For Quick Alerts
  ALLOW NOTIFICATIONS  
  For Daily Alerts

  -ಆ-ರಂ-ತಿ-ಯಾಂ-ದಿ-ಗಿ-ನ ಪರಿ-ಣ-ಯ ಕೈ ಕೊಟ್ಟ ನಂತ-ರ-ದ ವರ್ಷ-ಗ-ಳ-ಲ್ಲಿ ಹೆಚ್ಚುಕಡಿಮೆ ಮಾಜಿಯಾಗಿಯೇ ಬಿಟ್ಟಿದ್ದ ಅಶೋಕ್‌ ಮತ್ತೆ ಅಖಾಡಕ್ಕೆ ಇಳಿದದ್ದು ಕಾರ್ಮಿಕ ನಾಯಕನ ವೇಷದಲ್ಲಿ. ಆ ಹೊತ್ತಿಗೆ ಸಿನಿಮಾ ಕಾರ್ಮಿಕರಿಗೆ ಒಬ್ಬ ನಾಯಕನ ಅಗತ್ಯವೂ ಇತ್ತು . ಅಶೋಕ್‌ ಅದೃಷ್ಟಕ್ಕೆ ಅವರು ಕಾರ್ಮಿಕರ ಒಕ್ಕೂಟದ ನಾಯಕನಾದ ಸಂದರ್ಭದಲ್ಲೇ ಪ್ರೀಮಿಯರ್‌ ಸ್ಟುಡಿಯೋದಲ್ಲಿ ‘ಟಿಪ್ಪುಸುಲ್ತಾನ್‌’ ಸೀರಿಯಲ್‌ ಶೂಟಿಂಗ್‌ಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿತು. ನೊಂದ ಕಾರ್ಮಿಕರ ಧ್ವನಿಯಾಗಿ ಅಶೋಕ್‌ ಹೊರಹೊಮ್ಮಿದರು. ಅವರಿಗೆ ಪರಿಹಾರ ಕೊಡಿಸಿದರು. ನೊಂದವರ ನಾಯಕನಾಗುವುದೇ ನನ್ನ ಜೀವನದ ಪರಮೋದ್ದೇಶವಾಗಿತ್ತು ಎಂದರು. ಅದಕ್ಕೆ ಸ್ಪೂರ್ತಿಯಾಗಿದ್ದು ‘ಕ್ರಾಂತಿಯೋಗಿ ಬಸವಣ್ಣ’ ಚಿತ್ರದಲ್ಲಿ ಮಾಡಿದ ಬಸವಣ್ಣನ ಪಾತ್ರ ಎಂದರು. ಅನಂತರ ಅಶೋಕ್‌ ತಿರುಗಿ ನೋಡಲಿಲ್ಲ. ಕಾರ್ಮಿಕರಿಗೊಂದು ಕ್ಷೇಮನಿಧಿ, ಕನಿಷ್ಟ ವೇತನ ಇತ್ಯಾದಿ ಸ್ಕೀಮ್‌ಗಳನ್ನು ಜಾರಿಗೆ ತಂದರು. ರಾಜ್ಯದ ನಾಲ್ಕು ಸಾವಿರ ಸಿನಿಮಾ ಕಾರ್ಮಿಕರು ಅಶೋಕ್‌ ಆಜ್ಞಾನುವರ್ತಿಗಳಾದರು. ಕಾರ್ಮಿಕರ ಹಿತಾಸಕ್ತಿ ಕಾಪಾಡುವ ರಭಸದಲ್ಲಿ ಅಶೋಕ್‌ ನಿರ್ಮಾಪಕರ ಪಾಲಿಗೆ ಮುಳ್ಳಾದದ್ದೂ ಉಂಟು. ನಿರ್ಮಾಪಕರನ್ನು ಬಂಡವಾಳ ಶಾಹಿಗಳೆಂದು ಟೀಕಿಸುತ್ತಿದ್ದ ಅಶೋಕ್‌ ಸ್ವತಃ ನಿರ್ಮಾಪಕರಾಗಿ ನಮ್ಮೂರ ಹುಡ್ಗ ಚಿತ್ರ ನಿರ್ಮಿಸಿದ್ದೂ ಇನೊಂದು ವ್ಯಂಗ್ಯ. ಆ ಚಿತ್ರ ಫ್ಲಾಪ್‌ ಆಯಿತು. ಅದಕ್ಕೂ ಮುಂಚೆ ನಾಯಕತ್ವದ ರುಚಿ ಕಂಡಿದ್ದ ಅಶೋಕ್‌ ‘ಕನ್ನಡ ದೇಶ’ ಪಕ್ಷವನ್ನು ಕಟ್ಟಿ ತವರೂರು ಸಾತನೂರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೂ ಉಂಟು. ಅಲ್ಲಿ ಇಡುಗಂಟು ಕಳಕೊಂಡ ಮೇಲೆ ಮತ್ತೆ ಒಕ್ಕೂಟವೇ ಅವರನ್ನು ಕಾಪಾಡಿತು. ರಾಜಕಾರಣಿಯ ವೇಷ ತೊಡುವ ಹೊತ್ತಲ್ಲಿ , ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ -ನೀಡಿದ್ದ ಅಶೋಕ್‌ ಸದ್ದಿಲ್ಲದೆ, ಯಾರ ಅಪ್ಪಣೆಯನ್ನೂ ಕೇಳದೇ ಮತ್ತದೇ ಪೀಠದಲ್ಲಿ ಕುಳಿತರು.ಆಧುನಿಕ ಬಸವಣ್ಣನ ಕಾಯಕ ಮತ್ತದೇ ಪೀಠದಲ್ಲಿ ಮುಂದುವರಿಯುತ್ತಿದ್ದಂತೆ ಅಶೋಕ್‌ ಪತ್ನಿ ಕಲ್ಪನಾ ಚೀಟಿ ಹಗರಣದಲ್ಲಿ ಸಿಲುಕಿ ಪೊಲೀಸರ ಅತಿಥಿಯಾದರು. ಆಗ ಅಶೋಕ್‌ ತನಗೂ ಆಕೆಗೂ ಯಾವುದೇ ಸಂಬಂಧವಿಲ್ಲ ಎಂದು ಜಾರಿಕೊಂಡರು. ಸದ್ಯಕ್ಕೆ ಕಲ್ಪನಾ ಸೆರೆಮನೆಯಲ್ಲಿದ್ದಾರೆ. ಅಶೋಕ್‌ ಅಧಿಕಾರದ ಅರಮನೆಯಲ್ಲಿದ್ದಾರೆ. ಒಕ್ಕೂಟದ ಕಾರನ್ನು ಅವರೇ ಬಳಸಿಕೊಳ್ಳುತ್ತಿದ್ದಾರೆ. ರಾಜ್‌ ಗೈರು ಹಾಜರಿಯಿಂದ ಭಾವ ಶೂನ್ಯತೆ ಆವರಿಸಿರುವ ಕಾರಣ ಕಾರ್ಮಿಕರಿಗೆ ಕೆಲಸ ಮಾಡುವುದಕ್ಕೆ ಆಗ್ತಾ ಇಲ್ಲ ಎಂದು ಅವರ ಪರವಾಗಿ ತಾವೇ ಹೇಳಿಕೆ ನೀಡುತ್ತಾರೆ.ಕಾಯಕವೇ ಕೈಲಾಸ ಎಂದಿದ್ದ ಬಸವಣ್ಣ. ಆದರೆ ಆಧುನಿಕ ಬಸವಣ್ಣ ಭಾವನೆಯ ವಿಲಾಸದಲ್ಲಿ ಕಾಯಕ್ಕೆ ತಿಲಾಂಜಲಿ ಕೊಟ್ಟಿದ್ದಾನೆ ಅನ್ನುತ್ತಾರೆ ಅಶೋಕ್‌ ವಿರೋಧಿಗಳು.

  By Staff
  |

  -ಆ-ರಂ-ತಿ-ಯಾಂ-ದಿ-ಗಿ-ನ ಪರಿ-ಣ-ಯ ಕೈ ಕೊಟ್ಟ ನಂತ-ರ-ದ ವರ್ಷ-ಗ-ಳ-ಲ್ಲಿ ಹೆಚ್ಚುಕಡಿಮೆ ಮಾಜಿಯಾಗಿಯೇ ಬಿಟ್ಟಿದ್ದ ಅಶೋಕ್‌ ಮತ್ತೆ ಅಖಾಡಕ್ಕೆ ಇಳಿದದ್ದು ಕಾರ್ಮಿಕ ನಾಯಕನ ವೇಷದಲ್ಲಿ. ಆ ಹೊತ್ತಿಗೆ ಸಿನಿಮಾ ಕಾರ್ಮಿಕರಿಗೆ ಒಬ್ಬ ನಾಯಕನ ಅಗತ್ಯವೂ ಇತ್ತು .

  ಅಶೋಕ್‌ ಅದೃಷ್ಟಕ್ಕೆ ಅವರು ಕಾರ್ಮಿಕರ ಒಕ್ಕೂಟದ ನಾಯಕನಾದ ಸಂದರ್ಭದಲ್ಲೇ ಪ್ರೀಮಿಯರ್‌ ಸ್ಟುಡಿಯೋದಲ್ಲಿ ‘ಟಿಪ್ಪುಸುಲ್ತಾನ್‌’ ಸೀರಿಯಲ್‌ ಶೂಟಿಂಗ್‌ಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿತು. ನೊಂದ ಕಾರ್ಮಿಕರ ಧ್ವನಿಯಾಗಿ ಅಶೋಕ್‌ ಹೊರಹೊಮ್ಮಿದರು. ಅವರಿಗೆ ಪರಿಹಾರ ಕೊಡಿಸಿದರು. ನೊಂದವರ ನಾಯಕನಾಗುವುದೇ ನನ್ನ ಜೀವನದ ಪರಮೋದ್ದೇಶವಾಗಿತ್ತು ಎಂದರು. ಅದಕ್ಕೆ ಸ್ಪೂರ್ತಿಯಾಗಿದ್ದು ‘ಕ್ರಾಂತಿಯೋಗಿ ಬಸವಣ್ಣ’ ಚಿತ್ರದಲ್ಲಿ ಮಾಡಿದ ಬಸವಣ್ಣನ ಪಾತ್ರ ಎಂದರು.

  ಅನಂತರ ಅಶೋಕ್‌ ತಿರುಗಿ ನೋಡಲಿಲ್ಲ. ಕಾರ್ಮಿಕರಿಗೊಂದು ಕ್ಷೇಮನಿಧಿ, ಕನಿಷ್ಟ ವೇತನ ಇತ್ಯಾದಿ ಸ್ಕೀಮ್‌ಗಳನ್ನು ಜಾರಿಗೆ ತಂದರು. ರಾಜ್ಯದ ನಾಲ್ಕು ಸಾವಿರ ಸಿನಿಮಾ ಕಾರ್ಮಿಕರು ಅಶೋಕ್‌ ಆಜ್ಞಾನುವರ್ತಿಗಳಾದರು. ಕಾರ್ಮಿಕರ ಹಿತಾಸಕ್ತಿ ಕಾಪಾಡುವ ರಭಸದಲ್ಲಿ ಅಶೋಕ್‌ ನಿರ್ಮಾಪಕರ ಪಾಲಿಗೆ ಮುಳ್ಳಾದದ್ದೂ ಉಂಟು.

  ನಿರ್ಮಾಪಕರನ್ನು ಬಂಡವಾಳ ಶಾಹಿಗಳೆಂದು ಟೀಕಿಸುತ್ತಿದ್ದ ಅಶೋಕ್‌ ಸ್ವತಃ ನಿರ್ಮಾಪಕರಾಗಿ ನಮ್ಮೂರ ಹುಡ್ಗ ಚಿತ್ರ ನಿರ್ಮಿಸಿದ್ದೂ ಇನೊಂದು ವ್ಯಂಗ್ಯ. ಆ ಚಿತ್ರ ಫ್ಲಾಪ್‌ ಆಯಿತು. ಅದಕ್ಕೂ ಮುಂಚೆ ನಾಯಕತ್ವದ ರುಚಿ ಕಂಡಿದ್ದ ಅಶೋಕ್‌ ‘ಕನ್ನಡ ದೇಶ’ ಪಕ್ಷವನ್ನು ಕಟ್ಟಿ ತವರೂರು ಸಾತನೂರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೂ ಉಂಟು. ಅಲ್ಲಿ ಇಡುಗಂಟು ಕಳಕೊಂಡ ಮೇಲೆ ಮತ್ತೆ ಒಕ್ಕೂಟವೇ ಅವರನ್ನು ಕಾಪಾಡಿತು. ರಾಜಕಾರಣಿಯ ವೇಷ ತೊಡುವ ಹೊತ್ತಲ್ಲಿ , ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ -ನೀಡಿದ್ದ ಅಶೋಕ್‌ ಸದ್ದಿಲ್ಲದೆ, ಯಾರ ಅಪ್ಪಣೆಯನ್ನೂ ಕೇಳದೇ ಮತ್ತದೇ ಪೀಠದಲ್ಲಿ ಕುಳಿತರು.

  ಆಧುನಿಕ ಬಸವಣ್ಣನ ಕಾಯಕ ಮತ್ತದೇ ಪೀಠದಲ್ಲಿ ಮುಂದುವರಿಯುತ್ತಿದ್ದಂತೆ ಅಶೋಕ್‌ ಪತ್ನಿ ಕಲ್ಪನಾ ಚೀಟಿ ಹಗರಣದಲ್ಲಿ ಸಿಲುಕಿ ಪೊಲೀಸರ ಅತಿಥಿಯಾದರು. ಆಗ ಅಶೋಕ್‌ ತನಗೂ ಆಕೆಗೂ ಯಾವುದೇ ಸಂಬಂಧವಿಲ್ಲ ಎಂದು ಜಾರಿಕೊಂಡರು. ಸದ್ಯಕ್ಕೆ ಕಲ್ಪನಾ ಸೆರೆಮನೆಯಲ್ಲಿದ್ದಾರೆ. ಅಶೋಕ್‌ ಅಧಿಕಾರದ ಅರಮನೆಯಲ್ಲಿದ್ದಾರೆ. ಒಕ್ಕೂಟದ ಕಾರನ್ನು ಅವರೇ ಬಳಸಿಕೊಳ್ಳುತ್ತಿದ್ದಾರೆ. ರಾಜ್‌ ಗೈರು ಹಾಜರಿಯಿಂದ ಭಾವ ಶೂನ್ಯತೆ ಆವರಿಸಿರುವ ಕಾರಣ ಕಾರ್ಮಿಕರಿಗೆ ಕೆಲಸ ಮಾಡುವುದಕ್ಕೆ ಆಗ್ತಾ ಇಲ್ಲ ಎಂದು ಅವರ ಪರವಾಗಿ ತಾವೇ ಹೇಳಿಕೆ ನೀಡುತ್ತಾರೆ.

  ಕಾಯಕವೇ ಕೈಲಾಸ ಎಂದಿದ್ದ ಬಸವಣ್ಣ. ಆದರೆ ಆಧುನಿಕ ಬಸವಣ್ಣ ಭಾವನೆಯ ವಿಲಾಸದಲ್ಲಿ ಕಾಯಕ್ಕೆ ತಿಲಾಂಜಲಿ ಕೊಟ್ಟಿದ್ದಾನೆ ಅನ್ನುತ್ತಾರೆ ಅಶೋಕ್‌ ವಿರೋಧಿಗಳು.

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X