For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಯ್ತು ಮತ್ತೊಂದು ತಾರಾ ಜೋಡಿ

  By Pavithra
  |
  ಮತ್ತೊಂದು ಸ್ಯಾಂಡಲ್‌ವುಡ್ ಜೋಡಿಗೆ ಕೂಡಿ ಬಂದ ಕಂಕಣ ಭಾಗ್ಯ..! | Filmibeat Kannada

  ಸಿನಿಮಾರಂಗದವರು ಅವರಂತೆಯೇ ಚಿತ್ರರಂಗದಲ್ಲಿರುವವರನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡರೆ ಜೀವನ ಚೆನ್ನಾಗಿರುತ್ತೆ, ಹೊಂದಾಣಿಕೆ ಇರುತ್ತೆ ಎನ್ನುವ ಮಾತಿದೆ. ಅಷ್ಟೇ ಅಲ್ಲದೆ ಕೆಲವರು ಚಿತ್ರರಂಗಕ್ಕೆ ಬಂದ ಕೆಲವೇ ದಿನಗಳಲ್ಲಿ ತಮಗೆ ಸೂಟ್ ಆಗುವವರನ್ನು ಸೆಲೆಕ್ಟ್ ಮಾಡಿಕೊಂಡಿರುತ್ತಾರೆ.

  ಇನ್ನು ಚಂದನವನದಲ್ಲಿಯೂ ಸಾಕಷ್ಟು ತಾರಾ ಜೋಡಿಗಳು ಇದೆ. ಇತರರಿಗೆ ಸ್ಪೂರ್ತಿ ಆಗುವಂತೆ ಅಂಬರೀಶ್-ಸುಮಲತಾ, ಭಾರತಿ-ವಿಷ್ಣುವರ್ಧನ್, ಯಶ್-ರಾಧಿಕಾ, ಇತ್ತೀಚಿಗಷ್ಟೆ ಮದುವೆ ಆದ ಚಿರಂಜೀವಿ ಸರ್ಜಾ-ಮೇಘನಾ ರಾಜ್ ಇದೇ ರೀತಿಯಲ್ಲಿ ಮತ್ತೊಂದು ತಾರಾ ಜೋಡಿ ಸಪ್ತಪದಿ ತುಳಿಯಲು ಸಿದ್ದತೆ ಮಾಡಿಕೊಂಡಿದೆ.

  ಹ್ಯಾಟ್ರಿಕ್ ಹೀರೋ ಶಿವಣ್ಣಗಾಗಿ ಬಿಗ್ ಬಜೆಟ್ ಸ್ಕ್ರಿಪ್ಟ್ ರೆಡಿ ಮಾಡಿದ್ದಾರೆ ಅಶ್ವಿನ್ಹ್ಯಾಟ್ರಿಕ್ ಹೀರೋ ಶಿವಣ್ಣಗಾಗಿ ಬಿಗ್ ಬಜೆಟ್ ಸ್ಕ್ರಿಪ್ಟ್ ರೆಡಿ ಮಾಡಿದ್ದಾರೆ ಅಶ್ವಿನ್

  ಕನ್ನಡ ಸಿನಿಮಾರಂಗದಲ್ಲಿಯೇ ಗುರುತಿಸಿಕೊಂಡಿರುವ ಇವರಿಬ್ಬರು ಇನ್ನು ಕೆಲವೇ ದಿನಗಳಲ್ಲಿ ಸತಿ-ಪತಿಯರಾಗಲಿದ್ದಾರೆ. ಹಾಗಾದರೆ ಯಾರು ಆ ತಾರಾ ಜೋಡಿ? ಇಬ್ಬರ ನಡುವೆ ಪ್ರೀತಿ ಮೂಡಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

  ಉಪ್ಪಿಟ್ಟು ತಿಂದು ಪ್ರೀತಿಯಲ್ಲಿ ಬಿದ್ದ ನಟ

  ಉಪ್ಪಿಟ್ಟು ತಿಂದು ಪ್ರೀತಿಯಲ್ಲಿ ಬಿದ್ದ ನಟ

  ಅಶ್ವಿನ್ ರಾವ್ ಪಲ್ಲಕ್ಕಿ.. ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯ ಮಾಡಿ ಗುರುತಿಸಿಕೊಂಡಿರುವ ನಟ. 'ಕಿರಿಕ್ ಪಾರ್ಟಿ'ಯಿಂದ ಮನೆ ಮಾತಾಗಿರುವ ಅಶ್ವಿನ್ ರಾವ್ ಮದುವೆ ಆಗಲು ಸಿದ್ದತೆ ಮಾಡಿಕೊಂಡಿದ್ದಾರೆ. ವಿಶೇಷ ಎಂದರೆ ಉಪ್ಪಿಟ್ಟು ತಿಂದು ಪ್ರೀತಿಯಲ್ಲಿ ಬಿದ್ದರಂತೆ.

  ನಟಿ ಅನ್ವಿತಾ ಕೈ ಹಿಡಿಯಲಿರುವ ನಟ

  ನಟಿ ಅನ್ವಿತಾ ಕೈ ಹಿಡಿಯಲಿರುವ ನಟ

  ನಟ ಅಶ್ವಿನ್ ರಾವ್ ಪಲ್ಲಕ್ಕಿ ಮದುವೆ ಆಗುತ್ತಿರುವುದು ಕೋಸ್ಟಲ್ ವುಡ್ ನಲ್ಲಿ ಗುರುತಿಸಿಕೊಂಡಿರುವ ನಟಿಯ ಜೊತೆ. 'ದಂಡ್', 'ನಿರೆಲ್' ಚಿತ್ರಗಳಲ್ಲಿ ನಾಯಕಿ ಆಗಿರುವ ಅನ್ವಿತಾ ಸಾಗರ್ ಜೊತೆ ಇನ್ನು ಕೆಲವೇ ದಿನಗಳಲ್ಲಿ ಅಶ್ವಿನ್ ಸಪ್ತಪದಿ ತುಳಿಯಲಿದ್ದಾರೆ.

  ಮತ್ತೊಂದು ತಾರಾ ಜೋಡಿಯ ಕಲ್ಯಾಣ

  ಮತ್ತೊಂದು ತಾರಾ ಜೋಡಿಯ ಕಲ್ಯಾಣ

  ಸಿನಿಮಾದ ಮುಹೂರ್ತವೊಂದರಲ್ಲಿ ಇಬ್ಬರ ಪರಿಚಯವಾಗಿದ್ದು, ಕೆಲವು ದಿನಗಳು ಸ್ನೇಹಿತರಾಗಿದ್ದ ಅಶ್ವಿನ್ ಮತ್ತು ಅನ್ವಿತಾ ಪರಸ್ಪರ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಸದ್ಯ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಇಬ್ಬರು ಕೆಲವೇ ದಿನಗಳಲ್ಲಿ ಮದುವೆ ಆಗುವುದಾಗಿ ತಿಳಿಸಿದ್ದಾರೆ.

  ಗುಟ್ಟನ್ನು ರಟ್ಟು ಮಾಡಿದ ಜೋಡಿ

  ಗುಟ್ಟನ್ನು ರಟ್ಟು ಮಾಡಿದ ಜೋಡಿ

  ಅಶ್ವಿನ್ ರಾವ್ ಪಲ್ಲಕ್ಕಿ ಕಥೆಯೊಂದು ಶುರುವಾಗಿದೆ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ. ಚಿತ್ರತಂಡ ಸಿನಿಮಾ ಪ್ರಮೋಷನ್ ಕೆಲಸವನ್ನು ಶುರುಮಾಡಿದ್ದು ಇದೇ ಸಂದರ್ಭದಲ್ಲಿ ಅಶ್ವಿನ್ ಮತ್ತು ಅನ್ವಿತಾ ತಮ್ಮ ಪ್ರೀತಿ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.

  English summary
  Kannada actor Ashwin Rao Pallakki will be married to Tulu actress Anvitha Sagar. Ashwin Rao Pallakki has acted in Kirik Party movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X