಗ್

ಅಕ್ಟೋಬರ್‌ನಲ್ಲಿ ಶೂಟಿಂಗ್

ಶಿವರಾಜ್ ಕುಮಾರ್ ನಟಿಸಿದ್ದ 'ಕಡ್ಡಿಪುಡಿ' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಚಂದ್ರು, ಡಾರ್ಲಿಂಗ್ ಕೃಷ್ಣ ಮತ್ತು ಪಿಸಿ ಶೇಖರ್ ಕಾಂಬಿನೇಷನ್ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಇದು ಶೇಖರ್ ಅವರ ಹತ್ತನೇ ಚಿತ್ರ ಆಗಲಿದೆ. ಸದ್ಯಕ್ಕೆ ಪೂರ್ವ ತಯಾರಿ ನಡೆದಿದೆ. ಚಿತ್ರಕ್ಕೆ ಟೈಟಲ್ ಅಂತಿಮ ಮಾಡಿಲ್ಲ. ಅಕ್ಟೋಬರ್ ವೇಳೆ ಚಿತ್ರೀಕರಣ ಆರಂಭಿಸುವ ಲೆಕ್ಕಾಚಾರದಲ್ಲಿದ್ದಾರೆ.

ಮದಗಜ ಸುಂದರಿಯ ಮುಂದಿನ ಚಿತ್ರಗಳು

ಮದಗಜ ಸುಂದರಿಯ ಮುಂದಿನ ಚಿತ್ರಗಳು

ಆಶಿಕಾ ರಂಗನಾಥ್ ಸಹ ಹಲವು ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿದ್ದಾರೆ. 'ಗರುಡ' ಸಿನಿಮಾ ಬಿಡುಗಡೆಯಾಗಬೇಕಿದೆ. ಕೋಟಿಗೊಬ್ಬ 3 ಚಿತ್ರದ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಶರಣ್ ಜೊತೆ ಅವತಾರ್ ಪುರುಷ ಸಿನಿಮಾ ಮಾಡಿದ್ದಾರೆ. ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರೆಮೋ ಚಿತ್ರದಲ್ಲೂ ನಾಯಕಿಯಾಗಿದ್ದಾರೆ. ಶ್ರೀಮುರಳಿ ನಟನೆಯ ಮದಗಜ ಚಿತ್ರದಲ್ಲೂ ಆಶಿಕಾ ನಾಯಕಿ. ತಮಿಳಿನಲ್ಲಿ ಅಥರ್ವ ಮುರಳಿ ನಟನೆಯ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಓ2 ಎನ್ನುವ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

ಡಾರ್ಲಿಂಗ್ ಕೃಷ್ಣರ ಮುಂದಿನ ಚಿತ್ರಗಳು

ಡಾರ್ಲಿಂಗ್ ಕೃಷ್ಣರ ಮುಂದಿನ ಚಿತ್ರಗಳು

ಲವ್ ಮಾಕ್ಟೈಲ್ ಹಿಟ್ ಆದ್ಮೇಲೆ ಡಾರ್ಲಿಂಗ್ ಕೃಷ್ಣ ಸಖತ್ ಬ್ಯುಸಿಯಾದರು. ತಮ್ಮದೇ ನಿರ್ದೇಶನದಲ್ಲಿ ಲವ್ ಮಾಕ್ಟೈಲ್ 2 ಮಾಡುತ್ತಿದ್ದಾರೆ. ಈ ನಡುವೆ ಹಲವು ಪ್ರಾಜೆಕ್ಟ್‌ಗಳಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಲೋಕಲ್ ಟ್ರೈನ್, ಶುಗರ್ ಫ್ಯಾಕ್ಟರಿ, ವರ್ಜಿನ್, ರಚಿತಾ ರಾಮ್ ಜೊತೆ ಲವ್ ಮಿ ಔರ್ ಹೇಟ್ ಮೀ, ಶ್ರೀಕೃಷ್ಣಜಿ-ಮೇಲ್.ಕಾಮ್ ಅಂತಹ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಮಾನ್ವಿತಾ ಜೊತೆ 9ನೇ ಸಿನಿಮಾ

ಮಾನ್ವಿತಾ ಜೊತೆ 9ನೇ ಸಿನಿಮಾ

ಇದಕ್ಕೂ ಮುಂಚೆ ಪಿಸಿ ಶೇಖರ್ ನಟಿ ಮಾನ್ವಿತಾ ಕಾಮತ್ ಜೊತೆ ಸಿನಿಮಾವೊಂದು ಮಾಡ್ತಿದ್ದಾರೆ. ಈ ಚಿತ್ರ ಪೂರ್ವ ತಯಾರಿ ಎಲ್ಲವೂ ನಡೆದಿದ್ದು, ಶೂಟಿಂಗ್ ಸಹ ಆರಂಭಿಸುತ್ತಿದ್ದಾರೆ. ಇದು ಪಿಸಿ ಶೇಖರ್ ಅವರ 9ನೇ ಚಿತ್ರ.

More from Filmibeat

English summary
Kannada Actress Ashika Ranganath to romance Darling Krishna in PC Shekar's next movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X