»   » ಬಾಲಿವುಡ್‌ನ ಚಿರಯೌವನಿಗ ನಾಯಕಅಶೋಕ್‌ ಕುಮಾರ್‌ ನಿಧನ

ಬಾಲಿವುಡ್‌ನ ಚಿರಯೌವನಿಗ ನಾಯಕಅಶೋಕ್‌ ಕುಮಾರ್‌ ನಿಧನ

Subscribe to Filmibeat Kannada

ಮುಂಬಯಿ : ಏಳು ದಶಕಕ್ಕೂ ಹೆಚ್ಚು ಕಾಲ ತಮ್ಮ ಅಪ್ರತಿಮ ಹಾಗೂ ಅನನ್ಯ ಪ್ರತಿಭೆಯಿಂದ ಬಾಲಿವುಡ್‌ನಲ್ಲಿ ವಿಶಿಷ್ಠ ಸ್ಥಾನ ಗಳಿಸಿದ್ದ ಹಾಗೂ ಭಾರತೀಯ ಚಿತ್ರರಂಗದ ಅವಿಭಾಜ್ಯ ಅಂಗ ಎನಿಸಿದ್ದ ಮೇರು ಕಲಾವಿದ ಅಶೋಕ್‌ ಕುಮಾರ್‌ ಸೋಮವಾರ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು .

ದೀರ್ಘಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರು ಈಶಾನ್ಯ ಮುಂಬಯಿಯ ಚೆಂಬೂರ್‌ನ ತಮ್ಮ ನಿವಾಸದಲ್ಲಿ ಸೋಮವಾರ 2.30 ರ ಸುಮಾರಿಗೆ ನಿಧನರಾದರು. ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಪುತ್ರಿ ಪ್ರೀತಿ ಗಂಗೂಲಿ ಅವರನ್ನು ಅಶೋಕ್‌ ಕುಮಾರ್‌ ಅಗಲಿದ್ದಾರೆ. ಪ್ರೀತಿ ಗಂಗೂಲಿ ಕೂಡಾ ಚಿತ್ರನಟಿ.


ಸಹೋದರರಾದ ಕಿಶೋರ್‌ಕುಮಾರ್‌ ಹಾಗೂ ಅನೂಪ್‌ ಕುಮಾರ್‌ ಅವರೊಂದಿಗೆ ಹಿಂದಿ ಚಿತ್ರರಂಗ ಪ್ರವೇಶಿಸಿದ್ದ ಅಶೋಕ್‌ಕುಮಾರ್‌ ಸಾಧಿಸಿದ ಉತ್ತುಂಗಗಳು ಅನೇಕ. ಅಶೋಕ್‌ಕುಮಾರ್‌ ಅವರ ಸಿನಿಮಾ ಸಾಧನೆಗೆ 1989 ರಲ್ಲಿ ಭಾರತೀಯ ಚಿತ್ರರಂಗದ ಸರ್ವೋತ್ಕೃಷ್ಟ ಗೌರವ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ದೊರೆತಿತ್ತು . ಎರಡು ಬಾರಿ ಫಿಲಂ ಫೇರ್‌ ಪ್ರಶಸ್ತಿ ಪಡೆದಿದ್ದ ಅವರು 1969 ರಲ್ಲಿ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು.

(ಪಿಟಿಐ)

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada