ಖ್ಯಾತ ಕ್ರಿಕೆಟಿಗ ಮನೀಶ್ ಪಾಂಡೆ- ನಟಿ ಆಶ್ರಿತಾ ಶೆಟ್ಟಿ ದಾಂಪತ್ಯದಲ್ಲಿ ಬಿರುಕು?
ಟೀಂ ಇಂಡಿಯಾದ ಮತ್ತೊಬ್ಬ ಆಟಗಾರ ತನ್ನ ಪತ್ನಿಯನ್ನು ದೂರಾಗಲು ಮುಂದಾಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಕ್ರಿಕೆಟಿಗ ಮನೀಶ್ ಪಾಂಡೆ ಹಾಗೂ ಪತ್ನಿ ಆಶ್ರಿತಾ ಶೆಟ್ಟಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ.
ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಸದ್ಯದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲೂ ವರದಿಯಾಗಿದೆ. ಆದರೆ ಅಧಿಕೃತವಾಗಿ ಯಾರೂ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ವಿಚ್ಛೇದನದ ಸುದ್ದಿಯನ್ನು ದಂಪತಿಗಳಲ್ಲಿ ಯಾರೂ ನಿರಾಕರಿಸಲಿಲ್ಲ. ಅಂದಹಾಗೆ ಮನೀಷ್ ಪಾಂಡೆ ತಮ್ಮ ಪತ್ನಿ ಆಶ್ರಿತಾ ಶೆಟ್ಟಿ ಜೊತೆಗಿನ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಡಿಲೀಟ್ ಮಾಡಿರುವುದು ಈ ವದಂತಿಗಳಿಗೆ ಕಾರಣವಾಗಿದೆ.

ಮನೀಷ್ ಮಾತ್ರವಲ್ಲ ಪತ್ನಿ ಆಶ್ರಿತಾ ಶೆಟ್ಟಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಿಂದ ಪತಿ ಮನೀಶ್ ಪಾಂಡೆ ಫೋಟೋಗಳನ್ನು ಸಹ ತೆಗೆದಿದ್ದಾರೆ. ಮಂಗಳೂರು ಮೂಲಕ ಆಶ್ರಿತಾ ಓದಿ ಬೆಳೆದಿದ್ದೆಲ್ಲ ಮುಂಬೈನಲ್ಲಿ. ಫ್ಯಾಶನ್ ಶೋಗಳಲ್ಲಿ ಭಾಗಿಯಾಗುತ್ತಿದ್ದ ಆಶ್ರಿತಾ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿದ್ದರು. 2012ರಲ್ಲಿ ತುಳು ಚಿತ್ರ 'ತೆಲಿಕೆದ ಬೊಳ್ಳಿ' ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ನಂತರ ನಟ ಸಿದ್ಧಾರ್ಥ್ ಜೊತೆ 'ಉದಯಂ ಎನ್ ಎಚ್-4', 'ಒರು ಕನ್ನಿಯಮ್ ಮೂನ್ ಕಲವಾನಿಕಾಲುಮ್', 'ಇಂದ್ರಜಿತ್' ಚಿತ್ರಗಳಲ್ಲಿ ನಟಿಸಿದ್ದರು.
2019ರಲ್ಲಿ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು. ಮದುವೆ ಬಳಿಕ ಆಶ್ರಿತಾ ಸಿನಿಮಾಗಳಿಂದ ದೂರಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದ ಚೆಲುವೆ ಆಗಾಗ್ಗೆ ಪತಿ ಜೊತೆಗಿನ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದರು. ಈಗ ಪತಿ ಮನೀಶ್ ಪಾಂಡೆ ಜೊತೆಗಿನ ಒಂದೇ ಒಂದು ಫೋಟೋ ಇಲ್ಲ ಎಂಬುದು ಗಮನಾರ್ಹ.
ಕೆಲ ವರ್ಷಗಳ ಹಿಂದೆ ಕ್ರಿಕೆಟ್ ಲೋಕದಲ್ಲಿ ಮನೀಷ್ ಪಾಂಡೆ ಕ್ರೇಜ್ ಜೋರಾಗಿತ್ತು. ಆರ್‌ಸಿಬಿ ಪರವಾಗಿಯೂ ಆಡಿದ್ದರು. ಐಪಿಎಲ್‌ನಲ್ಲಿ ಮೊದಲ ಶತಕ ಸಿಡಿಸಿದ ಆಟಗಾರ ಎನ್ನುವ ದಾಖಲೆಯೂ ಮನೀಷ್ ಹೆಸರಿನಲ್ಲಿದೆ. ಇದುವರೆಗೆ ಅವರು ಟೀಂ ಇಂಡಿಯಾ ಪರ 29 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಒಂದು ಶತಕ ಮತ್ತು 2 ಅರ್ಧ ಶತಕ ಸೇರಿ ಒಟ್ಟು 566 ರನ್ ಗಳಿಸಿದ್ದಾರೆ. 39 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು 709 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧ ಶತಕಗಳಿವೆ.

ಮನೀಷ್ ಪಾಂಡೆ ಐಪಿಎಲ್‌ನಲ್ಲಿ ಒಟ್ಟು 171 ಪಂದ್ಯಗಳನ್ನು ಆಡಿದ್ದಾರೆ. ಒಂದು ಶತಕ ಮತ್ತು 22 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಪುಣೆ ವಾರಿಯರ್ಸ್ ಇಂಡಿಯಾ, ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್‌ಜೈಂಟ್ಸ್, SRH ಮತ್ತು KKR ಪರ ಆಡಿದ್ದರು.
ಮನೀಷ್ ಕರ್ನಾಟಕದ ಪರ ಆಡುತ್ತಿದ್ದಾರೆ. ಅವರು 2021 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡದ ನಾಯಕರಾಗಿ ನೇಮಕಗೊಂಡರು. ವಿವಿಧ ದೇಶೀಯ ಟೂರ್ನಿ ಗಳಲ್ಲಿ ಕರ್ನಾಟಕ ತಂಡದ ನಾಯಕರಾಗಿದ್ದಾರೆ.


Click it and Unblock the Notifications











