For Quick Alerts
  ALLOW NOTIFICATIONS  
  For Daily Alerts

  ಜೇಮ್ಸ್, ಲಕ್ಕಿಮ್ಯಾನ್ ವೀಕ್ಷಿಸದೇ ಇದ್ದ ಅಶ್ವಿನಿ ಪುನೀತ್ ರಾಜ್‌ಕುಮಾರ್‌ರಿಂದ ಕೊನೆಗೂ ಸಿನಿಮಾ ವೀಕ್ಷಣೆ

  |

  ಪುನೀತ್ ರಾಜ್‌ಕುಮಾರ್ ಅಗಲಿಕೆಯ ನಂತರದ ಕೆಲ ದಿನಗಳ ಕಾಲ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೆಚ್ಚಾಗಿ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ತಾ ಇರಲಿಲ್ಲ. ರಾಜ್ಯ ಸರ್ಕಾರ ಏರ್ಪಡಿಸಿದ್ದ ಅಪ್ಪು ನಮನ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ದುಃಖ ತಡೆಯಲಾರದೇ ಕಾರ್ಯಕ್ರಮದ ಮಧ್ಯದಲ್ಲಿಯೇ ಹೊರನಡೆದಿದ್ದದರು. ಹೀಗೆ ಅಪ್ಪು ಅಗಲಿಕೆಯ ನೋವಿನಲ್ಲಿದ್ದ ಅಶ್ವಿನಿ ಅವರಿಗೆ ಫೆಬ್ರವರಿ ತಿಂಗಳಿನಲ್ಲಿ ತಮ್ಮ ತಂದೆ ಭಾಗಮನೆ ರೇವನಾಥ್ ನಿಧನ ಮತ್ತಷ್ಟು ನೋವನ್ನು ಉಂಟು ಮಾಡಿತ್ತು.

  ಪುನೀತ್ ರಾಜ್‌ಕುಮಾರ್ ಇರುವಾಗಲೇ ಪಿಆರ್‌ಕೆ ಪ್ರೊಡಕ್ಷನ್ಸ್ ಸಂಸ್ಥೆಯ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಮೇಲೆ ಪಿಆರ್‌ಕೆ ಸಂಸ್ಥೆಯ ಸಂಪೂರ್ಣ ಜವಾಬ್ದಾರಿ ಬಿದ್ದಿತ್ತು. ಹೀಗಾಗಿಯೇ ಅವರು ನವೆಂಬರ್ 16ರಂದು ಫೇಸ್‌ಬುಕ್ ಖಾತೆ ತೆರೆದು ಸಾಮಾಜಿಕ ಜಾಲತಾಣಕ್ಕೆ ಪ್ರವೇಶಿಸಿದರು. ಆ ದಿನದಂದು ಅಪ್ಪು ಅಭಿಮಾನಿಗಳ ಕುರಿತು ವಿಶೇಷವಾದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಪ್ಪು ಅಗಲಿಕೆ ಸಂದರ್ಭದಲ್ಲಿ ಎಲ್ಲಿಯೂ ತಾಳ್ಮೆ ಕಳೆದುಕೊಳ್ಳದೇ, ಅಹಿತಕರ ಘಟನೆ ನಡೆಯದಂತೆ ಜವಾಬ್ದಾರಿಯುತವಾಗಿ ನಡೆದುಕೊಂಡ ಅಭಿಮಾನಿಗಳು ಹಾಗೂ ಜನ ಸಾಮಾನ್ಯರಿಗೆ ಹಾಗೂ ಅಪ್ಪು ಅವರಂತೆ ನೇತ್ರದಾನಕ್ಕೆ ಮುಂದಾದವರಿಗೆ ತಮ್ಮ ಹಾಗೂ ತಮ್ಮ ಕುಟುಂಬದ ಪರಾವಾಗಿ ಧನ್ಯವಾದ ಸಲ್ಲಿಸಿದ್ದರು.

  ಹೀಗೆ ಸಾಮಾಜಿಕ ಜಾಲತಾಣಕ್ಕೆ ಬಂದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಪ್ಪು ನಿಧನದ ನಂತರ ಬಿಡುಗಡೆಗೊಂಡ ಜೇಮ್ಸ್ ಹಾಗೂ ಲಕ್ಕಿಮ್ಯಾನ್ ಈ ಎರಡೂ ಚಿತ್ರಗಳನ್ನೂ ವೀಕ್ಷಿಸಲು ಚಿತ್ರಮಂದಿರಕ್ಕೆ ಬಂದಿರಲಿಲ್ಲ. ಹೌದು, ಈ ಚಿತ್ರಗಳ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಮಾಡಿದ್ದ ಅಶ್ವಿನ್ ಪುನೀತ್ ರಾಜ್‌ಕುಮಾರ್ ಥಿಯೇಟರ್‌ಗೆ ಬಂದಿರಲಿಲ್ಲ. ಆದರೆ, ಇದೀಗ ಅಶ್ವಿನಿ ಅವರು ಕೊನೆಗೂ ಅಪ್ಪು ಅಭಿನಯದ ಚಿತ್ರವೊಂದನ್ನು ಚಿತ್ರಮಂದಿರದಲ್ಲಿ ಕುಳಿತು ವೀಕ್ಷಿಸಿದ್ದಾರೆ.

  ಬೆಟ್ಟದ ಹೂ ವೀಕ್ಷಿಸಿದ ಅಶ್ವಿನಿ ಪುನೀತ್

  ಬೆಟ್ಟದ ಹೂ ವೀಕ್ಷಿಸಿದ ಅಶ್ವಿನಿ ಪುನೀತ್

  ಇಂದು ( ಸೆಪ್ಟೆಂಬರ್ 28 ) ಮೈಸೂರಿಗೆ ಚಲನಚಿತ್ರೋತ್ಸವ ಉದ್ಘಾಟನೆಗೆ ಆಗಮಿಸಿದ್ದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ನಗರದ ಐನಾಕ್ಸ್ ಮಲ್ಟಿಪ್ಲೆಕ್ಸ್‌ನಲ್ಲಿ ಪುನೀತ್ ಬಾಲನಟನಾಗಿ ನಟಿಸಿ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದ ಬೆಟ್ಟದ ಹೂ ಚಿತ್ರವನ್ನು ವೀಕ್ಷಸಿದ್ದಾರೆ. ಮೈಸೂರಿನ ಶಕ್ತಿಧಾಮದ ಮಕ್ಕಳೂ ಸಹ ಇದೇ ಪ್ರದರ್ಶನದಲ್ಲಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

  ಯುವ ದಸರಾ ಉದ್ಘಾಟನೆಗೂ ಸಹ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮುಖ್ಯ ಅತಿಥಿ

  ಯುವ ದಸರಾ ಉದ್ಘಾಟನೆಗೂ ಸಹ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮುಖ್ಯ ಅತಿಥಿ

  ಇನ್ನು ಇದೇ ದಿನ ಸಂಜೆ ಆರು ಗಂಟೆಗೆ ಯುವ ದಸರಾ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಈ ಕಾರ್ಯಕ್ರಮಕ್ಕೂ ಸಹ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮುಖ್ಯ ಅತಿಥಿಯಾಗಿ ತೆರಳಲಿದ್ದಾರೆ. ಇಂದು ಆರಂಭವಾಗಲಿರುವ ಯುವ ದಸರಾ ಅಕ್ಟೋಬರ್ 3ರವರೆಗೂ ನಡೆಯಲಿದೆ

  ಅಪ್ಪು ನಮನ ಕಾರ್ಯಕ್ರಮ

  ಅಪ್ಪು ನಮನ ಕಾರ್ಯಕ್ರಮ

  ಇನ್ನು ಯುವ ದಸರಾ ಉದ್ಘಾಟನೆಯಾದ ನಂತರ ಏಳು ಗಂಟೆಗೆ ಅಪ್ಪು ನಮನ ಕಾರ್ಯಕ್ರಮ ಆರಂಭವಾಗಲಿದ್ದು, ಈ ಕಾರ್ಯಕ್ರಮದ ನಿರೂಪಣೆಯನ್ನು ಅಪ್ಪು ಅಭಿಮಾನಿ, ನಿರೂಪಕಿ ಅನುಶ್ರೀ ನಡೆಸಿಕೊಡಲಿದ್ದಾರೆ ಹಾಗೂ ಈ ಕಾರ್ಯಕ್ರಮದಲ್ಲಿ ಗಾಯಕರಾದ ವಿಜಯ್ ಪ್ರಕಾಶ್, ಗುರು ಕಿರಣ್ ಹಾಗೂ ಕುನಾಲ್ ಗಾಂಜಾವಾಲಾ ಅಪ್ಪು ಅಭಿನಯದ ಚಿತ್ರಗಳ ಹಾಡುಗಳನ್ನು ಹಾಡಿ ರಂಜಿಸಲಿದ್ದಾರೆ.

  English summary
  Ashwini Puneeth Rajkumar watched Appu starrer Bettada Hoovu movie in Mysuru Inox. Read on
  Wednesday, September 28, 2022, 16:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X